ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿರುವ ಕೆಲ ಭಾರತೀಯರಿಗೆ ಶೀಘ್ರವೇ ಗೇಟ್ ಪಾಸ್: ಸುಷ್ಮಾ

|
Google Oneindia Kannada News

ನವದೆಹಲಿ, ಮಾರ್ಚ್ 25: ಅಮೆರಿಕದಲ್ಲಿ ಕಾನೂನು ಬಾಹಿರವಾಗಿ ನೆಲೆಸಿರುವ ಸುಮಾರು 270ಕ್ಕೂ ಹೆಚ್ಚು ಭಾರತೀಯ ಮೂಲದ ಪ್ರಜೆಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಅವರನ್ನು ಭಾರತಕ್ಕೆ ವಾಪಾಸ್ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಮೆರಿಕ ಸರ್ಕಾರ, ಭಾರತಕ್ಕೆ ತಿಳಿಸಿರುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ಮರಾಜ್ ಅವರು ಶನಿವಾರ ರಾಜ್ಯಸಭೆಗೆ ತಿಳಿಸಿದರು.

ಶನಿವಾರ ನಡೆದ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಿದ್ದ ಸುಷ್ಮಾ ಸ್ಮರಾಜ್, ''ಅಮೆರಿಕದಲ್ಲಿ ಕಾನೂನು ಬಾಹಿರವಾಗಿ ನೆಲೆಸಿರುವ 270ಕ್ಕೂ ಹೆಚ್ಚು ಭಾರತೀಯರನ್ನು ಈಗಾಗಲೇ ಟ್ರಂಪ್ ಸರ್ಕಾರ ಗುರುತಿಸಿದೆ. ಅವರೆಲ್ಲರನ್ನೂ ಶೀಘ್ರವೇ ಭಾರತಕ್ಕೆ ಕಳುಹಿಸಲಾಗುವುದು ಎಂದು ಟ್ರಂಪ್ ಸರ್ಕಾರ ತಿಳಿಸಿದೆ'' ಎಂದು ಹೇಳಿದರು.

US Targets More Than 200 Indians For Deportation, Says Sushma Swaraj

''ಆದರೆ, ಭಾರತೀಯರನ್ನು ವಾಪಾಸ್ ಕಳಿಸುವ ಮುನ್ನ ಅವರ ಪಟ್ಟಿಯನ್ನು ತಮಗೆ ನೀಡಬೇಕೆಂದು ವಿದೇಶಾಂಗ ಇಲಾಖೆಯು ಈಗಾಗಲೇ ಅಮೆರಿಕ ಸರ್ಕಾರಕ್ಕೆ ಮನವಿ ಮಾಡಿದೆ'' ಎಂದು ತಿಳಿಸಿದ ಅವರು, ''ಭಾರತಕ್ಕೆ ವಾಪಸ್ ಕಳುಹಿಸಬೇಕೆಂದು ನಿರ್ಧರಿಸಿರುವ ಭಾರತೀಯರ ಪಟ್ಟಿಯನ್ನು ತರಿಸಿಕೊಂಡ ನಂತರ, ಅವರು ನಮ್ಮ ದೇಶದ ಪ್ರಜೆಗಳೇ ಎಂಬುದನ್ನು ತನಿಖೆ ಮಾಡಲಾಗುವುದು'' ಎಂದು ಅವರು ಸದನಕ್ಕೆ ತಿಳಿಸಿದರು.

English summary
The Trump administration recently informed India that it is targeting for deportation more than 270 Indian nationals living in the United States illegally, according to India's foreign minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X