ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.1 ರಂದು ಸಿಟಿ, ಎಂಆರ್‌ಐ, ಅಲ್ಟ್ರಾ ಸ್ಕ್ಯಾನ್ ಬಂದ್!

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 31: ಪ್ರಸವಪೂರ್ವ ಮತ್ತು ಗರ್ಭಪೂರ್ವ ಲಿಂಗ ಪತ್ತೆ ಕಾಯ್ದೆ(ಪಿಸಿಪಿಎನ್ ಡಿಟಿ) ತಿದ್ದುಪಡಿ ಮಾಡುವಂತೆ ಆಗ್ರಹಿಸಿ ಇಂಡಿಯನ್ ರೇಡಿಯೋಲಾಜಿಕಲ್ ಅಂಡ್ ಇಮೇಜಿಂಗ್ ಅಸೋಸಿಯೇಶನ್(ಎಂಎಸ್ಬಿಐಆರ್ಐಎ) ದೇಶಾದ್ಯಂತ ಗುರುವಾರ (ಸೆಪ್ಟೆಂಬರ್ 01) ಮುಷ್ಕರ ಹಮ್ಮಿಕೊಂಡಿದ್ದಾರೆ.

ಹೀಗಾಗಿ ಗುರುವಾರದಂದು ಸಿಟಿ, ಎಂಆರ್‌ಐ ಮತ್ತು ಅಲ್ಟ್ರಾ ಸೇರಿದಂತೆ ಎಲ್ಲಾ ಬಗೆಯ ಸ್ಕ್ಯಾನ್ ಸೆಂಟರ್‌ ಗಳು ಬಂದ್ ಆಗಲಿವೆ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ದೊಡ್ಡ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಯಂತ್ರ ಚಾಲನೆಗೊಳಿಸಲಾಗುವುದು.[ದೇಶವ್ಯಾಪಿ ಮುಷ್ಕರ:ಯಾವ ಸೇವೆ ಲಭ್ಯ? ಯಾವುದು ಅಲಭ್ಯ?]

ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ದೈನಂದಿನ ಸ್ಕ್ಯಾನಿಂಗ್ ನಡೆಸುವುದಿಲ್ಲ ಎಂದು ಡಾ.ರಾಘವೇಂದ್ರ ಭಟ್ ಹೇಳಿದ್ದಾರೆ. ಆದರೆ, CAT ಹಾಗೂ ಎಂಆರ್ ಐ ಸ್ಕ್ಯಾನ್ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

Ultrasound services will be suspended Radiologists Stir across India

ಪ್ರತಿಭಟನೆ ಏಕೆ?: ಗರ್ಭಿಣಿ ಮಹಿಳೆಯರ ಸ್ಕ್ಯಾನಿಂಗ್ ಮಾಡಿಸಿ ಹೆಣ್ಣು ಭ್ರೂಣ ಪತ್ತೆಯಾದ ಬಳಿಕ ಹತ್ಯೆಗೆ ಮುಂದಾಗುತ್ತಿದ್ದಾರೆ. ಇದರಿಂದ ದೇಶದಲ್ಲಿ ಗಂಡು- ಹೆಣ್ಣಿನ ನಡುವಿನ ಅನುಪಾತ(1000:940) ಏರುಪೇರಾಗಲಿದೆ. ಈ ಪಿಡುಗನ್ನು ತಡೆಗಟ್ಟಲು 1996ರಲ್ಲಿ ಕಾಯಿದೆ ಜಾರಿಗೆ ತರಲಾಯಿತು. ಹೆಣ್ಣು ಮಕ್ಕಳನ್ನು ಸಂರಕ್ಷಿಸುವ ಕಾಯಿದೆಗೆ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಸಹಮತವಿದೆ.

ಆದರೆ, ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಲಿಂಗ ಪತ್ತೆ ಮಾಡಲಾಗುತ್ತಿದೆ ಎಂದು ದೂರುವ ಅಧಿಕಾರಿಗಳು ಅನಗತ್ಯವಾಗಿ ಸೆಂಟರ್ ಗಳ ಮೇಲೆ ಕ್ರಮ ಜರುಗಿಸಲು ಮುಂದಾಗಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಅನಿವಾರ್ಯವಾಗಿ ಒಂದು ದಿನ ಮುಷ್ಕರ ನಡೆಸುತ್ತಿದ್ದು, ಸರಕಾರದ ಸ್ಪಂದಿಸದಿದ್ದಲ್ಲಿ ಮುಂದೆ ನಿರಂತರ ಮುಷ್ಕರ ನಡೆಯಲಿದೆ ಎಂದು ಸ್ಕ್ಯಾನಿಂಗ್ ಸೆಂಟರ್ ಗಳು ಎಚ್ಚರಿಕೆ ನೀಡಿವೆ.

English summary
Ultrasound services,CAT scan and MRI will be suspended across India on Thursday(September 01) The strike has been called by Indian Radiological and Imaging Association (MSBIRIA) to protest Pre-conception and Pre-Natal Diagnostic Techniques (PCPNDT) Act
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X