ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ್ ನಲ್ಲಿ ಬಿಜೆಪಿಗೆ ಐತಿಹಾಸಿಕ ಜಯ

ಗಿರಿಶಿಖರಗಳ ನಾಡು ಉತ್ತರಾಖಂಡ್ ರಾಜ್ಯದಲ್ಲಿ ಯಾರಿಗೆ ಕಿರೀಟ ಸಿಗಲಿದೆ. ಮತದಾರರ ಒಲವು ಯಾವ ಪಕ್ಷಕ್ಕೆ ಇದೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದಾಗಿದೆ. ಲೈವ್ ಅಪ್ಡೇಟ್ಸ್ ನೋಡಿ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 11: ಗಿರಿಶಿಖರಗಳ ನಾಡು, ದೇವತೆಗಳ ನಾಡು ಉತ್ತರಾಖಂಡ್ ರಾಜ್ಯದಲ್ಲಿ ಕೇಸರಿ ಪಡೆ ಕಿರೀಟ ಧರಿಸಿದೆ. ಮತದಾರರ ಒಲವು ಯಾವ ಪಕ್ಷಕ್ಕೆ ಇದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹರೀಶ್ ಅವರ ಕಾಂಗ್ರೆಸ್ ಸರ್ಕಾರ ನೆಲಕಚ್ಚಿದೆ.

ಫೆಬ್ರವರಿ 15ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಮಾರ್ಚ್ 11 ಮತ ಎಣಿಕೆ ಮುಕ್ತಾಯವಾಗಿದೆ. ಲೈವ್ ಅಪ್ಡೇಟ್ ನಿಮಗೆ ಇಲ್ಲಿ ಸಿಗಲಿದೆ...[ಚುನಾವಣಾ ಎಕ್ಸಿಟ್ ಪೋಲ್ ಎಷ್ಟು ನಿಜ? ಎಷ್ಟು ಸುಳ್ಳು?]

[ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಗೋವಾ]

1.00: ಈಗಿನ ಟ್ರೆಂಡ್ : 70 ಕ್ಷೇತ್ರಗಳಲ್ಲಿ ಬಿಜೆಪಿ 56, ಕಾಂಗ್ರೆಸ್ 11, ಇತರೆ 3

12.30: ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿ ಹರೀಶ್ ರಾವತ್ ಎರಡೂ ಕ್ಷೇತ್ರಗಳಲ್ಲೂ ಸೋಲು.
9.50: ಮುನ್ನಡೆ 68(70): ಬಿಜೆಪಿ 54, ಕಾಂಗ್ರೆಸ್ 12, ಇತರೆ 2

9.40: ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿ ಹರೀಶ್ ರಾವತ್ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ
9.35: 62 ಕ್ಷೇತ್ರಗಳ ಟ್ರೆಂಡ್: ಬಿಜೆಪಿ 48, ಕಾಂಗ್ರೆಸ್ 12, ಇತರೆ 2 ಮುನ್ನಡೆ

9.30: ಪ್ರಮುಖ ಅಭ್ಯರ್ಥಿಗಳ ಸ್ಥಿತಿ ಗತಿ:
ಮುನ್ನಡೆ: ಕಿಶೋರ್ ಉಪಾಧ್ಯಾಯ್(ಕಾಂಗ್ರೆಸ್), ರಿತು ಖಂಡೂರಿ ಭೂಷಣ್ (ಬಿಜೆಪಿ), ಅಜಯ್ ಭಟ್ (ಬಿಜೆಪಿ),ಯಶ್ಪಾಲ್ ಆರ್ಯ(ಬಿಜೆಪಿ)

ಹಿನ್ನಡೆ: ಹರೀಶ್ ರಾವತ್ (ಹರಿದ್ವಾರ) (ಕಾಂಗ್ರೆಸ್) ಶೈಲೇಂದ್ರ ಸಿಂಗ್ ರಾವತ್(ಕಾಂಗ್ರೆಸ್), ಸತ್ಪಾಲ್ ಮಹಾರಾಜ್ (ಬಿಜೆಪಿ), ಇಂದಿರಾ ಹೃದಯೇಶ್ (ಕಾಂಗ್ರೆಸ್),

Harish Rawat

9.10: 58 ಕ್ಷೇತ್ರಗಳ ಟ್ರೆಂಡ್: ಬಿಜೆಪಿ 37, ಕಾಂಗ್ರೆಸ್ 17, ಇತರೆ 4 ಮುನ್ನಡೆ

9.05 : 70 ಕ್ಷೇತ್ರಗಳಲ್ಲಿ 637 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ. ಹರಿದ್ವಾರದಲ್ಲಿ ಮುನ್ನಡೆ ಪಡೆದ ಸಿಎ ಹರೀಶ್ ರಾವತ್.

9.00: 33 ಕ್ಷೇತ್ರಗಳ ಟ್ರೆಂಡ್: ಬಿಜೆಪಿ 22 , ಕಾಂಗ್ರೆಸ್ 10 ರಲ್ಲಿ, ಇತರೆ 1 ಮುನ್ನಡೆ
8.50: 7 ಕ್ಷೇತ್ರಗಳ ಟ್ರೆಂಡ್: ಬಿಜೆಪಿ 5 , ಕಾಂಗ್ರೆಸ್ 2ರಲ್ಲಿ ಮುನ್ನಡೆ
8.45: ಉತ್ತರಾಖಂಡ್ ನಲ್ಲಿ ಬಿಜೆಪಿಗೆ 2 ಕ್ಷೇತ್ರಗಳಲ್ಲಿ ಮೊದಲ ಮುನ್ನಡೆ

8.40 : ಡೆಹ್ರಾಡೂನ್ ನಗರದ 9 ಅಸೆಂಬ್ಲಿ ಸ್ಥಾನಕ್ಕೆ ಮತಎಣಿಕೆ ಜಾರಿ

8.30: ಕೆಲ ಮತ ಕೇಂದ್ರಗಳಲ್ಲಿ ಮತ ಎಣಿಕೆ ವಿಳಂಬ, ಶನಿವಾರ ಬೆಳಗ್ಗೆ ಹಿಮ ಮಳೆಯ ಸ್ವಾಗತ
8.15: ಪ್ರಮುಖ ಅಭ್ಯರ್ಥಿಗಳು ಕಿಶೋರ್ ಉಪಾಧ್ಯಾಯ್(ಕಾಂಗ್ರೆಸ್), ಹರೀಶ್ ರಾವತ್ (ಕಾಂಗ್ರೆಸ್), ರಿತು ಖಂಡೂರಿ ಭೂಷಣ್ (ಬಿಜೆಪಿ), ಶೈಲೇಂದ್ರ ಸಿಂಗ್ ರಾವತ್(ಕಾಂಗ್ರೆಸ್), ಸತ್ಪಾಲ್ ಮಹಾರಾಜ್ (ಬಿಜೆಪಿ), ಅಜಯ್ ಭಟ್ (ಬಿಜೆಪಿ), ಸಂಜೀಯ್ ಆರ್ಯ (ಬಿಜೆಪಿ), ಇಂದಿರಾ ಹೃದಯೇಶ್ (ಕಾಂಗ್ರೆಸ್), ಯಶ್ಪಾಲ್ ಆರ್ಯ(ಬಿಜೆಪಿ)

8.00: 5 ರಾಜ್ಯಗಳ 157 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭ
7.30: ಮತ ಎಣಿಕೆ ಕೇಂದ್ರಗಳಲ್ಲಿ ಮೊದಲಿಗೆ ಅಂಚೆ ಮತಗಳ ಎಣಿಕೆ. 8 ಗಂಟೆಯಿಂದ ಎಲೆಕ್ಟ್ರಾನಿಕ್ ಮತ ಯಂತ್ರದಿಂದ ಎಣಿಕೆ ಆರಂಭ.

7.00: ಮತ ಎಣಿಕೆ ಕೇಂದ್ರದ ಚಿತ್ರ:



70 ಅಸೆಂಬ್ಲಿ ಸ್ಥಾನವುಳ್ಳ ಉತ್ತರಾಖಂಡ್ ಅಸೆಂಬ್ಲಿಯ ಈಗಿನ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3).[LIVE : ಉತ್ತರಪ್ರದೇಶದಲ್ಲಿ ಏನಾಗಲಿದೆ? ಬಿಜೆಪಿ ಇತಿಹಾಸ ನಿರ್ಮಿಸುವುದೆ]

Uttarakhand Election Results 2017 LIVE : Counting Updates

ಹಾಲಿ ಮುಖ್ಯಮಂತ್ರಿ: ಕಾಂಗ್ರೆಸ್ಸಿನ ಹರೀಶ್ ರಾವತ್.
ಬಹುಮತ ಸಾಬೀತು ಪಡಿಸಲು ಬೇಕಾದ ಸ್ಥಾನಗಳು : 36

Uttarakhand Live updates

ಚಾಣಕ್ಯ ಭವಿಷ್ಯ: ಉತ್ತರಾಖಂಡ್ ರಾಜ್ಯದಲ್ಲಿ ಮತ್ತೊಮ್ಮೆ ಕೇಸರಿ ಬಾವುಟ ಹಾರಾಡಲಿದೆ ಎಂದು ಚಾಣಕ್ಯ ಸಂಸ್ಥೆ ಚುನಾವಣೆ ನಂತರದ ಸಮೀಕ್ಷೆ ಹೇಳುತ್ತಿದೆ.[24 ಗಂಟೆ ವಿದ್ಯುತ್, ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ]

ಎಕ್ಸಿಟ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 53 ಸ್ಥಾನ ಲಭಿಸಲಿದ್ದು, ಕಾಂಗ್ರೆಸ್ ಗೆ 15 ಹಾಗೂ ಇತರೆ 2 ಗಳಿಸಲಿದೆ. ರಾವತ್ ಅವರ ಕಾಂಗ್ರೆಸ್ ಸರ್ಕಾರ ಭಾರಿ ಮುಖಭಂಗ ಅನುಭವಿಸಲಿದೆ ಎನ್ನಲಾಗಿದೆ. [ಎನ್ ಡಿಟಿವಿ : ಸಮೀಕ್ಷೆಗಳ ಸಮೀಕ್ಷೆ]

ಸಮೀಕ್ಷೆಗಳ ಸರಾಸರಿಯಂತೆ ಬಿಜೆಪಿಗೆ 43, ಕಾಂಗ್ರೆಸ್ 23, ಇತರೆ 4
(ಒನ್ಇಂಡಿಯಾ ಸುದ್ದಿ)

English summary
Uttarakhand Election Results 2017 LIVE : Counting Updates: Get live trends, results of Uttarakhand assembly election 2017. Know whether BJP or Congress wins in Uttarakhand. Read latest party-wise election results in Uttarakhand with latest updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X