ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಹೋಗುವುದು ಸರಳ, ವಾಪಸ್ ಬರುವುದು ಕಷ್ಟ : ಉಜ್ಮಾ

ಪಾಕಿಸ್ತಾನ-ಭಾರತ ದ್ವೇಷ, ಅದರ ನಡುವೆ ಅರಳಿದ ಪ್ರೇಮ ಕಥೆ, ಜತೆಗೆ ದ್ವೇಷ ವಾತಾವರಣದಲ್ಲಿ ಅನುಭವಿಸಿದ ಕಹಿ ಘಟನೆಗಳು, ಇನ್ನೇನು ಎಲ್ಲಾ ಮುಗಿಯಿತು ಎಂದಾಗ ಭಾರತದ ರಾಯಭಾರ ಕಚೇರಿ ನೀಡಿದ ಸಹಾಯ.. ಇದು ಉಜ್ಮಾ ಕಥೆ.

By Sachhidananda Acharya
|
Google Oneindia Kannada News

ನವದೆಹಲಿ, ಮೇ 26: ಪಾಕಿಸ್ತಾನದ ಯುವಕನೊಂದಿಗೆ ಪ್ರೀತಿಗೆ ಬಿದ್ದು ಆತನನ್ನು ನೋಡಲು ಅಲ್ಲಿಗೆ ಹೋದ ಭಾರತೀಯ ಯುವತಿ ಉಜ್ಮಾ. ಆದರೆ ಅಲ್ಲಿ ಬಲವಂತದ ಮದುವೆಗೆ ಒಳಪಡಬೇಕಾಯಿತು. ಬೆನ್ನಿಗೆ ಹಿಂಸೆಯನ್ನೂ ಅನುಭವಿಸಿದರು. ಇದೀಗ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಾಸಾಗಿದ್ದಾರೆ.

ಪಾಕಿಸ್ತಾನ-ಭಾರತ ದ್ವೇಷ, ಅದರ ನಡುವೆ ಅರಳಿದ ಪ್ರೇಮ ಕಥೆ, ಜತೆಗೆ ದ್ವೇಷ ವಾತಾವರಣದಲ್ಲಿ ಅನುಭವಿಸಿದ ಕಹಿ ಘಟನೆಗಳು, ಇನ್ನೇನು ಎಲ್ಲಾ ಮುಗಿಯಿತು ಎಂದಾಗ ಭಾರತದ ರಾಯಭಾರ ಕಚೇರಿ ನೀಡಿದ ಸಹಾಯ.. ಹೀಗೆ ಹಲವು ಸ್ತರಗಳ ಬದುಕನ್ನು ನೋಡಿ ವಾಪಸ್ಸು ಬಂದಿದ್ದಾರೆ ಉಜ್ಮಾ. ಅಂದ ಹಾಗೆ ಉಜ್ಮಾರ ದುರಂತ ಕಥೆ ಸುಖಾಂತ್ಯವಾಗಿದೆ.

ಪ್ರೇಮಾಂಕುರ

ಪ್ರೇಮಾಂಕುರ

ಪಾಕಿಸ್ತಾನದ ಯುವಕ ತಾಹಿರ್ ಜತೆ ನವದೆಹಲಿಯ ಉಜ್ಮಾಗೆ ಪ್ರೇಮಾಂಕುರವಾಗಿತ್ತು. ಆತನನ್ನು ನೋಡಲು ಏಪ್ರಿಲ್ ತಿಂಗಳಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದರು. ಆದರೆ ಹೋದವರೇ ಅಲ್ಲಿ ಸಿಕ್ಕಿ ಹಾಕಿಕೊಂಡುಬಿಟ್ಟರು. ಮೊದಲಿಗೆ ತನಗೆ ಮದುವೆಯಾಗಿಲ್ಲ ಎಂದು ಹೇಳಿದ್ದ ತಾಹಿರ್ ಗೆ ಈ ಮೊದಲೇ ಮದುವೆಯಾಗಿ ಆತನಿಗೆ ನಾಲ್ಕು ಜನ ಮಕ್ಕಳಿದ್ದರು. ಉಜ್ಮಾಗೆ ಪಾಕಿಸ್ತಾನಕ್ಕೆ ಹೋದಾಗಲೇ ಈ ಸತ್ಯ ಗೊತ್ತಾಗಿದ್ದು.

ಬಲವಂತದ ಮದುವೆ

ಬಲವಂತದ ಮದುವೆ

ಭಾರತಕ್ಕೆ ಬರುತ್ತಿದ್ದಂತೆ ಮಾತನಾಡಿರುವ ಉಜ್ಮಾ, "..ನಾನು ಪ್ರೀತಿಯಿಂದಲೇ ತಾಹಿರ್ ನನ್ನು ನೋಡಲು ಪಾಕಿಸ್ತಾನಕ್ಕೆ ಹೋಗಿದ್ದೆ. ಆದರೆ, ಅಲ್ಲಿ ನನ್ನನ್ನು ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಬಲವಂತವಾಗಿ ನನ್ನನ್ನು ತಾಹಿರ್ ಗೆ ಮದುವೆ ಮಾಡಲಾಯಿತು. ಅಲ್ಲದೆ ನನ್ನನ್ನು ಹೊಡೆದು, ಬಡಿದು ಹಿಂಸಿಸಲಾಯಿತು," ಎಂದಿದ್ದಾರೆ.

ಧೂತಾವಾಸ ಕಚೇರಿಗೆ ದೂರು

ಧೂತಾವಾಸ ಕಚೇರಿಗೆ ದೂರು

ತಮ್ಮನ್ನು ಗನ್ ಪಾಯಿಂಟ್ ನಡಿ ಪಾಕಿಸ್ತಾನದ ಯುವಕನೊಬ್ಬನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ನನಗೆ ಸಹಾಯ ಮಾಡಿ ಎಂದು ಇದೇ ತಿಂಗಳ ಆರಂಭದಲ್ಲಿ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಧೂತಾವಾಸ ಕಚೇರಿಗೆ ದೂರು ಸಲ್ಲಿಸಿದ್ದರು ಉಜ್ಮಾ. ಈಕೆಯ ದೂರಿನ ಮೇರೆಗೆ ಕಾರ್ಯಪ್ರವೃತ್ತವಾದ ಭಾರತೀಯ ವಿದೇಶಾಂಗ ಇಲಾಖೆ ಅಧಿಕಾರಿಗಳ ತಂಡ ಯುವತಿಗೆ ಪಾಕಿಸ್ತಾನದಲ್ಲಿನ ಧೂತಾವಾಸದಲ್ಲೇ ಉಳಿದುಕೊಳ್ಳಲು ಅನುಕೂಲ ಕಲ್ಪಿಸಿಕೊಟ್ಟಿತ್ತು.
ನಂತರ ಇಸ್ಲಾಮಾಬಾದ್ ನ ನ್ಯಾಯಾಲಯದಲ್ಲಿ ಆಕೆ ದಾವೆಯನ್ನೂ ಹೂಡಿ ಕಾನೂನು ಸಮರ ಗೆದ್ದು ಆಕೆ ಭಾರತಕ್ಕೆ ಹಿಂದಿರುಗಿದ್ದಾರೆ.

ಭಾರತಕ್ಕೊಂದು ನಮನ

ಭಾರತಕ್ಕೊಂದು ನಮನ

ಪಾಕಿಸ್ತಾನ ನ್ಯಾಯಾಲಯದಲ್ಲಿ ಕೇಸು ಜಯಿಸಿದ ಉಜ್ಮಾ, ನ್ಯಾಯಾಲಯಕ್ಕೆ ತನ್ನನ್ನು ಭಾರತಕ್ಕೆ ಕಳುಹಿಸಬೇಕೆಂದು ಕೋರಿದ್ದರು. ಇದರಂತೆ ಬಿಗಿ ಭದ್ರತೆಯೊಂದಿಗೆ ಭಾರತ-ಪಾಕಿಸ್ತಾನದ ಗಡಿಯಲ್ಲಿನ ವಾಘಾ ಗಡಿಯ ಮೂಲಕ ನೆಲ ಮಾರ್ಗವಾಗಿ ಕಾರಿನಲ್ಲಿ ಭಾರತಕ್ಕೆ ಕಳುಹಿಸಿದೆ. ಪಾಕಿಸ್ತಾನದ ಗಡಿ ದಾಟುತ್ತಿದ್ದಂತೆ ಭಾರತದ ಭೂಮಿಗೆ ನಮಸ್ಕರಿಸಿ ದೇಶದ ಹೊಸಿಲು ದಾಟಿದ್ದಾರೆ. ನಂತರ ಆಕೆ ನವದೆಹಲಿಗೆ ತೆರಳಿದ್ದಾರೆ.

ಭಾರತಕ್ಕೆ ಸ್ವಾಗತ-ಸುಷ್ಮಾ

ಭಾರತಕ್ಕೆ ಸ್ವಾಗತ-ಸುಷ್ಮಾ

ಉಜ್ಮಾಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾರತಕ್ಕೆ ಸ್ವಾಗತ ಕೋರಿದ್ದಾರೆ. ಜತೆಗೆ ಪಾಕಿಸ್ತಾನದಲ್ಲಿ ಅನುಭವಿಸಿದ ಪರಿಸ್ಥಿತಿಯ ಬಗ್ಗೆ ಖೇದವನ್ನೂ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ, ಭಾರತ ಸರ್ಕಾರಕ್ಕೆ ಉಜ್ಮಾ ಅವರ ಕುಟುಂಬ ಧನ್ಯವಾದ ಅರ್ಪಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉಜ್ಮಾ ಸಹೋದರ ವಾಹೀಂ ಅಹ್ಮದ್, ''ಉಜ್ಮಾ ಅವರು ಪಾಕಿಸ್ತಾನದಿಂದ ಸುರಕ್ಷಿತವಾಗಿ ಮರಳಿ ಭಾರತಕ್ಕೆ ಬಂದಿದ್ದು ಖುಷಿ ಕೊಟ್ಟಿದೆ. ನಮ್ಮ ಮನೆ ಮಗಳನ್ನು ನಾವು ಮತ್ತೆ ನೋಡುವಂತಾಗಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸತತ ಪ್ರಯತ್ನದಿಂದ. ಪ್ರಕರಣ ಬೆಳಕಿಗೆ ಬಂದಾಗಿನಿಂದ ನಮ್ಮ ಕುಟುಂಬದೊಡನೆ ನಿರಂತರ ಸಂಪರ್ಕದಲ್ಲಿದ್ದ ಅವರು, ನಮ್ಮಲ್ಲಿ ಧೈರ್ಯ ತುಂಬಿದ್ದಲ್ಲದೆ, ನಮ್ಮ ಮನೆ ಮಗಳನ್ನು ಸುರಕ್ಷಿತವಾಗಿ ಕರತರುವಲ್ಲಿ ದೊಡ್ಡ ಮಟ್ಟದ ಸಹಾಯ ಮಾಡಿದರು. ಅವರಿಗೆ ನಾವು ಆಭಾರಿ'' ಎಂದು ತಿಳಿಸಿದ್ದಾರೆ.

English summary
External Affairs Minister Sushma Swaraj welcomes Miss Uzma as she returns to India. She alleged that she was forced to marry a pakistani youth under Gun point.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X