ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.27: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಅ.27: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

18.15: ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಬಿಜೆಪಿ-ಟಿಡಿಪಿ ಸದಸ್ಯರ ನಡುವೆ ಮಾರಾಮಾರಿ ನಡೆದು ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

17.30:
ವಿಯೆಟ್ನಾಂನ ಪ್ರಧಾನಿ ಗುಯೆನ್ ತಾನ್ ಡಂಗ್ ಅವರು ನವದೆಹಲಿಗೆ ಆಗಮಿಸಿದ್ದಾರೆ.

16.40:
ನರೇಂದ್ರ ಮೋದಿ ಅವರ ಸರ್ಕಾರ ಕಪ್ಪು ಹಣವುಳ್ಳ ಮೂವರ ಹೆಸರು ಬಹಿರಂಗಗೊಳಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು 15 ಜನರ ಹೆಸರನ್ನು ಪ್ರಕಟಿಸಿದ್ದಾರೆ.

14.30:
ರಾಜೀವ್ ಗಾಂಧಿ ಹತ್ಯೆ ಆರೋಪಿ ನಳಿನಿ ಅವರ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ನಳಿನಿ ಜೈಲಿನಲ್ಲೇ ಕಾಲದೂಡಬೇಕಾಗಿದೆ.[ವಿವರ ಇಲ್ಲಿ ಓದಿ]

13.30:
ಚಳಿಗಾಲದ ಲೋಕಸಭೆ ಅಧಿವೇಶನ ನವೆಂಬರ್ 24 ರಿಂದ ಡಿಸೆಂಬರ್ 23ರ ತನಕ ನಡೆಯಲಿದೆ.

11.05: ಕಪ್ಪು ಹಣ ವಾಪಸ್ ತರುವ ನಿಟ್ಟಿನಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ನಡೆ ಬಗ್ಗೆ ಸುಬ್ರಮಣ್ಯ ಸ್ವಾಮಿ ಪ್ರತಿಕ್ರಿಯಿಸಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೆಸರು ಪಟ್ಟಿಯಲ್ಲಿದೆ. ಯಾಕೆ ಹೆಸರು ಹೇಳಲು ವಿಳಂಬ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. [ಯಾರ್ಯಾರಿಗೆ ಸಾಡೇಸಾತಿ ಶನಿಕಾಟ ಶುರು?]

Subramanian Swamy

11.00: ಕ್ರಿಸ್ಟಿಯಾನೊ ರೊನಾಲ್ಡೊ, ಪೆಪೆ ಹಾಗೂ ಕರೀಮ್ ಬೆಂರೆುಮಾ ದಾಖಲಿಸಿದ ತಲಾ ಒಂದು ಗೋಲಿನ ನೆರವಿನಿಂದ ರಿಯಲ್ ಮ್ಯಾಡ್ರಿಡ್ ತಂಡ ಲಾ ಲಿಗ ಟೂರ್ನಿಯಲ್ಲಿ ಬಾರ್ಸಿಲೋನದ ವಿರುದ್ಧ 3-1 ಅಂತರದಿಂದ ಜಯ ದಾಖಲಿಸಿದೆ. ಫೀಫಾ ವಿಧಿಸಿದ್ದ ನಾಲ್ಕು ತಿಂಗಳ ನಿಷೇಧದ ನಂತರ ಮೊದಲ ಬಾರಿ ಲೂಯಿಸ್ ಸ್ವರೇಜ್ ಬಾರ್ಸಿಲೋನದ ಪರವಾಗಿ ಆಡಿದ್ದರು.

10.25: ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಕ್ಷೇತ್ರಗಳ ಪೈಕಿ 123 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ಆದರೆ, ಸರಳ ಬಹುಮತಕ್ಕೆ 145 ಸೀಟುಗಳು ಅಗತ್ಯವಿದ್ದು, ಸರ್ಕಾರ ರಚನೆ ಮಾಡಲು ಬಿಜೆಪಿಗೆ ಇತರ ಪಕ್ಷಗಳ ಬೆಂಬಲ ಅನಿವಾರ್ಯವಾಗಿದೆ.

10.20: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬಿಜೆಪಿ ಶಾಸಕ ಗೋವಿಂದ್ ರಾಥೋಡ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರೈಲಿನ ಮೂಲಕ ಮುಂಬೈಗೆ ಪ್ರಯಾಣಿಸುತ್ತಿದ್ದ ಗೋವಿಂದ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Updates India, International News in Brief Oct 27

10.15: ಕಪ್ಪು ಹಣ ಹಗರಣ: ಕೆಲವು ವಿದೇಶದಲ್ಲಿನ ಬ್ಯಾಂಕುಗಳಲ್ಲಿನ ಭಾರತೀಯ ಖಾತೆದಾರರ ವಿವರಗಳನ್ನು ಸುಪ್ರೀಂಕೋರ್ಟಿಗೆ ಎನ್ ಡಿಎ ಸರ್ಕಾರ ಸೋಮವಾರ ಸಲ್ಲಿಸುವ ನಿರೀಕ್ಷೆಯಿದೆ.

10.00: ಬೆಂಗಳೂರಿನ ಆರ್ಕಿಡ್ಸ್ ಶಾಲೆ ಸೋಮವಾರದಿಂದ ಪುನರ್ ಆರಂಭಗೊಂಡಿದೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಗುಂಡಣ್ಣನನ್ನು ಪೊಲೀಸರ ವಶಕ್ಕೆ ಕೋರ್ಟ್ ಒಪ್ಪಿಸಿದೆ.

English summary
Top News of the today : There is no hindrance of law to disclosing entire list of a/c holders. Don't know why Govt is disclosing selective names: Subramanian Swamy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X