ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ: ಕಾಂಗ್ರೆಸ್-ಎಸ್ಪಿ ಗೆಲುವಿಗೆ 35-37% ಮತಗಳು ಸಾಕಂತೆ!

By Sachhidananda Acharya
|
Google Oneindia Kannada News

ಲಕ್ನೊ, ಜನವರಿ 20: ಪ್ರತಿಷ್ಠಿತ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಮತ್ತು ಸಮಾಜವಾದಿ ಮೈತ್ರಿಕೂಟ ಶೇಕಡಾ 35-37 ಮತಗಳ ಮೇಲೆ ಕಣ್ಣಿಟ್ಟಿದೆ. ಎರಡೂ ಪಕ್ಷಗಳು ಗೆಲುವಿಗಾಗಿ ರಣತಂತ್ರ ರೂಪಿಸಿದ್ದು, ಶೇಕಡಾ 18 ರಷ್ಟಿರುವ ಮುಸ್ಲಿಮರ ಮತಗಳು ಹಾಗೂ ಮುಸ್ಲೇಮೇತರರ ಶೇಕಡಾ 25 ಮತಗಳನ್ನು ಪಡೆದರೆ ತಮ್ಮ ಗೆಲವು ನಿಶ್ಚಿತ ಅಂದುಕೊಂಡಿವೆ.

ಮುಖ್ಯವಾಗಿ ಚುನಾವಣೆಯಲ್ಲಿ ಬಲಪಂಥೀಯ ಬಿಜೆಪಿ ಮತ್ತು ದಲಿತ ಮುಖ ಹೊತ್ತ ಬಿಎಸ್ಪಿಯನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮುಖಾಮುಖಿಯಾಗಬೇಕಾಗಿದೆ. ಹೀಗಾಗಿ ಮುಸ್ಲಿಂ ಮತ್ತು ಇತರ ಸ್ವಲ್ಪ ಮತಗಳನ್ನು ಪಡೆದರೆ ಸುಲಭವಾಗಿ ಗೆಲುವು ಸಾಧಿಸಬಹುದು ಎಂದು ಎರಡೂ ಪಕ್ಷಗಳು ಅಂದುಕೊಂಡಿವೆ.[ಪಂಚ ರಾಜ್ಯಗಳ ಚುನಾವಣೆ: ಫಲಿತಾಂಶ ನಿರ್ಧರಿಸಲಿರುವ ಅಂಶಗಳಿವು]

UP: 35-37% votes are enough to SP-Congress alliance

ಉತ್ತರ ಪ್ರದೇಶದಲ್ಲಿ ಜಾತಿವಾರು ಮತಗಳನ್ನು ನೋಡುವುದಾದರೆ,

ಮೇಲ್ವರ್ಗ - 25%

ಯಾದವ - 10%

ಒಬಿಸಿ (ಯಾದವ ಹೊರತುಪಡಿಸಿ) 26%

ಮುಸ್ಲಿಂ - 18%

ದಲಿತ -21%

ಇದರಲ್ಲಿ ಬಿಜೆಪಿ ಹೆಚ್ಚಾಗಿ ಮೇಲ್ವರ್ಗದವರ ಮತಗಳನ್ನು ನೆಚ್ಚಿಕೊಂಡಿದ್ದರೆ, ಬಿಎಸ್ಪಿ ದಲಿತರ ಮತಗಳ ಮೇಲೆ ಕಣ್ನಿಟ್ಟಿದೆ. ಇದರ ಮಧ್ಯೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮುಸ್ಲಿ, ಯಾದವ್ ಮತ್ತು ಇತರ ಒಂದಷ್ಟು ಮತಗಳನ್ನು ಸೆಳೆಯಲು ಯೋಜನೆ ಹಾಕಿಕೊಂಡಿದೆ.[ಉತ್ತರ ಪ್ರದೇಶ: ಕಾಂಗ್ರೆಸ್-ಎಸ್ಪಿ ನಡುವೆ ಸೀಟು ಹಂಚಿಕೆ ಕಾದಾಟ]

ಯಾದವ ನಾಯಕರೇ ಸಮಾಜವಾದಿ ಪಕ್ಷದಲ್ಲಿರುವುದರಿಂದ ಯಾದವರ ಮತಗಳನ್ನು ಸೆಳೆಯುವುದು ಕಷ್ಟವಾಗಲಾರದು. ಆದರೆ ಮುಸ್ಲಿಂ ಮತಗಳನ್ನು ಬಿಎಸ್ಪಿ ಕಡೆಗೆ ಹೋಗದಂತೆ ತಡೆಯವ ಬಹುದೊಡ್ಡ ಸವಾಲು ಅವುಗಳ ಮುಂದಿದೆ. ಇದೇ ವೇಳೆ ಗೆಲುವಿಗಾಗಿ ಮೇಲ್ವರ್ಗ ಮತ್ತು ಒಬಿಸಿಯ ಒಂದಷ್ಟು ಮತಗಳನ್ನು ಸೆಳೆಯಲೇಬೇಕಾಗಿದೆ.

ಇದರ ನಡುವೆ ರಾಜ್ಯದಲ್ಲಿ ಯುವಕರ ಐಕನ್ ಆಗಿ ಬಿಂಬಿತವಾಗಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಒಂದಷ್ಟು ಮತಗಳನ್ನು ತರಲಿದ್ದಾರೆ ಎಂದುಕೊಳ್ಳಲಾಗಿದೆ. ಒಂದೊಮ್ಮೆ ಅದರಲ್ಲಿಯೂ ಎಸ್ಪಿ ಯಶಸ್ವಿಯಾದಲ್ಲಿ ಬಿಜೆಪಿ ಮತ್ತು ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷಕ್ಕೆ ಗೆಲುವು ಕಷ್ಟವಾಗಬಹುದು ಎಂದು ಚುನಾವಣಾ ಪಂಡಿತರು ವಿಶ್ಲೇಷಿಸಿದ್ದಾರೆ.

English summary
Samajwadi Party and Congress alliance are aiming to get 35-37% vote share in upcoming Uttar Pradesh Assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X