ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ್ರ ಚುನಾವಣೆಯಲ್ಲಿ ಪ್ರಿಯಾಂಕಾ ಚಮತ್ಕಾರ ತೋರಬಲ್ಲರೆ?

ಆಂತರಿಕ ಬಡಿದಾಟಗಳಿಂದ ಜರ್ಝರಿತವಾಗಿದ್ದ ಸಮಾಜವಾದಿ ಪಕ್ಷದ ಜೊತೆ ಕಾಂಗ್ರೆಸ್ ಕೈಜೋಡಿಸುವಲ್ಲಿ ಯಶಸ್ವಿಯಾಗಿದ್ದ ಶ್ರೇಯಸ್ಸನ್ನು ಕಾಂಗ್ರೆಸ್ ನೇರವಾಗಿ ಪ್ರಿಯಾಂಕಾ ಅವರಿಗೇ ನೀಡಿದೆ. ಪ್ರಿಯಾಂಕಾ ಕೈವಾಡವಿಲ್ಲದಿದ್ದರೆ ಈ ಮೈತ್ರಿ ಕಷ್ಟವಿತ್ತು.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜನವರಿ 25 : ಚುಮುಚುಮು ಚಳಿಯಲ್ಲಿ ಉತ್ತರಪ್ರದೇಶದ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈಬಾರಿ ಎಲ್ಲರ ಕಣ್ಣು ಗುಳಿಕೆನ್ನೆಯ ಚತುರ ಮಾತುಗಾರ್ತಿ ಪ್ರಿಯಾಂಕಾ ಗಾಂಧಿ ವಧ್ರಾ ಮೇಲೆ ನೆಟ್ಟಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಿಯಾಂಕಾ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಬಾರಿ ಉತ್ತರಪ್ರದೇಶದಲ್ಲಿ ಗೆಲ್ಲಲೇಬೇಕೆಂದು ಹಠತೊಟ್ಟಿರುವ ಕಾಂಗ್ರೆಸ್ ಚುನಾವಣೆ ಪ್ರಚಾರದ ನೊಗವನ್ನು ಪ್ರಿಯಾಂಕಾ ಕೈಗಿತ್ತು ಸ್ವಲ್ಪಮಟ್ಟಿಗೆ ನಿರಾಳವಾಗಿದೆ. [ಯುಗಾದಿಗೆ ಮುನ್ನ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯ ನಿಜವಾಯಿತೇ?]

ಇಲ್ಲಿಯವರೆಗೆ ತೆರೆಯ ಹಿಂದಿನಿಂದಲೇ ಕಾರ್ಯ ನಿರ್ವಹಿಸುತ್ತಿದ್ದ ಪ್ರಿಯಾಂಕಾ ಈಗ ನೇರವಾಗಿಯೇ ಚುನಾವಣಾ ರಣತಂತ್ರಗಳಲ್ಲಿ ಭಾಗಿಯಾಗಲಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಭಾರೀ ಹುಮ್ಮಸ್ಸು ತರಲಿದೆ.[ಉಪ್ರ ಚುನಾವಣೆ ಪೋಸ್ಟರ್ ಗಳಲ್ಲಿ ಡಿಂಪಲ್-ಪ್ರಿಯಾಂಕಾ ಕಾರುಬಾರು]

ಆಂತರಿಕ ಬಡಿದಾಟಗಳಿಂದ ಜರ್ಝರಿತವಾಗಿದ್ದ ಸಮಾಜವಾದಿ ಪಕ್ಷದ ಜೊತೆ ಕಾಂಗ್ರೆಸ್ ಕೈಜೋಡಿಸುವಲ್ಲಿ ಯಶಸ್ವಿಯಾಗಿದ್ದ ಶ್ರೇಯಸ್ಸನ್ನು ಕಾಂಗ್ರೆಸ್ ನೇರವಾಗಿ ಪ್ರಿಯಾಂಕಾ ಅವರಿಗೇ ನೀಡಿದೆ. ಪ್ರಿಯಾಂಕಾ ಕೈವಾಡವಿಲ್ಲದಿದ್ದರೆ ಈ ಮೈತ್ರಿ ಕಷ್ಟವಿತ್ತು, ಮತ್ತು ಚುನಾವಣೆಯಲ್ಲಿ ಜಯವೂ ಗಗನಕುಸುಮವಾಗಿ ಕಾಣುತ್ತಿತ್ತು.[ರಾಹುಲ್ ಸತತ ವೈಫಲ್ಯ: ಪ್ರಿಯಾಂಕ ಗಾಂಧಿಗೆ ಮಹತ್ವದ ಜವಾಬ್ದಾರಿ?]

ಪ್ರಿಯಾಂಕಾರಲ್ಲಿ ಕಂಡಿದ್ದಾರಾ ಇಂದಿರಾ?

ಪ್ರಿಯಾಂಕಾರಲ್ಲಿ ಕಂಡಿದ್ದಾರಾ ಇಂದಿರಾ?

ನೋಟದಲ್ಲಿ, ನಡೆನುಡಿಯಲ್ಲಿ ಎಂದಿಗೂ ಪ್ರಿಯಾಂಕಾರಲ್ಲಿ ಅವರಜ್ಜಿ ಇಂದಿರಾ ಗಾಂಧಿಯನ್ನು ಕಂಡಿದ್ದಾರೆ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ಸನ್ನು ಸಮರ್ಥವಾಗಿ ಮುಂದೆ ನಡೆಸಿಕೊಂಡು ಹೋಗುವ ತಾಕತ್ತು ಅವರಲ್ಲಿದೆ ಎಂಬ ನಂಬಿಕೆಯೂ ಇದೆ. ಈ ನಂಬಿಕೆಯನ್ನು ಪ್ರಿಯಾಂಕಾ ಉಳಿಸಿಕೊಂಡು ಹೋಗುತ್ತಾರಾ? ಕಾಲವೇ ನಿರ್ಧರಿಸಲಿದೆ.

ಚುನಾವಣೆ ಬಂದಾಗಲಷ್ಟೇ ಕಾಣಿಸಿಕೊಳ್ಳುವ ಪ್ರಿಯಾಂಕಾ

ಚುನಾವಣೆ ಬಂದಾಗಲಷ್ಟೇ ಕಾಣಿಸಿಕೊಳ್ಳುವ ಪ್ರಿಯಾಂಕಾ

2014ರಲ್ಲಿ ನಡೆದಿದ್ದ ಚುನಾವಣೆಯನ್ನು ಗಮನಿಸಿದರೆ ಪ್ರಿಯಾಂಕಾ ಅವರ ಭಾಗವಹಿಸುವಿಕೆ 2017ರಲ್ಲಿ ಅಂತಹ ಮಹತ್ತರ ಬದಲಾವಣೆ ತರುವುದು ಅಸಾಧ್ಯ ಎಂದು ಕೆಲ ರಾಜಕೀಯ ಪಂಡಿತರು ಹೇಳುತ್ತಿದ್ದಾರೆ. ಇಡೀವರ್ಷ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರದಿದ್ದ ಪ್ರಿಯಾಂಕಾ ಮತ್ತೆ ಕಾಣಿಸಿಕೊಂಡಿರುವುದು ಚುನಾವಣೆ ಸಮಯದಲ್ಲಿ ಮಾತ್ರ.

ರಾಹುಲ್‌ಗಿಂತ ಪ್ರಿಯಾಂಕಾ ಸಾವಿರ ಪಾಲು ಮೇಲು

ರಾಹುಲ್‌ಗಿಂತ ಪ್ರಿಯಾಂಕಾ ಸಾವಿರ ಪಾಲು ಮೇಲು

ಹಿಂದಿನ ಚುನಾವಣೆ ಫಲಿತಾಂಶ ಮತ್ತು ಜನಪ್ರಿಯತೆಯ ದೃಷ್ಟಿಕೋನದಿಂದ ನೋಡಿದರೆ, ಪ್ರಿಯಾಂಕಾ ಗಾಂಧಿ ವಧ್ರಾ ಅವರು ರಾಹುಲ್ ಗಾಂಧಿ ಅವರಿಗಿಂತ ಸಾವಿರ ಪಾಲು ಉತ್ತಮ ಎಂಬ ಮಾತು ಕೂಡ ತೇಲಿ ಬರುತ್ತಿದೆ. ಹಿಂದೆ ಕೂಡ ರಾಹುಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಹಲವಾರು ಚುನಾವಣೆಗಳನ್ನು ಹೀನಾಯವಾಗಿ ಸೋತಿದೆ.

ಯುವಜನತೆಯನ್ನು ಪ್ರಿಯಾಂಕಾ ಸೆಳೆಯುವರೆ?

ಯುವಜನತೆಯನ್ನು ಪ್ರಿಯಾಂಕಾ ಸೆಳೆಯುವರೆ?

ಪ್ರಿಯಾಂಕಾ ಚುನಾವಣೆ ಪ್ರಚಾರಕ್ಕೆ ಬಂದರೆ ಯುವಕ ಯುವತಿಯರಲ್ಲಿ ಹುಮ್ಮಸ್ಸು ದುಮ್ಮಡಿಯಾಗುತ್ತದೆ. ಹಿಂದಿನ ಚುನಾವಣೆಗಳಲ್ಲಿ ಯುವ ಜನತೆಯನ್ನು ಸೆಳೆಯುವಲ್ಲಿ ರಾಹುಲ್ ಗಾಂಧಿ ಸೋತಿರುವುದರಿಂದ ಸಹಜವಾಗಿ ಎಲ್ಲರ ಚಿತ್ತ ಪ್ರಿಯಾಂಕಾರತ್ತ ಹರಿದಿದೆ.

ಮೈತ್ರಿ ಸಾಧ್ಯವಾಗಿದ್ದೇ ಪ್ರಿಯಾಂಕಾರಿಂದ

ಮೈತ್ರಿ ಸಾಧ್ಯವಾಗಿದ್ದೇ ಪ್ರಿಯಾಂಕಾರಿಂದ

ಉತ್ತರಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಗೆಲ್ಲುವ ಸಾಮರ್ಥ್ಯ ಕಾಂಗ್ರೆಸ್ಸಿಗೆ ಇಲ್ಲದಿರುವುದರಿಂದ ಮತ್ತು ಅದರ ಭವಿಷ್ಯ ಡೋಲಾಯಮಾನವಾಗಿ ತೋರಿದ್ದರಿಂದ, ಮತ್ತು ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿಯ ಸಂಭಾವ್ಯತೆ ಕ್ಷೀಣವಾಗಿ ಕಾಣಿಸುತ್ತಿದ್ದರಿಂದ ಪ್ರಿಯಾಂಕಾ ಮಧ್ಯಪ್ರವೇಶಿಸಲೇಬೇಕಾಯಿತು.

ಪ್ರಿಯಾಂಕಾರಿಗೆ ಆ್ಯಸಿಡ್ ಟೆಸ್ಟ್

ಪ್ರಿಯಾಂಕಾರಿಗೆ ಆ್ಯಸಿಡ್ ಟೆಸ್ಟ್

ಪ್ರಿಯಾಂಕಾ ಅವರ ಅಧಿಕೃತ ರಾಜಕೀಯ ಪ್ರವೇಶಕ್ಕೆ ಉತ್ತರಪ್ರದೇಶ ಚುನಾವಣೆ ಆ್ಯಸಿಡ್ ಟೆಸ್ಟ್ ಆಗುವುದಂತೂ ಗ್ಯಾರಂಟಿ. ಒಟ್ಟಾರೆ 403 ಕ್ಷೇತ್ರಗಳಿಗೆ ಫೆಬ್ರವರಿ 11ರಿಂದ ಮಾರ್ಚ್ 8ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ಸಿಗೆ 105 ಸೀಟುಗಳನ್ನು ಸಮಾಜವಾದಿ ಪಕ್ಷ ಬಿಟ್ಟುಕೊಟ್ಟಿದೆ. ಇದರಲ್ಲಿ ಎಷ್ಟು ಸೀಟು ಗೆಲ್ಲಲಿದೆ ಕಾಂಗ್ರೆಸ್?

ಲೋಕಸಭೆ ಚುನಾವಣೆಗೆ ಪ್ರಿಯಾಂಕಾ ಖಾತ್ರಿ

ಲೋಕಸಭೆ ಚುನಾವಣೆಗೆ ಪ್ರಿಯಾಂಕಾ ಖಾತ್ರಿ

ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಏನೇ ಆಗಲಿ, 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ವಧ್ರಾ ಅವರು ರಾಯ್ ಬರೇಲಿಯಿಂದ ಸ್ಪರ್ಧಿಸುವುದು ಹೆಚ್ಚೂಕಡಿಮೆ ಖಚಿತವಾಗಿದೆ. ಈ ದೃಷ್ಟಿಯಿಂದ ರಾಜಕೀಯದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಉತ್ತರಪ್ರದೇಶ ಚುನಾವಣೆಯನ್ನು ಪ್ರಿಯಾಂಕಾ ಗೆಲ್ಲಲೇಬೇಕಾಗಿದೆ.

English summary
The list of star campaigners released by the Congress for the Uttar Pradesh Assembly Elections 2017 has the name of Priyanka Gandhi. Her name is among the 40 released by the party for the crucial UP polls where the Congress is battling it out with its alliance partner the Samajwadi Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X