ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮಾರ್ಟ್ ಸಿಟಿ : ಕರ್ನಾಟಕಕ್ಕೆ 6 ಮಿಕ್ಕ ರಾಜ್ಯಕ್ಕೆ ಎಷ್ಟು?

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 27: ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಗಳಲ್ಲಿ ಒಂದೆನಿಸಿರುವ ದೇಶದಲ್ಲಿ ಸ್ಮಾರ್ಟ್‌ ಸಿಟಿ ನಗರಗಳ ನಿರ್ಮಾಣ ಯೋಜನೆಗೆ ಆಯ್ಕೆಯಾಗಿರುವ ನಗರಗಳ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ ವೆಂಕಯ್ಯ ನಾಯ್ಡು ಅವರು ಗುರುವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಕರ್ನಾಟಕಕ್ಕೆ 6 ಸ್ಮಾರ್ಟ್ ಸಿಟಿಗಳು ಸಿಕ್ಕಿವೆ.

ಸ್ಮಾರ್ಟ್ ಸಿಟಿ ನಿರ್ಮಿಸಲು ಕೇಂದ್ರ ಸಚಿವ ಸಂಪುಟದಿಂದ ಕಳೆದ ಏಪ್ರಿಲ್ ತಿಂಗಳಿನಲ್ಲಿ ಒಪ್ಪಿಗೆ ನೀಡಲಾಗಿತ್ತು. ಕರ್ನಾಟಕ ಒಟ್ಟು 11 ನಗರಗಳನ್ನು ಆಯ್ಕೆ ಮಾಡಲು ಪ್ರಸ್ತಾವನೆ ಕಳಿಸಿತ್ತು. ಈ ಪೈಕಿ ಆರು ನಗರ/ ಪಟ್ಟಣಗಳಲ್ಲಿ ಸ್ಮಾರ್ಟ್ ಸಿಟಿ ತಲೆ ಎತ್ತಲಿವೆ. [ಸ್ಮಾರ್ಟ್ ಸಿಟಿಯಾಗಲಿರುವ 98 ನಗರಗಳ ಪಟ್ಟಿ ]

ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ 98 ನಗರಗಳ ಪಟ್ಟಿಯನ್ನು ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ವೆಂಕಯ್ಯ ನಾಯ್ಡು ಬಿಡುಗಡೆಗೊಳಿಸಿದ್ದಾರೆ. [ಗ್ರಾಮ ದತ್ತು ಪಡೆದ ವೆಂಕಯ್ಯ ನಾಯ್ಡು]

ಮಂಗಳೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಮತ್ತು ತುಮಕೂರು ನಗರಗಳನ್ನು ರಾಜ್ಯ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಂತೆ ಕೇಂದ್ರ ಸರ್ಕಾರ ಈ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿಸಿದೆ.

ಕರ್ನಾಟಕದ 6 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಆಗಿದ್ದರೆ, ಯೋಜನೆಯಲ್ಲಿ ಉತ್ತರ ಪ್ರದೇಶ ಮತ್ತು ತಮಿಳುನಾಡಿಗೆ ಅಗ್ರ ಸ್ಥಾನ ಸಿಕ್ಕಿದೆ. ಉತ್ತರ ಪ್ರದೇಶದ 13 ಮತ್ತ ತಮಿಳುನಾಡಿನ 12 ನಗರಗಳು ಯೋಜನೆಗೆ ಆಯ್ಕೆಯಾಗಿವೆ. ಸ್ಮಾರ್ಟ್ ಸಿಟಿ ಅಧಿಕೃತ ವೆಬ್ ತಾಣ ಲಿಂಕ್ ಇಲ್ಲಿದೆ

ಉತ್ತರಪ್ರದೇಶಕ್ಕೆ 13 ಸ್ಮಾರ್ಟ್ ಸಿಟಿ

ಉತ್ತರಪ್ರದೇಶಕ್ಕೆ 13 ಸ್ಮಾರ್ಟ್ ಸಿಟಿ

ಉತ್ತರ ಪ್ರದೇಶದ 13, ತಮಿಳುನಾಡಿನ 12, ಮಹಾರಾಷ್ಟ್ರ 10, ಮಧ್ಯಪ್ರದೇಶ 7, ಗುಜರಾತ್ ಹಾಗೂ ಕರ್ನಾಟಕ 6, ಪಶ್ಚಿಮ ಬಂಗಾಲ ಹಾಗೂ ರಾಜಸ್ಥಾನ 4, ಬಿಹಾರ, ಪಂಜಾಬ್, ಆಂಧ್ರಪ್ರದೇಶದಲ್ಲಿ ತಲಾ 3 ನಗರಗಳನ್ನು ನಗರಾಭಿವೃದ್ಧಿ ಇಲಾಖೆ ಆಯ್ಕೆ ಮಾಡಿದೆ.

ಯಾವ ರಾಜ್ಯಕ್ಕೆ ಎಷ್ಟು ಸ್ಮಾರ್ಟ್ ಸಿಟಿಗಳು

ಯಾವ ರಾಜ್ಯಕ್ಕೆ ಎಷ್ಟು ಸ್ಮಾರ್ಟ್ ಸಿಟಿಗಳು

ಉಳಿದಂತೆ ಚತ್ತೀಸ್ ಗಢ ಹಾಗೂ, ಒಡಿಶಾ, ತೆಲಂಗಾಣ, ತ್ರಿಪುರ, ಉತ್ತರಾಖಂಡ್, ಹರ್ಯಾಣ 2,

ಅಂಡಮಾನ್ ಅಂಡ್ ನಿಕೋಬಾರ್ ದ್ವೀಪ, ಅರುಣಾಚಲ ಪ್ರದೇಶ, ಅಸ್ಸಾಂ, ಚಂಡೀಗಢ, ಡಿಮನ್ ಅಂಡ್ ಡಿಯು, ದಾದರ್ ಹಾಗೂ ನಗರ್ ಹವೇಲಿ, ದೆಹಲಿ, ಗೋವಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕೇರಳ, ಲಕ್ಷದೀಪ್, ಮಣಿಪುರ, ಮೇಘಾಲಯ, ಮಿಜೋರಾಮ್, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂ ತಲಾ 1 ನಗರವನ್ನು ಪಡೆದಿದೆ.

ನಿಧಿ ಸಂಗ್ರಹ ಹೂಡಿಕೆ ಹೇಗೆ?

ಸಚಿವ ಎಂ ವೆಂಕಯ್ಯ ನಾಯ್ಡು ಅವರ ಸುದ್ದಿಗೋಷ್ಠಿಯ ವಿವರ

ಅಂದಾಜು ಖರ್ಚು ವೆಚ್ಚ?

ಅಂದಾಜು ಖರ್ಚು ವೆಚ್ಚ?

100 ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಸುಮಾರು 10 ವರ್ಷ ಕಾಲಾವಧಿ ಬೇಕಾಗುತ್ತದೆ. ಸುಮಾರು 45 ಲಕ್ಷ ಕೋಟಿ ರು ವ್ಯಯಿಸಬೇಕಾಗುತ್ತದೆ. ಸರ್ಕಾರಿ ಮತ್ತು ಸಾರ್ವಜನಿಕ ಸಹಭಾಗಿತ್ವ(PPP ಮಾದರಿ)ದಲ್ಲಿ ಯೋಜನೆ ಸಾಕಾರಗೊಳ್ಳಲಿದೆ.

JNNRUM ಹೆಸರು ಬದಲು

JNNRUM ಹೆಸರು ಬದಲು

Atal Mission for Rejuvenation and Urban Transformation (AMRUT) ಹೆಸರಿನಲ್ಲಿ 50,000 ಕೋಟಿ ರು ವೆಚ್ಚದಲ್ಲಿ ನಗರಗಳು ಸ್ಮಾರ್ಟ್ ಆಗಲಿವೆ. Jawaharlal Nehru National Urban Renewal Mission (JNNURM) ಅಡಿಯಲ್ಲಿ ಜಾರಿಯಲ್ಲಿರುವ ಅಭಿವೃದ್ಧಿ ಕಾರ್ಯಗಳು 2017ರ ತನಕ ಹಾಗೆ ಮುಂದುವರೆಯಲಿದೆ. AMRUT ಇದರ ಹೊಸ ಅವತಾರವಾಗಿ ಮುಂದಿನ ದಿನಗಳಲ್ಲಿ ಬದಲಾಗಲಿದೆ.

English summary
Union Minister of Urban Development, Housing and Urban Poverty Alleviation and Parliamentary Affairs M Venkaiah Naidu today released list of 98 cities for Smart City project which includes four cities from Karnataka. Over all 100 smart cities have been distributed among the States and UTs on the basis of an equitable criteria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X