ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ 9 ಆಧಾರ ಸ್ತಂಭಗಳ ಮೇಲೆ ಅರುಣ್ ಜೇಟ್ಲಿ ಬಜೆಟ್ ನಿಂತಿದೆ

|
Google Oneindia Kannada News

ನವದೆಹಲಿ, ಫೆಬ್ರವರಿ, 29: ಎಲ್ಲರ ಚಿತ್ತ ಕೇಂದ್ರ ಬಜೆಟ್ ಮಂಡನೆ ಮೇಲೆ ನೆಟ್ಟಿದೆ. ಹೌದು ದೇಶದ ಮುಂದಿ ಆರ್ಥಿಕ, ಸಾಮಾಜಿಕ ವ್ಯವಸ್ಥೆಗಳನ್ನು ನಿರ್ಮಾಣ ಮಾಡಲು ಕಾರಣವಾಗುವ, ಅರ್ಥ ವ್ಯವಸ್ಥೆಯನ್ನು ರೂಪಿಸುವ ಬಜೆಟ್ ನ್ನು ಯಾವ ಆಧಾರದಲ್ಲಿ ಸಿದ್ಧ ಮಾಡಲಾಗುತ್ತದೆ ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ.[ಕೇಂದ್ರ ಹಣಕಾಸು ಬಜೆಟ್ ಲೈವ್]

ಬಜೆಟ್ ನ ಮೂಲಾಂಶಗಳು ಯಾವವು? ಯಾವ ಯಾವ ಕ್ಷೇತ್ರಗಳಿಗೆ ಎಷ್ಟು ಹಣ ಮೀಸಲಿಡಬೇಕು? ಆರ್ಥಿ ಅಭಿವೃದ್ಧಿ ದರ ಅರಿಯುವುದು ಹೇಗೆ? ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯಗಳೇನು? ಎಂಬ ಅನೇಕ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಹಾಗಾದರೆ ಬಜೆಟ್ ತಯಾರಿಕೆ ಆಧಾರಗಳ ಮೇಲೆ ಒಂದು ರೌಂಡ್ ಹಾಕಿಕೊಂಡು ಬರೋಣ....

ಕೃಷಿ

ಕೃಷಿ

ದೇಶದ ಬೆನ್ನಲುಬಾದ ಕೃಷಿಗೆ ಬಜೆಟ್ ನಲ್ಲಿ ಮೊದಲ ಆದ್ಯತೆ. ರೈತರ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ಮುಂದಿನ 5 ವರ್ಷದ ಲೆಕ್ಕದಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತದೆ.

ಗ್ರಾಮೀಣ ವಿಭಾಗ

ಗ್ರಾಮೀಣ ವಿಭಾಗ

ಗ್ರಾಮೀಣ ಜನರ ಕಲ್ಯಾಣ ಮತ್ತು ಉದ್ಯೋಗವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುತ್ತದೆ.

ಸಾಮಾಜಿಕ ಕ್ಷೇತ್ರ

ಸಾಮಾಜಿಕ ಕ್ಷೇತ್ರ

ಸಮಾಜದ ಸ್ತರಗಳ ಬದಲಾವಣೆ ಮತ್ತು ಸಮಾನತೆಯ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗುತ್ತದೆ.

ಶಿಕ್ಷಣ

ಶಿಕ್ಷಣ

ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು. ಹೊಸ ಸಂಶೋಧನೆಗಳಿಗೂ ಅವಕಾಶ ಕಲ್ಪಿಸಲಾಗುವುದು.

ಮೂಲಸೌಕರ್ಯ

ಮೂಲಸೌಕರ್ಯ

ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಕರ್ಯ ಮತ್ತು ಜೀವನ ಮಟ್ಟ ಏರಿಕೆಗೆ ನಂತರದ ಸ್ಥಾನ

ಹಣಕಾಸು ಸುಧಾರಣೆ

ಹಣಕಾಸು ಸುಧಾರಣೆ

ಹಣಕಾಸು ವ್ಯವಸ್ಥೆ ಸುಧಾರಣೆ. ಪಾರದರ್ಶಕ ಹಣದ ಹರಿವು, ಬ್ಯಾಂಕ್ ಗಳಲ್ಲಿ ಸುಲಭ ವ್ಯವಹಾರಕ್ಕೂ ಆದ್ಯತೆ ನೀಡಲಾಗುವುದು.

ಆಡಳಿತ ಸುಧಾರಣೆ

ಆಡಳಿತ ಸುಧಾರಣೆ

ಜನರ ಬಳಿಗೆ ಆಡಳಿತ ತೆರಳಲು, ಯೋಜನೆಗಳು ಸುಲಭ ಮತ್ತು ಸರಳವಾಗಿ ಮುಟ್ಟಲು ಕ್ರಮ ತೆಗೆದುಕೊಳ್ಳಲಾಗುತ್ತದೆ.

ತೆರಿಗೆ ಪದ್ಧತಿ

ತೆರಿಗೆ ಪದ್ಧತಿ

ತೆರಿಗೆ ವಸೂಲಿ ಮತ್ತು ಕಟ್ಟು ನಿಟ್ಟಿನ ತೆರಿಗೆ ಪದ್ಧತಿ ಸಹ ಬಜೆಟ್ ಒಂಗೊಂಡಿರುವ ಪ್ರಮುಖ ಅಂಶ.

English summary
Finance Minister Arun Jaitley presenting the Union Budget 2016-17 amidst challenges like rural distress, poor corporate growth, huge financial burden on 7th pay commission and OROP. Here is the basic points of a Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X