ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಧಾನ ವಿಫಲ: ಬರುವ ಬುಧವಾರ (ಸೆ 2) ಭಾರತ್ ಬಂದ್

|
Google Oneindia Kannada News

ನವದೆಹಲಿ, ಆಗಸ್ಟ್ 29 (ಪಿಟಿಐ) : ತಮ್ಮ ಬೇಡಿಕೆಗಳಿಗೆ ಕೇಂದ್ರ ಸರಕಾರದಿಂದ ಖಚಿತ ಭರವಸೆ ಸಿಗದ ಹಿನ್ನಲೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಬರುವ ಬುಧವಾರ (ಸೆಪ್ಟಂಬರ್ 2) ಭಾರತ್ ಬಂದಿಗೆ ಕರೆ ನೀಡಿದೆ.

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮುಂದಾಳುತ್ವದಲ್ಲಿ ಕೇಂದ್ರ ಸಚಿವರ ನಿಯೋಗ, ಕಾರ್ಮಿಕ ಮುಖಂಡರ ಜೊತೆ ನಡೆಸಿದ ಮಾತುಕತೆಗಳು ಫಲಪ್ರದವಾಗಲಿಲ್ಲ. ಕಾರ್ಮಿಕ ಸಂಘಟನೆಗಳು ತಮ್ಮ ಬೇಡಿಕೆಯ ವಿಚಾರದಲ್ಲಿ ರಾಜಿಯಾಗಲು ಒಪ್ಪದ ಹಿನ್ನಲೆಯಲ್ಲಿ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿವೆ.

ಹನ್ನೊಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಸೆಪ್ಟಂಬರ್ ಎರಡರಂದು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಭಾರತೀಯ ಮಜ್ದೂರ್‌ಸಂಘ, ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್, ಸಿಐಟಿಯು ಸೇರಿದಂತೆ ಹಲವು ಸಂಘಟನೆಗಳು ಬೆಂಬಲಿಸಲು ನಿರ್ಧರಿಸಿವೆ.

Government fails to break deadlock with trade unions, nationwide strike on Sept 2 imminent

ಕೇಂದ್ರ ಸರಕಾರದಿಂದ ಶುಕ್ರವಾರ (ಆ 28) ನಡೆದ ಸಭೆಯಲ್ಲಿ ಯಾವುದೇ ಭರವಸೆ ನಮಗೆ ಸಿಗಲಿಲ್ಲ. ಹೀಗಾಗಿ ನಾವು ಸೆಪ್ಟಂಬರ್ ಎರಡರಂದು ಮುಷ್ಕರಕ್ಕೆ ಕರೆ ನೀಡುತ್ತಿದ್ದೇವೆಂದು ಐಎನ್ ಟಿ ಯುಸಿ ಅಧ್ಯಕ್ಷ ಸಂಜೀವ್ ರೆಡ್ಡಿ ಹೇಳಿದ್ದಾರೆ.

ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದಿಗೆ ಬ್ಯಾಂಕ್ ನೌಕರರ ಸಂಘಟನೆಯೂ ಬೆಂಬಲ ಸೂಚಿಸಿದೆ.

ಕಾರ್ಮಿಕ ಮುಖಂಡರ ಜೊತೆಗಿನ ಮಾತುಕತೆಯಲ್ಲಿ ಜೇಟ್ಲಿ, ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ, ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್, ಇಂಧನ ಸಚಿವ ಪಿಯೂಸ್ ಚಾವ್ಲಾ, ಹಾಜರಿದ್ದರು.

ಸಂಘಟನೆಯ ಮುಖಂಡರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಕಾರ್ಮಿಕ ಸಂಘಟನೆಗಳು ಬಂದ್ ಹಿಂದಕ್ಕೆ ಪಡೆಯುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದೇವೆಂದು ಬಂಡಾರು ದತ್ತಾತ್ರೇಯ ಹೇಳಿದ್ದಾರೆ.

ಕಾರ್ಮಿಕ ಸಂಘಟನೆಗಳ ಕೆಲವೊಂದು ಪ್ರಮುಖ ಬೇಡಿಕೆಗಳು:

> ಸಾರ್ವಜನಿಕ ರಂಗದ ಶೇರು ವಿಕ್ರಯಕ್ಕೆ ಕಡಿವಾಣ
> ಬೆಲೆ ಏರಿಕೆ ತಡೆಗಟ್ಟಲು ಸೂಕ್ತ ಕ್ರಮ
> ರಸ್ತೆ ಸಾರಿಗೆ ಮಸೂದೆ-2014 ವಿಧೇಯಕ ವಾಪಾಸ್ ಪಡೆಯಬೇಕು
> ವಿಮಾ ರಂಗದಲ್ಲಿ ವಿದೇಶಿ ನೇರ ಬಂಡವಾಳ ಮಿತಿಯನ್ನು ಶೇ.49ರಷ್ಟು ಹೆಚ್ಚಿಸುವ ಸುಗ್ರೀವಾಜ್ಞೆ ವಾಪಾಸ್ ಪಡೆಯಬೇಕು.

English summary
The Union government has failed to break the deadlock with trade unions over their 12-point charter of demands, Trade Unions called for Bharat Bundh on September 2, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X