ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್ಸಿ ಅರ್ಹತಾ ಪರೀಕ್ಷಾ ಫಲಿತಾಂಶ ಪ್ರಕಟ

By Mahesh
|
Google Oneindia Kannada News

ನವದೆಹಲಿ, ಅ.13: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ಅರ್ಹತಾ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಯುಪಿಎಸ್ಸಿ ವೆಬ್ ತಾಣದಲ್ಲಿ ಫಲಿತಾಂಶ ವೀಕ್ಷಿಸಬಹುದು.ಒಟ್ಟು 15 ಸಾವಿರ ಅಭ್ಯರ್ಥಿಗಳು ಪ್ರಾಥಮಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

2015ನೇ ಸಾಲಿನ ಕೇಂದ್ರ ನಾಗರಿಕ ಸೇವೆಗಳ ಅರ್ಹತಾ ಪರೀಕ್ಷೆಯ ಫಲಿತಾಂಶಕ್ಕಾಗಿ www.upsc.gov.in ವೆಬ್​ಸೈಟ್​ಗೆ ಭೇಟಿ ನೀಡಬಹುದು. ಒಟ್ಟಾರೆ, 15,008 ಅಭ್ಯರ್ಥಿಗಳು ಪ್ರಾಥಮಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ ಎಂದು ಯುಪಿಎಸ್ಸಿ ಕಾರ್ಯದರ್ಶಿ ಆಶೀಂ ಖುರಾನಾ ಹೇಳಿದ್ದಾರೆ. [ಯುಪಿಎಸ್ಸಿ ಫಲಿತಾಂಶ : ಕರ್ನಾಟಕದಿಂದ 56 ಜನ ಆಯ್ಕೆ]

UPSC

ಈ ಬಾರಿ ಪರೀಕ್ಷೆಗೆ 9,45,908 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 23ರಂದು ನಡೆದ ಅರ್ಹತಾ ಪರೀಕ್ಷೆಯಲ್ಲಿ 4.63 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಅರ್ಜಿ ಹಾಕಿದ ಶೇ 49ರಷ್ಟು ಜನ ಪರೀಕ್ಷೆ ಬರೆದಿದ್ದರು. ಪರೀಕ್ಷೆ ನಡೆದ 50 ದಿನಗಳಲ್ಲಿ ಅರ್ಹತಾ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಯುಪಿಎಸ್ಸಿ ಕಾರ್ಯದರ್ಶಿ ಆಶೀಂ ಖರಾನಾ ತಿಳಿಸಿದ್ದಾರೆ.[ಯುಪಿಎಸ್ಸಿ: ಕುಬ್ಜ ಇರಾಳದ ಎತ್ತರದ ಸಾಧನೆ]

ಪರೀಕ್ಷಾರ್ಥಿಗಳ ದೂರು ಆಲಿಸಲು ಮಾಹಿತಿ ಕೇಂದ್ರ ಆರಂಭಿಸಿದ್ದು, ಅಭ್ಯರ್ಥಿಗಳು ದೂ. ಸಂಖ್ಯೆ 011-23385271, 011-23098543 ಮತ್ತು 011-23381125ಗೆ ಸಂಪರ್ಕಿಸಬಹುದು. ಬೆಳಗ್ಗೆ 10 ರಿಂದ ಸಂಜೆ 5ರ ತನಕ ಕಚೇರಿ ತೆರೆದಿರುತ್ತದೆ. ಮುಖ್ಯ ಪರೀಕ್ಷೆ ಡಿಸೆಂಬರ್ 18, 2015ರಂದು ನಡೆಯಲಿದೆ.

ಐಎಎಸ್, ಐಎಫ್ ಎಸ್ ಹಾಗೂ ಐಪಿಎಸ್ ಹಾಗೂ ಇನ್ನಿತರ ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆಗಳು ಅರ್ಹತಾ ಸುತ್ತಿನ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಪ್ರಕ್ರಿಯೆ ನಡೆಯಲಿದೆ.(ಪಿಟಿಐ)

English summary
Over 15,000 people have qualified in this year's civil services preliminary examination, results of which were declared today by Union Public Service Commission (UPSC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X