ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

117 ಲೋಕಸಭಾ ಕ್ಷೇತ್ರಗಳಿಗೆ ವೋಟಿಂಗ್ % LIVE

By Mahesh
|
Google Oneindia Kannada News

ಬೆಂಗಳೂರು, ಏ.24: ಕೇಂದ್ರದಲ್ಲಿ ಸರ್ಕಾರ ರಚನೆ ವೇಳೆ ನಿರ್ಣಾಯಕ ಪಾತ್ರ ವಹಿಸಲಿರುವ ಆರನೆ ಹಂತದ 117 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 11 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ 17.9 ಕೋಟಿ ಮತದಾರರು ಪ್ರಮುಖರ ಹಣೆಬರಹವನ್ನು ತೀರ್ಮಾನಿಸಲಿದ್ದಾರೆ.

ನಕ್ಸಲ್ ಪೀಡಿತ ರಾಜ್ಯಗಳಾದ ಬಿಹಾರ (7), ಛತ್ತೀಸ್‌ಗಢ (7), ಜಾರ್ಖಂಡ್ (4), ಜಮ್ಮು-ಕಾಶ್ಮೀರ (1), ಪ್ರತ್ಯೇಕತಾವಾದಿಗಳಿಂದ ಕಂಗೆಟ್ಟಿರುವ ಅಸ್ಸೋಂನ (6), ಮಧ್ಯಪ್ರದೇಶ (10), ಮಹಾರಾಷ್ಟ್ರ (19), ರಾಜಸ್ಥಾನ (5), ತಮಿಳುನಾಡು (39), ಉತ್ತರ ಪ್ರದೇಶ (12), ಪಶ್ಚಿಮ ಬಂಗಾಳ (6) ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ (1) ಲೋಕಸಭೆ ಕ್ಷೇತ್ರಗಳಿಗೆ ಮತದಾನ ಜಾರಿಯಲ್ಲಿದೆ

ವೋಟಿಂಗ್ ಮೀಟರ್ ಕ್ಷಣ ಕ್ಷಣದ ಮಾಹಿತಿ ಈ ಪುಟದಲ್ಲಿ ಅಪ್ಡೇಟ್ ಆಗಲಿದೆ ತಪ್ಪದೇ ನೋಡಿ

6.00:
ಬಿಹಾರದಲ್ಲಿ ಶೇ 55.11%, ತಮಿಳುನಾಡು ಶೇ 70. ಉತ್ತರಪ್ರದೇಶ 55%
5.40: ಆಗ್ರಾದಲ್ಲಿ 5 ಗಂಟೆಗೆ 56.3%, ಫತೇಪುತ್ ಸಿಕ್ರಿ 56.16%.
5.35: ಪಶ್ಚಿಮ ಬಂಗಾಳ 5 ಗಂಟೆಗೆ ; ರಾಯ್ ಗಂಜ್ 79.78%, ಜಂಗಿಪುರ 79%, ಮುರ್ಷಿದಾಬಾದ್ 82.24%, ಮಾಲ್ಡಾ ಉತ್ತರ 80.67%, ಮಾಲ್ಡಾ ದಕ್ಷಿಣ 80.16%,ಬಲೂರ್ ಘಾಟ್ 82.84%
5.30: ಮಧ್ಯಪ್ರದೇಶದ 10 ಸೀಟುಗಳಿಗೆ ಶೇ 59ರಷ್ಟು ಮತದಾನ. ಪಶ್ಚಿಮ ಬಂಗಾಳ 80.3%, ಪುದುಚೇರಿ 80%.
5.25:
ರಾಜಸ್ಥಾನದಲ್ಲಿ ಶೇ 48. ದೌಸಾ 50%, ಆಲ್ವಾರ್ 52%, ಭರತ್ ಪುರ್ 45%, ಕಕ್ರೊಲಿ-ಧೋಲ್ಪುರ್ 43%
4.30: 4 ಗಂಟೆಗೆ ಬಿಹಾರದಲ್ಲಿ ಒಟ್ಟಾರೆ 47%. ಸೌಪಾಲ್ 54%, ಅರಾರಿಯಾ 49.5%, ಕಿಸನ್ ಗಂಜ್ 54%, ಕತಿಹಾರ್ 54%, ಪೂರ್ನಿಯಾ 52%, ಭಾಗಾಲ್ಪುರ್ 47%, ಬಂಕಾ 48%.
4.15: 4 ಗಂಟೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 22.02%,ಮಹಾರಾಷ್ಟ್ರ 35%, ಪುದುಚೇರಿ 67%.
4.00: 3 ಗಂಟೆಗೆ ಅಸ್ಸಾಂನಲ್ಲಿ 55%, ಮಧ್ಯಪ್ರದೇಶ 55%, ಜಾರ್ಖಂಡ್ 56.45%.
3.50:
3 ಗಂಟೆ ಸುಮಾರಿಗೆ ತಮಿಳುನಾಡು ಶೇ 61 ರಷ್ಟು, ಮಥುರಾದಲ್ಲಿ 49%.
3.45: ಆಗ್ರಾದಲ್ಲಿ 51.12%, ಫತೇಪುರ್ ಸಿಕ್ರಿ 50.07%.
3.30: ನಾವು ಎಲ್ಲಾ 48 ಸೀಟು ಗೆಲ್ಲುತ್ತೇವೆ ಎಂದು ಮತದಾನ ಮಾಡಿದ ನಂತರ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
3.20: ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ಮತದಾನ ವಂಚಿತರಾಗಿದ್ದಾರೆ.ರಾಮ್ ಅವರ ಹೆಸರು ಮತಪಟ್ಟಿಯಿಂದ ನಾಪತ್ತೆಯಾಗಿದೆ.
2.50: 1 ಗಂಟೆಗೆ ಛತ್ತೀಸ್ ಗಢದಲ್ಲಿ ಶೇ 35, ಮಧ್ಯಪ್ರದೇಶ 45%, ಪುದುಚೇರಿ 54%, ಪಶ್ಚಿಮ ಬಂಗಾಳ 63%.
2.15: ಪಶ್ಚಿಮ ಬಂಗಾಳದ ಜಂಗಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಮತದಾರರಿಗೆ ಆಮಿಷ ಒಡ್ಡುತ್ತಿರುವ ಅರೋಪ. ಸ್ಥಳದಲ್ಲಿ ಗಲಭೆ, ಹಿಂಸಾಚಾರ. ಪ್ರಣಬ್ ಮುಖರ್ಜಿ ಅವರ ಮಗ ಅಭಿಜಿತ್ ಮುಖರ್ಜಿ ಸ್ಪರ್ಧಿಯಾಗಿದ್ದಾರೆ.

2.05: 2 ಗಂಟೆ ವೇಳೆಗೆ ಬಿಹಾರದ 7 ಲೋಕಸಭಾ ಕ್ಷೇತ್ರಗಳಲ್ಲಿ 42.35% ಮತದಾನ ಕಂಡು ಬಂದಿದೆ. ಮುಂಬೈ 1 ಗಂಟೆಗೆ 26.7%.
1.45: ಚೆನ್ನೈನಲ್ಲಿ ಮೂರು ಐಟಿ ಕಂಪನಿಗಳ ಮೇಲೆ ಚುನಾವಣಾ ಅಧಿಕಾರಿಗಳಿಂದ ದಾಳಿ. ಮತದಾನದ ದಿನ(ಏ.24) ಮೂರು ಕಂಪನಿಗಳು ರಜೆ ಘೋಷಿಸಿರಲಿಲ್ಲ ಎಂಬ ಆರೋಪ. ಸುಮಾರು 3,500 ಉದ್ಯೋಗಿಗಳನ್ನು ಬಲವಂತವಾಗಿ ರಜೆಯ ಮೇಲೆ ಹೊರಕ್ಕೆ ಕಳಿಸಲಾಗಿದೆ.
1.10: ಅಸ್ಸಾಂನ ಕೊಕ್ರಾಝಾರ್ ಪ್ರದೇಶದಲ್ಲಿ ಹಿಂಸಾಚಾರ ಆರಂಭಗೊಂಡಿದ್ದು ಒಬ್ಬ ಪೇದೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
1.05: ಅಸ್ಸಾಂನಲ್ಲಿ ಸುಮಾರು 65 ಇವಿಎಂಗಳು ದೋಷರೂಪಿತವಾಗಿರುವುದು ಕಂಡು ಬಂದಿದ್ದು ಬದಲಾಯಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಗಿದೆ.
12.55: 1 ಗಂಟೆಗೆ ಮಧ್ಯಪ್ರದೇಶ 32%, ರಾಜಸ್ಥಾನ 40%, ಪಾಂಡಿಚೇರಿ 51%. ಅಸ್ಸಾಂ 37%, ಪಶ್ಚಿಮ ಬಂಗಾಳ ಶೇ 51.
12.50: ಪ್ರಧಾನಿ ಮನಮೋಹನ್ ಸಿಂಗ್ ಅವರು ಪತ್ನಿ ಸಮೇತರಾಗಿ ಬಂದು ಗುವಾಹಟಿಯಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿ ದೇಶದಲ್ಲಿ ಮೋದಿ ಅಲೆ ಎಂಬುದಿಲ್ಲ ಎಂದು ಪ್ರತಿಕ್ರಿಯಿಸಿದರು.

Voting

12.45:
12 ಗಂಟೆಗೆ ಬಿಹಾರ ಶೇ 30.81, ಮುಂಬೈ 11.30ಕ್ಕೆ ಶೇ 12.5, ದಕ್ಷಿಣ 13.2 %,
12.35: ಪಾಂಡಿಚೇರಿ ಸಿಎಂ ರಂಗಸ್ವಾಮಿ ಯಮಹಾ ಬೈಕಿನಲ್ಲಿ ಮತಗಟ್ಟೆಗೆ ಬಂದು ಮತದಾನ.
12.30: 12 ಗಂಟೆಗೆ ಮಧ್ಯಪ್ರದೇಶದಲ್ಲಿ 26%, ವಿದಿಶಾದಲ್ಲಿ 25%.
12.15: 11 ಗಂಟೆಗೆ ಜಾರ್ಖಂಡ್ ಶೇ 27.8 ರಷ್ಟು ಮತದಾನ, ಜಮ್ಮುವಿನ ಅನಂತ್ ನಾಗ್ ಶೇ 16.46 ರಷ್ಟು ವೋಟ್.
12.05: ತಮಿಳುನಾಡು: 11 ಗಂಟೆಗೆ ಉತ್ತರ: ಶೇ 27.4%, ದಕ್ಷಿಣ 26.3%, ಸೆಂಟ್ರಲ್ 25.4%
12.00: 11 ಗಂಟೆಗೆ ಮುಂಬೈ ಶೇ 17, ಉತ್ತರಪ್ರದೇಶ ಶೇ 25ರಷ್ಟು, ರಾಜಸ್ಥಾನ ಶೇ 28ರಷ್ಟು, ತಮಿಳುನಾಡು ಶೇ 35 ರಷ್ಟು ಮತದಾನ.
11.45:
ಐಪಿಎಲ್ ಟೂರ್ನಿಯಿಂದ ಬಿಡುವು ಪಡೆದುಕೊಂಡು ಮುಂಬೈಗೆ ಬಂದು ಮತದಾನ ಮಾಡಿದ ಕಿಂಗ್ಸ್ XIತಂಡದ ಪಂಜಾಬ್ ಒಡತಿ, ನಟಿ ಪ್ರೀಟಿ ಜಿಂಟಾ
MP registers 13% voting, TN registers 14.31% till 10 am

11.30: 11 ಗಂಟೆ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಶೇ 40 ರಷ್ಟು ಮತದಾನ, ಬಿಹಾರದಲ್ಲಿ ಶೇ 23.11ರಷ್ಟು ಮತದಾನವಾಗಿದೆ.
11.00: ಮಹಾರಾಷ್ಟ್ರದಲ್ಲಿ ಮೂರನೇ ಹಂತದ ಮತದಾನ ನಿಧಾನಗತಿಯಿಂದ ಸಾಗಿದೆ.
10.55: ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್ ಅವರು ಭೋಪಾಲ್ ನಲ್ಲಿ ಮತದಾನ ಮಾಡಿದ್ದಾರೆ.
10.45: 10 ಗಂಟೆ ವೇಳೆಗೆ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಶೇ 20 ರಷ್ಟು ಮತದಾನವಾಗಿದೆ. ಚೆನ್ನೈ, ಕರೂರು, ಸೇಲಂ, ತಿರುವಣ್ಣಾಮಲೈಗಳಲ್ಲಿ ಬಿರುಸಿನ ಮತದಾನ ವರದಿ ಬಂದಿದೆ.
10.40: ಅಸ್ಸೋಂ ಮೊದಲೆರಡು ಗಂಟೆಗಳಲ್ಲಿ ಶೇ17ರಷ್ಟು ಮತದಾನ ಕಂಡಿದೆ.
10.35: ಎಚ್ ಡಿಎಫ್ ಸಿ ಚೇರ್ಮನ್ ದೀಪಕ್ ಪಾರೇಖ್ ಅವರ ಹೆಸರು ಮತಪಟ್ಟಿಯಿಂದ ನಾಪತ್ತೆಯಾಗಿದೆ.
10.20: ನಟ ಜಾನ್ ಅಬ್ರಹಾಂ, ನಟಿ ಶಿಲ್ಪಾ ಶೆಟ್ಟಿ ಮತದಾನ ಮಾಡಿದ್ದಾರೆ.
English summary
Live LS Polls voting: Eleven states and one Union Territory will go to the election in the sixth phase of the Lok Sabha election 2014 on Thursday. A total number of 117 constituencies will go to the election in this phase, making it the second biggest after April 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X