ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್ಸಿ ಫಲಿತಾಂಶ : ಕರ್ನಾಟಕದಿಂದ 56 ಜನ ಆಯ್ಕೆ

By Mahesh
|
Google Oneindia Kannada News

ನವದೆಹಲಿ, ಜುಲೈ, 04: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ಪರೀಕ್ಷಾ ಫಲಿತಾಂಶ ಶನಿವಾರ ಹೊರ ಬಂದಿದ್ದು, ಯುಪಿಎಸ್ಸಿ ವೆಬ್ ತಾಣದಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಈ ವರ್ಷ ಮೊದಲ ಮೂರು ಸ್ಥಾನಗಳಲ್ಲಿ ಇರಾ ಸಿಂಘಾಲ್, ರೇಣು ರಾಜ್ ಹಾಗೂ ನಿಧಿ ಗುಪ್ತಾ ಇದ್ದಾರೆ.

ಸಂದರ್ಶನಗಳು ಮುಗಿದ ನಾಲ್ಕು ದಿನಕ್ಕೆ ಅಂತಿಮ ಫಲಿತಾಂಶ ಹೊರ ಬಂದಿರುವುದು ಇದೇ ಮೊದಲು. ಒಟ್ಟಾರೆ 1,236 ಅಭ್ಯರ್ಥಿಗಳು ನೇಮಕಾತಿಗೆ ಲಭ್ಯವಿದ್ದಾರೆ. ಈ ಬಗ್ಗೆ ಕರ್ನಾಟಕದ 56 ಮಂದಿ ಆಯ್ಕೆಯಾಗಿದ್ದಾರೆ. [ಯುಪಿಎಸ್ ಸಿ ಹಾಗೂ ಐಎಫ್ ಎಸ್ ಪರೀಕ್ಷೆ ಅಧಿಸೂಚನೆ]

UPSC

8ನೇ ಸ್ಥಾನ ನಿತೀಶ್, 9ನೇ ಸ್ಥಾನ ಆಶೀಶ್ ಕುಮಾರ್, 10ನೇ ಸ್ಥಾನ ಅರವಿಂದ್ ಸಿಂಗ್, 31ನೇ ಸ್ಥಾನ ಫೌಜಿಯಾ ತರನಮ್, 36ನೇ ಸ್ಥಾನ ಕುಣಿಗಲ್ ಡಿಕೆ ಬಾಲಾಜಿ, 175ನೇ ಸ್ಥಾನದಲ್ಲಿ ಜಿಸಿ ವಿನಯ್ ಗೌಡ ಇದ್ದಾರೆ. [ಶೇ100 ಅಂಧೆ, ಭಾರತೀಯ ವಿದೇಶಿ ಸೇವೆಗೆ ಆಯ್ಕೆ]

ಕಳೆದ ವರ್ಷ ಆಗಸ್ಟ್ 24ರಲ್ಲಿ ಪರೀಕ್ಷೆಗಳು ನಡೆಸಲಾಗಿತ್ತು. 2,137 ಸ್ಥಳಗಳಲ್ಲಿ 59 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು. 4.51 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. 1,364 ಹುದ್ದೆಗಳಿಗೆ ನೇಮಕಾತಿ ನಡೆಯಬೇಕಿದೆ ಎಂದು ಯುಪಿಎಸ್ಸಿ ಚೇರ್ಮನ್ ದೀಪಕ್ ಗುಪ್ತಾ ಹೇಳಿದ್ದಾರೆ. ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯ

English summary
The Union Public Service Commission (UPSC) have announced the results of its civil services exam on its website www.upsc.gov.in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X