ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UPDATED: ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ ಇನ್ನಿಲ್ಲ

ಕ್ಯಾನ್ಸರ್ ನಿಂದಾಗಿ ಭಾರೀ ನಿತ್ರಾಣರಾಗಿದ್ದ ಅವರ ಫೋಟೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ಸ್ಮರಿಸಬಹುದು.

|
Google Oneindia Kannada News

ಮುಂಬೈ, ಏಪ್ರಿಲ್ 27: ಬಾಲಿವುಡ್ ನ ಹಿರಿಯ ನಟ ವಿನೋದ್ ಖನ್ನಾ (70) ಅವರು ಗುರುವಾರ ವಿಧಿವಶರಾಗಿದ್ದಾರೆ. ದೀರ್ಘಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಗುರುವಾರ ವಿಧಿವಶರಾಗಿದ್ದಾರೆ.

ಬ್ಲಾಡರ್ ಕ್ಲಾಸಿನೋಮಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ, ಮುಂಬೈನಲ್ಲಿರುವ ಸರ್. ಎಚ್.ಎನ್. ರಿಲಯನ್ಸ್ ಫೌಂಡೇಷನ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಗುರುವಾರ 11:20ರ ವೇಳೆಗೆ ನಿಧನರಾದರು ಎಂದು ಮೂಲಗಳು ತಿಳಿಸಿವೆ.

ಕ್ಯಾನ್ಸರ್ ನಿಂದಾಗಿ ಭಾರೀ ನಿತ್ರಾಣರಾಗಿದ್ದ ಅವರ ಫೋಟೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ಸ್ಮರಿಸಬಹುದು.[ನಟ, ಬಿಜೆಪಿ ಸಂಸದ ವಿನೋದ್ ಖನ್ನಾ ಆಸ್ಪತ್ರೆಗೆ ದಾಖಲು!]

Veteran Actor Vinod Khanna No More

ಸಕ್ರಿಯ ರಾಜಕಾರಣದಲ್ಲೂ ಸಾಧನೆಗೈದಿದ್ದ ಅವರು, ಗುರುದಾಸ್ ಪುರದಿಂದ (ಪಂಜಾಬ್) ಬಿಜೆಪಿ ಪರವಾಗಿ ಸ್ಪರ್ಧಿಸಿ ಸಂಸದರೂ ಆಗಿದ್ದರು. ಇದೀಗ, ಅವರ ನಿಧನದಿಂದ ಆ ಸ್ಥಾನ ತೆರವಾಗಿದೆ.

ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಅವರು, 1968ರಲ್ಲಿ ಮನ್ ಕೀ ಮೀಟ್ ಎಂಬ ಚಿತ್ರದಿಂದ ನಟರಾಗಿ ಪರಿಚಿತರಾದರು. ಹಿಂದಿ ಚಿತ್ರರಂಗದ ಮತ್ತೊಬ್ಬ ಹಿರಿಯ ತಾರೆ ದಿವಂಗತ ಸುನಿಲ್ ದತ್ ಅವರು ನಾಯಕರಾಗಿದ್ದ ಆ ಚಿತ್ರದಲ್ಲಿ ಅವರು ಖಳನಟನಾಗಿ ಅಭಿನಯಿಸಿದ್ದರು.

ಆನಂತರ, ಕೆಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, ಹಮ್ ತುಮ್ ಔರ್ ವೋ (1971) ಚಿತ್ರದಲ್ಲಿ ಹೀರೋ ಆದ ಅವರಿಗೆ ಆ ಚಿತ್ರ ಅದೃಷ್ಟ ಬಾಗಿಲು ತೆರೆಯಿತು. ಅಲ್ಲಿಂದ ಹಿಂದಿರುಗಿ ನೋಡಲಿಲ್ಲ. ಒಂದರ ಹಿಂದೊಂದರಂತೆ ಸೂಪರ್ ಹಿಟ್ ಚಿತ್ರಗಳನ್ನು ನೀಡುತ್ತಾ ಬಂದ ಅವರು ಬಾಲಿವುಡ್ ನ ಆಗಿನ ಕಾಲದ ಸ್ಟಾರ್ ನಟರಾದ ರಾಜೇಶ್ ಖನ್ನಾ, ಧರ್ಮೇಂದ್ರ ಅವರ ಸಾಲಿಗೆ ಸಾಲಿದರು.

ಓಶೋ ಭಕ್ತರೂ ಆಗಿದ್ದರು:

1980ರ ದಶಕದಲ್ಲಿ ಉತ್ತಮ ಅವಕಾಶಗಳು ಕೈಯ್ಯಲ್ಲಿದ್ದರೂ ಅಧ್ಯಾತ್ಮಿಕತೆಯ ಕಡೆಗೆ ಒಲವು ಹೆಚ್ಚಿಸಿಕೊಂಡ ಅವರು, ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಅಧ್ಯಾತ್ಮಿಕ ಗುರು ಓಶೋ ರಜನೀಶ್ ಅವರ ಅನುಯಾಯಿಯಾಗಿದ್ದರು. ಐದು ವರ್ಷಗಳ ನಂತರ ಅವರು, ಇನ್ಸಾಫ್ ಚಿತ್ರದ ಮೂಲಕ ಮತ್ತೆ ಚಿತ್ರರಂಗ ಪ್ರವೇಶಿಸಿದ್ದರು.

ಸಾಂಸಾರಿಕ ಜೀವನ:

1971ರಲ್ಲಿ ಗೀತಾಂಜಲಿ ಅವರನ್ನು ಮದುವೆಯಾಗಿದ್ದ ಖನ್ನಾ ಅವರಿಗೆ ರಾಹುಲ್ ಖನ್ನಾ ಹಾಗೂ ಅಕ್ಷಯ್ ಖನ್ನಾ (ಚಿತ್ರ ನಟ) ಎಂಬ ಪುತ್ರರನ್ನು ಪಡೆದಿದ್ದಾರೆ. ಆನಂತರ, ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಅವರು ಗೀತಾಂಜಲಿ ಅವರಿಗೆ ವಿಚ್ಛೇದನ ನೀಡಿದರು. ಆನಂತರ, ಕವಿತಾ ಎಂಬುವರನ್ನು ಮದುವೆಯಾಗಿದ್ದರು. ಇವರಿಗೆ ಸಾಕ್ಷಿ ಹಾಗೂ ಶ್ರದ್ಧಾ ಎಂಬಿಬ್ಬರು ಮಕ್ಕಳಿದ್ದಾರೆ.

English summary
Bollywood senior actor and BJP leader Vinod Khanna expiered on April 27, 2017 in Mumbai. He was suffering from cancer since long back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X