ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ ಬಿಜೆಪಿಯೊಳಗೇನಿದು ಮುಸ್ಲಿಮರ ಕಾದಾಟ?

ಉತ್ತರ ಪ್ರದೇಶ ಬಿಜೆಪಿ ನಾಯಕರ ಮಧ್ಯೆ ಮುಸ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಇದಕ್ಕೆ ಕೇಂದ್ರ ಸಚಿವೆ ಉಮಾ ಭಾರತಿ ಮತ್ತು ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿಕೆಗಳೇ ಸಾಕ್ಷಿ.

By ಅನುಶಾ ರವಿ
|
Google Oneindia Kannada News

ಲಕ್ನೊ, ಫೆಬ್ರವರಿ 27: ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ಒಡೆದ ಮನೆಯಾಗಿದೆಯಾ? ಹೌದು ಎನ್ನುತ್ತವೆ ಬಿಜೆಪಿ ನಾಯಕರ ಹೇಳಿಕೆಗಳು.

ಉತ್ತರ ಪ್ರದೇಶ ಬಿಜೆಪಿ ನಾಯಕರ ಮಧ್ಯೆ ಮುಸ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಇದಕ್ಕೆ ಕೇಂದ್ರ ಸಚಿವೆ ಉಮಾ ಭಾರತಿ ಮತ್ತು ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿಕೆಗಳೇ ಸಾಕ್ಷಿ.[ಯುಪಿ ಹಣೆಬರಹ ನಿರ್ಧರಿಸಲಿರುವ 5ನೇ ಹಂತದ ಮತದಾನ ಇಂದು]

UP assembly polls: BJP leaders divided on Muslim candidates

ಸೋಮವಾರ ಉಮಾ ಭಾರತಿಗೆ 'ಉತ್ತರ ಪ್ರದೇಶದಲ್ಲಿ ಯಾಕೆ ಬಿಜೆಪಿ ಒಂದೇ ಒಂದು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ?' ಎಂದು ಪತ್ರಕರ್ತರು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಉಮಾ ಭಾರತಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರಿಗೆ ಟಿಕೆಟ್ ನೀಡಬೇಕಾಗಿತ್ತು ಎಂದು ಹೇಳಿದ್ದಾರೆ.

"ಹೌದು ನಾವು ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರಿಗೆ ಟಿಕೆಟ್ ನೀಡಬೇಕಾಗಿತ್ತು. ಜತೆಗೆ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಮಹಿಳೆಯರಿಗೆ ಟಿಕೆಟ್ ನೀಡಬೇಕು ಎಂಬುದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಆಶಯವೂ ಆಗಿತ್ತು," ಎಂದು ಐದನೇ ಹಂತದ ಮತದಾನಕ್ಕೂ ಮೊದಲು ಉಮಾಭಾರತಿ ಹೇಳಿದರು.[ರಾಹುಲ್ ನಾಯಕತ್ವದ ಮೇಲೆ ಕಾರ್ಮೋಡದ ಕರಿನೆರಳು!]

ಆದರೆ ಉಳಿದ ಬಿಜೆಪಿ ನಾಯಕರಲ್ಲೂ ಇದೇ ಅಭಿಪ್ರಾಯವಿಲ್ಲ. ಬಿಜೆಪಿಯ ಸಂಸದ ಮತ್ತು ಭಜರಂಗದಳದ ಸಂಸ್ಥಾಪಕ ಸದಸ್ಯ ವಿನಯ್ ಕಟಿಯಾರ್ ಮಾತ್ರ ಅಯೋಧ್ಯೆಯಲ್ಲಿ ಯಾವುದೇ ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುವುದಿಲ್ಲ. ಬಿಜೆಪಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಯಾವುದೇ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.
"ಅಯೋಧ್ಯೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅವರು (ಮುಸ್ಲಿಂ ಅಭ್ಯರ್ಥಿಗಳು) ಇಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ," ಎನ್ನುತ್ತಾರೆ ವಿನಯ್ ಕಟಿಯಾರ್. ಈ ಮೂಲಕ ಉಮಾಭಾರತಿ ಹೇಳಿಕೆ ವಿರುದ್ಧ ಹೇಳಿಕೆಯನ್ನು ಅವರು ನೀಡುತ್ತಾರೆ.
ಮಾತ್ರವಲ್ಲ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟದೆ ಕ್ಷೇತ್ರದಲ್ಲಿ ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಬೆಲೆ ಇಲ್ಲ ಎನ್ನುತ್ತಾರೆ ಕಟಿಯಾರ್. (ಒನ್ ಇಂಡಿಯಾ ಸುದ್ದಿ)

English summary
Is the BJP a divided house when it comes to giving tickets to Muslim candidates in Uttar Pradesh? If statements of union minister Uma Bharati and BJP MP Vinay Katiyar are anything to go by then it very well may be.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X