ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.2: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ನ.2: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

16.00: ಮುಂಬೈನ ದೇಶಿ ವಿಮಾನ ನಿಲ್ದಾಣದ ಚೆಕ್ ಇನ್ ಕೌಂಟರ್ ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಚೆನ್ ಇನ್ ಕೌಂಟರ್ ಗಳ ಸರ್ವರ್ ಗಳು ಹಾಳಾಗಿದ್ದು, ಇದರಿಂದ ವಿಮಾನಗಳು ವಿಳಂಬವಾಗಲಿದೆ.

15.30: ವಿದೇಶಗಳಲ್ಲಿನ ಬ್ಯಾಂಕುಗಳಲ್ಲಿ ಭಾರತಕ್ಕೆ ಸೇರಿದೆ ಎನ್ನಲಾದ ಹಣದ ಮೊತ್ತದ ಬಗ್ಗೆ ನಮಗೆ ಯಾವ ಮಾಹಿತಿಯೂ ಸಿಕ್ಕಿಲ್ಲ: ಎಂ.ಬಿ ಶಾ ವಿಶೇಷ ತನಿಖಾ ದಳ, ಕಪ್ಪು ಹಣ ಪ್ರಕರಣ.

Mumbai Airport

15.00: ಆಕಾಶವಾಣಿ ಮೂಲಕ ಭಾಷಣ ಮಾಡುವ ಪ್ರಧಾನಿ ಅವರು ಈ ರೀತಿ ಪದೇ ಪದೇ ದೇಶದ ಜನತೆಯನ್ನು ತಪ್ಪು ದಾರಿಗೆ ಎಳೆಯಬಾರದು: ಶೋಭಾ ಓಜಾ, ಕಾಂಗ್ರೆಸ್ ವಕ್ತಾರೆ.
14.30: ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ ರಾಜ್ಯಗಳ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಸಿದೆ.

9.50: ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿ ಮತ್ತೊಮ್ಮೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. 'ಮನ್ ಕಿ ಬಾತ್' ಸರಣಿಯ ಎರಡನೇ ಕಂತು ಇಂದು ಪ್ರಸಾರವಾಗಲಿದೆ.

Narendra Modi
9.40: ನೈತಿಕ ಪೊಲೀಸ್ ಗಿರಿ ವಿರುದ್ಧ ನಡೆಸಲಾಗುತ್ತಿರುವ ಕಿಸ್ ಆಫ್ ಲವ್ ಅಭಿಯಾನ ಕೇರಳದಲ್ಲಿ ಇಂದು ಸಂಜೆ ನಡೆಯಲಿದೆ.

9.30:
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸದೆ ಗರಂ ಆಗಿ ಮೈಕ್ ಪಕ್ಕಕ್ಕೆ ತಳ್ಳಿದ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಈಗ ಆರೆಸ್ಸೆಸ್ ನ ವಾಕ್ಬಾಣವನ್ನು ಎದುರಿಸಬೇಕಾಗಿದೆ.

9.10:
ಬೆಂಗಳೂರಿನ ಕೇಂಬ್ರಿಡ್ಜ್ ಶಾಲೆ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಲ್ಪಟ್ಟಿದ್ದ ಶಾಲೆಯ ಪ್ರಿನ್ಸಿಪಾಲ್ ವೈಜಯಂತಿ ಅವರಿಗೆ ಜಾಮೀನು ಸಿಕ್ಕಿದೆ.
English summary
Top News of the today : Airport check in servers crashed at Mumbai domestic airport. Check in counters were affected, flights were delayed and many news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X