ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಾಯಣ ಮ್ಯೂಸಿಯಂಗೆ ಇದ್ದ ಅಡಚಣೆ ನಿವಾರಿಸಿದ ಯೋಗಿ

ಮ್ಯೂಸಿಯಂಗಾಗಿ 25 ಎಕರೆ ಜಾಗ ಗುರುತಿಸಿ ವರ್ಷಗಳೇ ಕಳೆದಿದ್ದರೂ, ಸಮಾಜವಾದಿ ಪಕ್ಷವು ಜಾಗ ಹಸ್ತಾಂತರಕ್ಕೆ ಮನಸ್ಸು ಮಾಡಿರಲಿಲ್ಲ. ಈಗ ಯೋಗಿ ಆದಿತ್ಯನಾಥ್ ಸಿಎಂ ಆದ ಮೇಲೆ ಮ್ಯೂಸಿಯಂ ಯೋಜನೆಗೆ ಮತ್ತೆ ಚಾಲನೆ ಸಿಕ್ಕಿದೆ.

|
Google Oneindia Kannada News

ಲಕ್ನೋ, ಮಾರ್ಚ್ 21: ಅಯೋಧ್ಯೆಯಲ್ಲಿ ರಾಮಾಯಣ ವಸ್ತುಸಂಗ್ರಹಾಲಯ ಕಟ್ಟಬೇಕೆಂಬ ಕೇಂದ್ರ ಸರ್ಕಾರದ ಬಹು ದಿನಗಳ ಆಕಾಂಕ್ಷೆ ಈಡೇರಿಕೆಗೆ ಈಗ ಕಾಲ ಕೂಡಿಬಂದಿದೆ.

ವಸ್ತು ಸಂಗ್ರಹಾಲಕ್ಕಾಗಿ ಗುರುತಿಸಿದ್ದ ಜಾಗಕ್ಕೆ ಇದ್ದ ಅಡಚಣೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿರುವ ಉತ್ತರ ಪ್ರದೇಶದ ನೂತನ ಸಿಎಂ ಯೋಗಿ ಆದಿತ್ಯನಾಥ್, ಮ್ಯೂಸಿಯಂ ಕಟ್ಟಲು ಬೇಕಿದ್ದ 25 ಎಕರೆ ಭೂಮಿಗೆ ಹಸಿರು ನಿಶಾನೆ ನೀಡಿದ್ದಾರೆ.[ಯುಪಿ ಸಿಎಂ ಆದಿತ್ಯನಾಥ್ ಪರಮಾಪ್ತ ಈ ಮುಸ್ಲಿಂ ಯುವಕ]

UP CM Yogi Adityanath clears land for Ramayana museum in Ayodhya

ಈ ವಾರಾಂತ್ಯಕ್ಕೆ ಅದು ಮ್ಯೂಸಿಯಂ ನಿರ್ಮಾಣ ಸಮಿತಿಗೆ ಅದು ಹಸ್ತಾಂತರವಾಗಲಿದೆ. ಈ ಜಾಗದಲ್ಲಿ ರಾಮಾಯಣದಲ್ಲಿ ಶ್ರೀ ರಾಮನನ್ನು ಯಾವ ರೀತಿಯಲ್ಲಿ ನಿರೂಪಿಸಲಾಗಿದೆಯೋ ಅದೇ ರೀತಿಯಲ್ಲಿ ಮ್ಯೂಸಿಯಂನಲ್ಲೂ ಶ್ರೀರಾಮನನ್ನು ನಿರೂಪಿಸಲಾಗುತ್ತದೆ ಎಂದು ಹೇಳಲಾಗಿದೆ.[ರಾಮ ಜನ್ಮಭೂಮಿ ವಿವಾದ, ಕೋರ್ಟ್ ಹೊರಗೆ ಬಗೆಹರಿಸಿಕೊಳ್ಳಿ]

ಮ್ಯೂಸಿಯಂಗೆ ನಿರ್ಮಾಣಕ್ಕಾಗಿ ಜಾಗ ಗುರುತಿಸಿ ಕೆಲ ವರ್ಷಗಳು ಕಳೆದಿದ್ದರೂ, ಆ ಭೂಮಿಯ ಹಸ್ತಾಂತರ ಸಾಧ್ಯವಾಗಿರಲಿಲ್ಲ. ಉತ್ತರ ಪ್ರದೇಶದಲ್ಲಿ ಈ ಹಿಂದಿದ್ದ ಸಮಾಜವಾದಿ ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ.[ಆ ಒಂದು ಘಟನೆಯೇ ಯೋಗಿ ಸಿಎಂ ಆಗಲು ಮೂಲ ಕಾರಣ!]

ಈಗ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಇದಕ್ಕೆ ಕಾಯಕಲ್ಪ ನೀಡಿದೆ. ಸಮಾಜವಾದಿ ಸರ್ಕಾರದಲ್ಲಿ ಧೂಳು ತಿನ್ನುತ್ತಿದ್ದ ಭೂಮಿ ಹಸ್ತಾಂತರ ಫೈಲ್ ಗೆ ಪುನಃ ಹೊರತೆಗೆಸಿ, ಭೂಮಿ ಹಸ್ತಾಂತರಕ್ಕೆ ಅಸ್ತು ಎಂದಿದೆ.

English summary
The Uttar Pradesh government on Tuesday cleared 25-acre land in Ayodhya to make way for a Ramayana Museum. Two days after taking over as the chief minister, Yogi Adityanath passed the file regarding the museum which was shelved by previous Samajwadi Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X