ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫನ್ನಿ ಟ್ವೀಟ್ಸ್ : ಬೀಡಿ ಸೇದೋಣ, ಗುಂಡು ಹಾಕೋಣ

By Mahesh
|
Google Oneindia Kannada News

ಬೆಂಗಳೂರು, ಫೆ. 29: ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಬಜೆಟ್ ಮಂಡಿಸಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಸೋಮವಾರ ಬಜೆಟ್ ಭಾಷಣದ ವೇಳೆ ಅರ್ಧ ಸಮಯ ನಿಂತು ಇನ್ನರ್ಧ ಸಮಯ ಕುಳಿತು ಭಾಷಣ ಮಾಡುವಷ್ಟರಲ್ಲಿ ಜೇಟ್ಲಿ ಸುಸ್ತಾಗಿದ್ದರು. ಜೇಟ್ಲಿ ಬಜೆಟ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮಾತುಕತೆ ಹೇಗಿದೆ ನೋಡೋಣ ಬನ್ನಿ..

ಉದ್ಯೋಗಿಗಳಿಗೆ ಆದಾಯ ತೆರಿಗೆ ಮಿತಿ ಹೆಚ್ಚಳವಾಗಿಲ್ಲ, ಆದರೆ, ಮನೆ ಬಾಡಿಗೆ ಭತ್ಯೆ ಮಿತಿಯಲ್ಲಿ ಕೊಂಚ ರಿಲೀಫ್ ನೀಡಲಾಗಿದೆ. ಮನೆ ನಿರ್ಮಾಣ, ಗೃಹ ಸಾಲದಲ್ಲೂ ಜನ ಸಾಮಾನ್ಯರಿಗೆ ಅನುಕೂಲಗಳಿವೆ. [LIVE: ಕೇಂದ್ರ ಬಜೆಟ್ ಮಂಡನೆ ವಿವರ, ಮುಖ್ಯಾಂಶ]

ಜನ ಸಾಮಾನ್ಯರ ನಿರೀಕ್ಷೆಗಳಾದ ಬೆಲೆ ಏರಿಕೆ, ಇಳಿಕೆ ಪುಟ ಗಮನಿಸಿದರೆ, ಮದ್ಯದ ಮೇಲಿನ ಸುಂಕದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ, ಸಿಗರೇಟು ತುಟ್ಟಿಯಾಗಿರುವುದು ಎದ್ದು ಕಾಣುತ್ತದೆ.[ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]

ಬಜೆಟ್ ಬಗ್ಗೆ ಅನೇಕ ಟ್ವೀಟ್ ಗಳು ಬಂದಿವೆ. ಅದರಲ್ಲಿ ಆಯ್ದ ಕೆಲವು ಟ್ವೀಟ್ ಇಲ್ಲಿವೆ.

ಹುರೆ! ಬೀಡಿ ಸೇದೋಣ, ಮದ್ಯ ಕುಡಿಯೋಣ

ಹುರೆ! ಬೀಡಿ ಸೇದೋಣ, ಮದ್ಯ ಕುಡಿಯೋಣ

ಬೀಡಿ ಬಿಟ್ಟು ಎಲ್ಲಾ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ. ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಶೇ 10 ರಿಂದ 15ರಷ್ಟು ಏರಿಕೆ. ಅಂದರೆ, ಸಿಗರೇಟು, ಗುಟ್ಕಾ ಬೆಲೆ ಏರಿಕೆ.ಆದರೆ, ಮದ್ಯದ ಮೇಲೆ ಯಾವುದೇ ರೀತಿ ಅಬಕಾರಿ ಸುಂಕ ಏರಿಸಿಲ್ಲ

ಯೋಜನೆಗಳ ಹೆಸರು ಅರ್ಥವಾಗುವಂತಿದೆ

ಯೋಜನೆಗಳ ಹೆಸರು ಉದ್ದುದ್ದಾ, ರಾಷ್ಟ್ರೀಯ ನಾಯಕರ ಹೆಸರುಗಳನ್ನು ಇಡುವುದು ಬದಲಾಗಬೇಕು.

ದೊಡ್ಡ ನಾನ್ಸೆನ್ ಘೋಷಣೆ, ಬೀಡಿ ಯಾಕ್ ಬಿಟ್ರಿ

ಬಿಜೆಪಿ ಸಂಸದರು, ನಾಯಕರು ಬೀಡಿ ಉದ್ಯಮಿಗಳಾ? ಬೀಡಿ ಮೇಲೆ ಸುಂಕ ಏರಿಕೆ ಮಾಡಿಲ್ಲವೇಕೆ?

ಬೀಡಿ ಸೇದೋಣ, ದಮ್ ಮಾರೋ ದಮ್

ತಂಬಾಕು ಪ್ರಿಯರಿಗೆ ಮತ್ತೊಮ್ಮೆ ಕಹಿ ಸುದ್ದಿ ಬಂದಿದೆ. ಬೀಡಿ ಸೇದೋಣ, ದಮ್ ಮಾರೋ ದಮ್

ಮಧ್ಯಮ ವರ್ಗಕ್ಕೆ ಏನು ಸಿಕ್ಕಿಲ್ಲ ಬಿಡಿ

ಮಧ್ಯಮ ವರ್ಗಕ್ಕೆ ಏನು ಸಿಕ್ಕಿಲ್ಲ ಬಿಡಿ, ಸಿಗರೇಟ್ ಬಿಟ್ಟು ಬೀಡಿ ಸೇದಬಹುದು ಅಷ್ಟೇ.

ದೀನ್ ದಯಾಳ್ ಉಪಾಧ್ಯಾಯ್ ಹುಟ್ಟುಹಬ್ಬಕ್ಕೆ ಎಷ್ಟು ಮೊತ್ತ?

ದೀನ್ ದಯಾಳ್ ಉಪಾಧ್ಯಾಯ್, ಗುರು ಗೋವಿಂದ್ ಸಿಂಗ್ ಜೀ ಹುಟ್ಟುಹಬ್ಬಕ್ಕೆ 100 ಕೋಟಿ ರು ?ಯಾರ ಮೆಚ್ಚುಗೆಗಾಗಿ?

English summary
Union Finance Minister Arun Jaitley proposed his 3rd consecutive Union Budget on the floor of the Lok Sabha and focused over empowerment of rural areas. Here is how people reacted over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X