ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ. ಪ್ರ ಚುನಾವಣೆ: ಸಮಾಜವಾದಿ ಭದ್ರ ಕೋಟೆಯಲ್ಲಿ 61.16% ಮತದಾನ

ಪ್ರತಿಷ್ಠಿತ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೂರನೇ ಹಂತದ ಚುನಾವಣೆಯಲ್ಲಿ ಶೇಕಡಾ 61.16ರಷ್ಟು ಮತದಾನವಾಗಿದೆ. ಮೊದಲ ಎರಡು ಹಂತಗಳಿಗೆ ಹೋಲಿಸಿದರೆ ಎರಡನೇ ಹಂತದಲ್ಲಿ ಮತದಾನ ಪ್ರಮಾಣ ಇಳಿಕೆಯಾಗಿದೆ.

By Sachhidananda Acharya
|
Google Oneindia Kannada News

ಲಕ್ನೋ, ಫೆಬ್ರವರಿ 13: ಪ್ರತಿಷ್ಠಿತ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೂರನೇ ಹಂತದ ಚುನಾವಣೆಯಲ್ಲಿ ಶೇಕಡಾ 61.16ರಷ್ಟು ಮತದಾನವಾಗಿದೆ.

ಮಧ್ಯಾಹ್ನ ಮೂರು ಗಂಟೆ ವೇಳೆಗೆ ಕೇವಲ ಶೇಕಡಾ 51ರಷ್ಟು ಮತದಾನವಾಗಿತ್ತು. ಸಂಜೆ ವೇಳೆಗೆ ಮತದಾನ ಬಿರುಸುಗೊಂಡಿದ್ದರಿಂದ ಒಟ್ಟು ಮತದಾನ ಶೇಕಡಾ 62ರ ಗಡಿ ತಲುಪಿದೆ.[ಯೂ ಟರ್ನ್; ಕಾಂಗ್ರೆಸ್-ಎಸ್ಪಿ ಪರ ಪ್ರಚಾರಕ್ಕೆ ಧುಮಕಲಿದ್ದಾರೆ ಮುಲಾಯಂ]

UP Election 2017: 62% voter turnout in the third phase

ಮೊದಲ ಎರಡು ಹಂತಗಳಿಗೆ ಹೋಲಿಸಿದರೆ ಎರಡನೇ ಹಂತದಲ್ಲಿ ಮತದಾನ ಪ್ರಮಾಣ ಇಳಿಕೆಯಾಗಿದೆ. ಮೊದಲ ಹಂತದಲ್ಲಿ ಶೇಕಡಾ 64.2 ಮತ್ತು ಎರಡನೇ ಹಂತದಲ್ಲಿ ಶೇಕಡಾ 66 ರಷ್ಟು ಮತದಾನ ನಡೆದಿತ್ತು.[ದೇಶವನ್ನೇ ಕೊಳ್ಳೆ ಹೊಡೆದ ಯುವರಾಜರು -ಅಮಿತ್ ಶಾ]

ಸಮಾಜವಾದಿ ಪಕ್ಷದ ಭದ್ರ ಕೋಟೆಯಾದ 12 ಜಿಲ್ಲೆಗಳಲ್ಲಿ ಒಟ್ಟು 69 ಸ್ಥಾನಗಳಿಗೆ ಭಾನುವಾರ ಮತದಾನ ನಡೆದಿತ್ತು. 2012ರಲ್ಲಿ ಇಲ್ಲಿ 55 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಗೆಲುವು ಸಾಧಿಸಿತ್ತು. ಆಡಳಿತರೂಢ ಪಕ್ಷದ ಭದ್ರ ಕೋಟೆಯಲ್ಲಿ ಮತ ಪ್ರಮಾಣ ಇಳಿಕೆಯಾಗಿರುವುದರಿಂದ ಸಮಾಜವಾದಿ ಪಕ್ಷಕ್ಕೆ ಇದು ಒಳ್ಳೆಯ ಬೆಳವಣಿಗೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿವೆ.

ಮಾರ್ಚ್ 11ರಂದು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ.

English summary
Third phase of Uttar Pradesh assembly polls held on Sunday. It is a crucial phase of the elections in which the fate of 826 candidates will be decided. The 69 constituencies that are voting in the third phase of the polls have recorded a turnout of 61.16%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X