ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದೇಶದ ಯುವಶಕ್ತಿಗೆ ಕೌಶಲ್ಯ ತುಂಬಿ ನವಸೈನ್ಯ ಕಟ್ಟಬೇಕಿದೆ'

By Mahesh
|
Google Oneindia Kannada News

ನವದೆಹಲಿ, ಜುಲೈ 15: 'ಬಡತನ ನಿರ್ಮೂಲನೆ ಹೊಸ ಸೈನ್ಯ ಕಟ್ಟ್ಟೋಣ, ಗ್ರಾಮೀಣ ಭಾಗದ ಯುವಕರಿಗೆ ಹೊಸ ವಿಶ್ವಾಸ ತುಂಬೋಣ, ಕೌಶಲ್ಯಯುಕ್ತರಾಗಿ ಉದ್ಯೋಗ ರಂಗಕ್ಕೆ ಇಳಿಯೋಣ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಘೋಷಿಸಿದರು. ವಿಜ್ಞಾನ ಭವನದಲ್ಲಿ ಕೌಶಲ್ಯ ಭಾರತ ಯೋಜನೆಗೆ ಮೋದಿ ಅಧಿಕೃತವಾಗಿ ಚಾಲನೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿರುವ ಕೌಶಲ್ಯ ಭಾರತ (ಸ್ಕಿಲ್‌ ಇಂಡಿಯಾ) ಕ್ಕೆ ವಿಶ್ವ ಕೌಶಲ್ಯ ದಿನಾಚರಣೆ ದಿನ (ಜುಲೈ 15) ಚಾಲನೆ ಸಿಕ್ಕಿದೆ. ಭಾರತವನ್ನು 'ಸ್ಕಾಮ್ ಇಂಡಿಯಾ' ದಿಂದ 'ಸ್ಕಿಲ್ ಇಂಡಿಯಾ' ದತ್ತ ಕೊಂಡೊಯ್ಯುವುದು ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕರೆ ನೀಡಿದ್ದಾರೆ. [ಏನಿದು ಕೌಶಲ್ಯ ಭಾರತ ಯೋಜನೆ? ಎಷ್ಟು ಉದ್ಯೋಗ ಸಿಗಲಿದೆ?]

ನವದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ಸಂಜೆ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುವ ಸಮುದಾಯಕ್ಕೆ ಅನುಕೂಲ ನೀಡುವ 'ಕೌಶಲ್ಯ ಭಾರತ ಯೋಜನೆ' ಗೆ ಚಾಲನೆ ನೀಡಿ ಮಾತನಾಡಿದರು. ಮೋದಿ ಅವರ ಭಾಷಣ (ಒಂದೂವರೆ ಗಂಟೆ ಕಾರ್ಯಕ್ರಮದ ನಂತರ ಶುರು), ಇಡೀ ಕಾರ್ಯಕ್ರಮದ ವಿಡಿಯೋ, ಇನ್ನಿತರ ವಿವರ ಮುಂದಿದೆ...

ಪದವೀಧರರಾದರೆ ಮಾತ್ರ ಸಾಲದು

ಪದವೀಧರರಾದರೆ ಮಾತ್ರ ಸಾಲದು

ಯುವ ಸಮುದಾಯ ಪದವೀಧರರಾದರೆ ಮಾತ್ರ ಸಾಲದು, ಕೌಶಲ್ಯ ಅಭಿವೃದ್ಧಿಯಾಗಬೇಕು. ಉದ್ಯೋಗಕ್ಕೆ ಅಣಿಯಾಗಬೇಕು ಎಂದು ಜೂನ್ 11, 2014 ರಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರು ಘೋಷಿಸಿದ್ದರು. ಕೌಶಲ್ಯ ಅಭಿವೃದ್ಧಿ ಯೋಜನೆಗೆ ಜಪಾನ್ ದೇಶದ ನೆರವು ಕೋರಲಾಗಿದೆ.

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನೀತಿ

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನೀತಿ, ನಿಯಮಗಳನ್ನು ಪ್ರಕಟಿಸಿದ ಪ್ರಧಾನಿ ನರೇಂದ್ರಮೋದಿ.

ಸಿಲ್ಕ್ ಇಂಡಿಯಾ ಅಭಿಯಾನಕ್ಕೆ ಚಾಲನೆ

ದೆಹಲಿಯ ವಿಜ್ಞಾನಭವನದಲ್ಲಿ ಸಿಲ್ಕ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ.

ಕೌಶಲ್ಯ ಅಭಿವೃದ್ಧಿ ಸಾಲ ಯೋಜನೆ

ಕೌಶಲ್ಯ ಅಭಿವೃದ್ಧಿ ಸಾಲ ಯೋಜನೆ

* 5 ಸಾವಿರ ರು ನಿಂದ 1.5 ಲಕ್ಷ ರು ತನಕ ಸಾಲ ಪಡೆಯಬಹುದು. ಇದು ದೇಶದ 34 ಲಕ್ಷ ಯುವ ಸಮುದಾಯಕ್ಕೆ ನೆರವಾಗಲಿದೆ.
* ಕೌಶಲ್ಯ ಅಭಿವೃದ್ಧಿಗಾಗಿ ನೂತನ ರಾಷ್ಟ್ರೀಯ ನೀತಿ.
* ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ(ಎನ್ ಎಸ್ ಡಿಸಿ) ವತಿಯಿಂದ ಯೋಜನೆಯ ಕಾರ್ಯರೂಪ ಹಾಗೂ ನಿರ್ವಹಣೆ ದೇಶದೆಲ್ಲೆಡೆ ನಡೆಯಲಿದೆ.

ಪ್ರಧಾನ್ ಮಂತ್ರಿ ಅವರಿಂದ ಮಹತ್ವದ ಯೋಜನೆ

ಪ್ರಧಾನ್ ಮಂತ್ರಿ ಅವರಿಂದ ಮಹತ್ವದ ಯೋಜನೆಗೆ ಚಾಲನೆ.

ಕಾರ್ಯಕ್ರಮದ ವಿಡಿಯೋ ಇಲ್ಲಿದೆ ನೋಡಿ

ಮೋದಿ ಅವರ ಭಾಷಣ, ಇಡೀ ಕಾರ್ಯಕ್ರಮದ ವಿಡಿಯೋ ಇಲ್ಲಿದೆ ನೋಡಿ:

English summary
On the occasion of World Youth Skills Day, Prime Minister Narendra Modi is all set to launch the NDA government's much ambitious Skill India initiative at Vigyan Bhawan in the national capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X