ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ಸಮೀಕ್ಷೆ: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅಲ್ಪ ಬಹುಮತ

ಉತ್ತರಪ್ರದೇಶದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಮೋದಿ ಮ್ಯಾಜಿಕ್ ಫಲಿಸಲಿದ್ದು, ಬಿಜೆಪಿ ಅಲ್ಪ ಬಹುಮತ ಪಡೆಯುವ ನಿರೀಕ್ಷೆಯಿದೆ ಎಂದು ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಬಹಿರಂಗಪಡಿಸಿದೆ.

By Mahesh
|
Google Oneindia Kannada News

ನವದೆಹಲಿ, ಜನವರಿ 31: ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಮೈತ್ರಿ ಯಾಕೋ ವರ್ಕ್ ಔಟ್ ಆದಂತೆ ಕಾಣುತ್ತಿಲ್ಲ. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಮೋದಿ ಮ್ಯಾಜಿಕ್ ಫಲಿಸಲಿದ್ದು, ಬಿಜೆಪಿ ಅಲ್ಪ ಬಹುಮತ ಪಡೆಯುವ ನಿರೀಕ್ಷೆಯಿದೆ ಎಂದು ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಬಹಿರಂಗಪಡಿಸಿದೆ.

ಟೈಮ್ಸ್ ನೌ ಹಾಗೂ ವಿಎಂಆರ್ ಚುನಾವಣಾ ಪೂರ್ವ ಸಮೀಕ್ಷೆಯಂತೆ, ಉತ್ತರಪ್ರದೇಶದ 403 ಅಸೆಂಬ್ಲಿ ಸ್ಥಾನಗಳಲ್ಲಿ ಬಿಜೆಪಿ 202 ಪಡೆಯಲಿದ್ದು, ಶೇ 43ರಷ್ಟು ಮತಗಳನ್ನು ಬಾಚಿಕೊಳ್ಳಲಿದೆ. 2012ರಲ್ಲಿ ಬಿಜೆಪಿ 155 ಸ್ಥಾನ ಗಳಿಸಿತ್ತು.[ಎಬಿಪಿ ಸಮೀಕ್ಷೆ: ಉತ್ತರಪ್ರದೇಶಕ್ಕೆ ಅಖಿಲೇಶ್ ಸೂಕ್ತ ಸಿಎಂ]

ಕಾಂಗ್ರೆಸ್ ನೊಂದಿಗೆ ಮಹಾಮೈತ್ರಿ ಸಾಧಿಸಿರುವ ಆಡಳಿತಾರೂಢ ಸಮಾಜವಾದಿ ಪಕ್ಷ 147 ಸ್ಥಾನ ಮಾತ್ರಗಳಿಸಲಿದೆ. ಕಳೆದ ಚುನಾವಣೆಗೆ ಹೋಲಿಸಿದರೆ 105 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ವರದಿ ಹೇಳಿದೆ. ಮೈತ್ರಿಕೂಟಕ್ಕೆ ಶೇ 31ರಷ್ಟು ಮಾತ್ರ ಮತಗಳು ಒಲಿಯಲಿದೆ.

ಹೆಚ್ಚು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ

ಹೆಚ್ಚು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ

ಮಾಯಾವತಿಯವರ ಬಹುಜನ ಪಾರ್ಟಿ ಈ ಬಾರಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಶೇ 24ರಷ್ಟು ಮತ ಪಡೆಯಲಿದ್ದು, 47 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ಕಳೆದ ಬಾರಿಗೆ ಹೋಲಿಸಿದರೆ 33 ಸ್ಥಾನ ಕಡಿಮೆ ಗಳಿಸಲಿದೆ. ವಿಶೇಷವೆಂದರೆ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ ಶೇ 11ರಷ್ಟು ಮತ ಪಾಲು ಪಡೆಯಲಿದ್ದು, 11 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ.

ಅಖಿಲೇಶ್ ಯಾದವ್ ಸೂಕ್ತ

ಅಖಿಲೇಶ್ ಯಾದವ್ ಸೂಕ್ತ

* ಅಖಿಲೇಶ್ ಯಾದವ್ ಶೇ 39
* ಮಾಯಾವತಿ ಶೇ 23
* ಯೋಗಿ ಆದಿತ್ಯಾನಾಥ್ ಶೇ 16

ಶೇ 2: ಶೀಲಾ ದೀಕ್ಷಿತ್, ಕೇಶವ್ ಪ್ರಸಾದ್ ಮೌರ್ಯ
ಶೇ 1: ಮುಲಾಯಂ ಸಿಂಗ್ ಯಾದವ್
ಇತರೆ ಶೇ 12 ಹಾಗೂ ಹೇಳಲು ಸಾಧ್ಯವಿಲ್ಲ ಶೇ 5

ಮೋದಿ ಪರ ನಿಂತ ಸಾರ್ವಜನಿಕರು

ಮೋದಿ ಪರ ನಿಂತ ಸಾರ್ವಜನಿಕರು

* ಶೇ 63ರಷ್ಟು ಜನ ಅಪನಗದೀಕರಣ ಉತ್ತರಪ್ರದೇಶವಲ್ಲದೆ, ಭಾರತಕ್ಕೂ ಒಳ್ಳೆಯದು ಎಂದಿದ್ದಾರೆ.
* ಶೇ 31.9ರಷ್ಟು ಜನ ಜನ ಅಪನಗದೀಕರಣ

ಬಿಜೆಪಿಗೆ 2012ಕ್ಕೆ ಹೋಲಿಸಿದರೆ 155 ಪ್ಲಸ್

ಬಿಜೆಪಿಗೆ 2012ಕ್ಕೆ ಹೋಲಿಸಿದರೆ 155 ಪ್ಲಸ್

* ಬಿಜೆಪಿಗೆ 2012ಕ್ಕೆ ಹೋಲಿಸಿದರೆ 155 ಪ್ಲಸ್ ಸ್ಥಾನ ಸಿಗಲಿದೆ 202
* ಎಸ್ ಪಿ ಹಾಗೂ ಕಾಂಗ್ರೆಸ್ 2012ಕ್ಕೆ ಹೋಲಿಸಿದರೆ 105 ಮೈನಸ್ ಸ್ಥಾನ ಸಿಗಲಿದೆ 147
* 2012ಕ್ಕೆ ಹೋಲಿಸಿದರೆ ಬಿಎಸ್ ಪಿಗೆ 47 ಸ್ಥಾನ. 33 ಸ್ಥಾನ ಕಡಿಮೆಯಾಗಲಿದೆ.
* ಇತರೆ 7 ಸ್ಥಾನಗಳು ಸಿಗಲಿದೆ.

English summary
The BJP will return to power in Uttar Pradesh with a simple majority, according to a Times Now-VMR survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X