ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸಿಕ ಪಿಂಚಣಿ ಭಾಗ್ಯ ಬಡವರಿಗೆ ನೀಡಿ ಎಂದ ಬಿಗ್ ಬಿ

By Mahesh
|
Google Oneindia Kannada News

ನವದೆಹಲಿ, ಅ.21: ಅಖಿಲೇಶ್ ಯಾದವ್ ನೇತೃತ್ವದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಸರ್ಕಾರ ಬಿಗ್ ಬಿ ಫ್ಯಾಮಿಲಿಗೆ ಮಾಸಿಕ ಪಿಂಚಣಿ ಭಾಗ್ಯ ನೀಡುತ್ತಿದೆ. ಅಮಿತಾಬ್ ಬಚ್ಚನ್, ಪತ್ನಿ ಜಯಾ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್‌ಗೆ ಮಾಸಿಕ ತಲಾ 50 ಸಾವಿರ ರು. ಪಿಂಚಣಿ ನೀಡಲಾಗುತ್ತಿದೆ ಎಂದು ಸರ್ಕಾರ ಘೋಷಿಸಿದೆ. ಅದರೆ, ಮಾಸಿಕ ಪಿಂಚಣಿ ಅಗತ್ಯವಿಲ್ಲ, ನಗದು ಮೊತ್ತವನ್ನು ಬಡವರು, ನಿರ್ಗತಿಕರಿಗೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಉತ್ತರ ಪ್ರದೇಶ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ ಯಶ್‌ಭಾರತಿ ಸನ್ಮಾನಿತರಿಗೆ ಮಾಸಿಕ 50 ಸಾವಿರ ರು. ಪಿಂಚಣಿ ನೀಡುವ ಬಗ್ಗೆ ಮುಖ್ಯಮಂತ್ರಿ ಅಖಿಲೇಶ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ತೀರ್ಮಾನಿಸಿದೆ. ಹಿರಿಯ ನಟ ಬಚ್ಚನ್, ಅವರ ಪತ್ನಿ ಜಯಾಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಮೂವರೂ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Amitabh Bachchan

ಕಲೆ, ಸಂಸ್ಕೃತಿ, ಕ್ರೀಡೆ, ಸಾಹಿತ್ಯ, ವೈದ್ಯಕೀಯ, ಪತ್ರಿಕೋದ್ಯಮ್ ಹಾಗೂ ಸಮಾಜಸೇವೆ ಕ್ಷೇತ್ರಗಳಲ್ಲಿನ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಕೇಂದ್ರ ಅಥವಾ ರಾಜ್ಯ ಸರ್ಕಾರ ಕಾರ್ಯ ನಿರತ ನೌಕರರು ಮಾಸಿಕ 50 ಸಾವಿರ ಪಿಂಚಣಿ ಪಡೆಯುತ್ತಿಲ್ಲ.

1994ರಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು, 150ಕ್ಕೂ ಅಧಿಕ ಗಣ್ಯರಿಗೆ ಪ್ರಶಸ್ತಿ ಸಂದಿದೆ. ಆರಂಭದಲ್ಲಿ 5 ಲಕ್ಷ ಪ್ರಶಸ್ತಿ ಮೊತ್ತವಿತ್ತು ನಂತರ 11 ಲಕ್ಷ ರು ಗೆ ಏರಿಸಲಾಯಿತು. ಪ್ರಥಮ ವರ್ಷದಲ್ಲೇ ಅಮಿತಾಬ್ ಬಚ್ಚನ್ ಅವರ ತಂದೆ ಕವಿ ಹರಿವಂಶ್ ರಾಯ್ ಬಚ್ಚನ್ ಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಅಮಿತಾಬ್ ಬಚ್ಚನ್ ಕುಟುಂಬವಲ್ಲದೆ, ನವಾಜುದ್ದೀನ್ ಸಿದ್ದಿಕಿ, ಜಿಮ್ಮಿ ಶೆರ್ಗಲ್, ಗಾಯಕ ಕೈಲಾಶ್ ಖೇರ್, ರೇಖಾ ಭಾರದ್ವಾಜ್, ಪಂಡಿತ್ ರಾಜನ್ ಹಾಗೂ ಸಾಜನ್ ಮಿಶ್ರಾ ಅವರಿಗೆ ಈ ಪ್ರಶಸ್ತಿ ಸಂದಿದೆ.

English summary
One must be surprised to know that Uttar Pradesh Government will give fifty thousand pension every month to Bollywood Mahanayak Amitabh Bachchan, his wife Jaya and son Abhisek. The reason being that Akhilesh Yadav led Samajwadi party has decided to give this cash money to all Yash Bharti awardees of the State
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X