ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜವಾದಿ ಭದ್ರ ಕೋಟೆಯಲ್ಲಿ ಮೂರನೇ ಹಂತದ ಚುನಾವಣೆ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೂರನೇ ಹಂತದ ಮತದಾನ ಆರಂಭವಾಗಿದೆ. ಒಟ್ಟು 69 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು 826 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಲಕ್ನೊ, ಫೆಬ್ರವರಿ 19: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೂರನೇ ಹಂತದ ಮತದಾನ ಆರಂಭವಾಗಿದೆ. ಒಟ್ಟು 69 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು 826 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಉತ್ತರ ಪ್ರದೇಶದ ಫರೂಕಾಬಾದ್, ಹರ್ದೋಯಿ, ಕನ್ನಜ್, ಮೈನ್ ಪುರಿ, ಇಟವಾ, ಔರಿಯಾ, ಕಾನ್ಪುರ್, ದೇಹತ್, ಉನ್ನಾವೋ, ಲಕ್ನೊ, ಬರಬಂಕಿ ಮತ್ತು ಸೀತಾಪುರ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ.

UP elections 2017: Fate of 826 candidates to be decided

ಕಳೆದ ಬಾರಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಇದೇ 69 ಸ್ಥಾನಗಳು ಪ್ರಮುಖ ಪಾತ್ರ ವಹಿಸಿದ್ದವು. ಹೀಗಾಗಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಮೂರನೇ ಹಂತ ನಿರ್ಣಾಯಕವಾಗಲಿದೆ. [ಯೂ ಟರ್ನ್; ಕಾಂಗ್ರೆಸ್-ಎಸ್ಪಿ ಪರ ಪ್ರಚಾರಕ್ಕೆ ಧುಮಕಲಿದ್ದಾರೆ ಮುಲಾಯಂ]

2012ರ ಚುನಾವಣೆಯಲ್ಲಿ 69 ಸ್ಥಾನಗಳಲ್ಲಿ ಎಸ್ಪಿ 55ರಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಸರಳ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು. ಬಿಎಸ್ಪಿ, ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ 6, 5 ಮತ್ತು 2 ಸ್ಥಾನಗಳನ್ನು ಗೆಲ್ಲಲಷ್ಟೆ ಶಕ್ತವಾಗಿತ್ತು. ಒಂದು ಕ್ಷೇತ್ರವನ್ನು ಸ್ವತಂತ್ರ ಅಭ್ಯರ್ಥಿ ಗೆದ್ದುಕೊಂಡಿದ್ದರು.

ಒಟ್ಟು 826 ಅಭ್ಯರ್ಥಿಗಳು ಚುನಾವಣೆ ಎದುರಿಸುತ್ತಿದ್ದು, 2.41 ಕೋಟಿ ಮತದಾರರು ಭವಿಷ್ಯ ನಿರ್ಧರಿಸಲಿದ್ದಾರೆ. [ದೇಶವನ್ನೇ ಕೊಳ್ಳೆ ಹೊಡೆದ ಯುವರಾಜರು -ಅಮಿತ್ ಶಾ]

English summary
Uttar Pradesh polls in the third phase on Sunday. It is a crucial phase of the elections in which the fate of 826 candidates will be decided. The districts which would go to polls are Farrukhabad, Hardoi, Kannauj, Mainpuri, Etawah, Auraiya, Kanpur Dehat, Kanpur, Unnao, Lucknow, Barabanki and Sitapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X