ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ಉಳಿಸಲು ಉಜಾಲ ಯೋಜನೆಯಲ್ಲಿ ಸರಕಾರದ ಶ್ರಮವಿದು

By ನಿತಿನ್ ಮೆಹ್ತಾ, ಪ್ರಣವ್ ಗುಪ್ತಾ
|
Google Oneindia Kannada News

ದೇಶದಲ್ಲಿ ಯಾವ ಪ್ರಮಾಣದ ವಿದ್ಯುತ್ ಅಗತ್ಯ ಇದೆಯೋ ಅಷ್ಟು ಉತ್ಪಾದನೆ ಮಾಡುವುದು ಒಂದು ಕಡೆ ಸವಾಲು ಅನ್ನೋದು ಹೌದು. ಅದರ ಜತೆಗೆ ವಿದ್ಯುತ್ ಉಳಿತಾಯ ಮಾಡುವಂಥ ಎಲೆಕ್ಟ್ರಾನಿಕ್ ಉತ್ಪನ್ನಗಳ ಬಳಕೆ ಮಾಡುವುದರ ಬಗ್ಗೆ, ವಿದ್ಯುತ್ ಉಳಿತಾಯದ ಬಗ್ಗೆ ಪ್ರಚಾರ ನಡೆಸಲಾಗುತ್ತಿದೆ.

ಉನ್ನತ್ ಜೀವನ್ ಬೈ ಅಫೋರ್ಡಬಲ್ ಎಲ್ ಇಡಿ'ಸ್ ಅಂಡ್ ಅಪ್ಲೈಯನ್ಸಸ್ (ಉಜಾಲ) ಯೋಜನೆಯನ್ನು ಸರಕಾರವು ಪರಿಚಯಿಸಿದೆ. ಅದರ ಮೂಲಕ ವಿದ್ಯುತ್ ಉಳಿತಾಯ ಮಾಡಲು ಅನುಕೂಲ ಆಗುವಂಥ ವಸ್ತುಗಳನ್ನು ಸಬ್ಸಿಡಿ ದರದಲ್ಲಿ ದೇಶಾದ್ಯಂತ ನೀಡಲು ಮುಂದಾಗಿದೆ.[ಭಾರತದ ಆರ್ಥಿಕತೆಗೆ ಶಕ್ತಿ ತುಂಬಲು ವಿದ್ಯುತ್ ದರದಲ್ಲಿ ಇಳಿಕೆ]

UJALA: Promoting use of energy efficient products?

ಈ ಯೋಜನೆ ಅಡಿ ಎಲ್ ಇಡಿ ಲ್ಯಾಂಪ್, ಟ್ಯೂಬ್ ಲೈಟ್ ಮತ್ತು ಫೈವ್ ಸ್ಟಾರ್ ಗುಣಮಟ್ಟದ ಫ್ಯಾನ್ ಅನ್ನು ಸರಕಾರ ವಿತರಿಸುತ್ತಿದೆ. ಅಂದಹಾಗೆ ಈ ಉಜಾಲ ಯೋಜನೆಯಿಂದ ಏನು ಅನುಕೂಲ ಅಂತೀರಾ? ವಿದ್ಯುತ್ ಉಳಿತಾಯ ಮಾಡುವುದಕ್ಕೆ ಇಂಥ ವಸ್ತುಗಳಿಂದ ಅನುಕೂಲವಾಗುತ್ತದೆ.

ಇದರಿಂದ ಗ್ರಾಹಕರಿಗೆ ವಿದ್ಯುತ್ ಬಿಲ್ ನ ಹಣ ಉಳಿತಾಯವಾಗುತ್ತದೆ ಮತ್ತು ದೇಶದಲ್ಲಿ ವಿದ್ಯುತ್ ಉಳಿತಾಯವಾಗುತ್ತದೆ. ನಮ್ಮ ದೇಶದಲ್ಲಿ ಉತ್ಪಾದನೆ ಆಗುತ್ತಿರುವ ವಿದ್ಯುತ್ ನ ಅರ್ಧದಷ್ಟು ಪ್ರಮಾಣ ಉಷ್ಣ ವಿದ್ಯುತ್ ಸ್ಥಾವರಗಳಿಂದ, ಕಲ್ಲಿದ್ದಲು ಬಳಕೆ ಮಾಡುವುದರಿಂದ. ಇವುಗಳಿಂದ ಪರಿಸರಕ್ಕೆ ಹಾನಿಯಾಗುವ ಅನಿಲಗಳು ಬಿಡುಗಡೆ ಆಗುತ್ತಿದ್ದು, ಅವುಗಳನ್ನೂ ನಿಯಂತ್ರಿಸಬಹುದು.[ವಿದ್ಯುತ್ ಆಕ್ಸೆಸಬಿಲಿಟಿ: ವಿಶ್ವಸಂಸ್ಥೆ ಪಟ್ಟಿಯಲ್ಲಿ 73 ಸ್ಥಾನ ಏರಿಕೆ ಕಂಡ ಭಾರತ]

ಈ ಹಿಂದೆ ಎಲ್ ಇಡಿ ಬಲ್ಬ್ ಹಾಗೂ ಟ್ಯೂಬ್ ಲೈಟ್ ಬೆಲೆ ಹೆಚ್ಚಿತ್ತು. ಅವುಗಳಾನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುವ ಸರಕಾರಕ್ಕೆ ರಿಯಾಯಿತಿ ಬೆಲೆಯಲ್ಲಿ ಸಿಗುತ್ತದೆ ಹಾಗೂ ಕಡಿಮೆ ಬೆಲೆಗೆ ಸರಕಾರ ಜನರಿಗೆ ಮಾರಾಟ ಮಾಡುತ್ತದೆ. ಈ ಹಿಂದೆ ಮೂನ್ನೂರಾ ಹತ್ತು ರುಪಾಯಿ ಕೊಡಬೇಕಿತ್ತು. ಇದೀಗ ನಲವತ್ತು ರುಪಾಯಿಗೆ ಕಡಿಮೆ ಆಗುತ್ತದೆ. ಕೆಲ ತಿಂಗಳಲ್ಲೇ ಎಲ್ ಇಡಿ ಲ್ಯಾಂಪ್ ಬೆಲೆ ಕಡಿಮೆಯಾಗಿದೆ.

ಈ ವರೆಗೆ ಸರಕಾರವು ಉಜಾಲ ಯೋಜನೆಯಡಿ ಇಪ್ಪತ್ಮೂರುವರೆ ಕೋಟಿ ಎಲ್ ಇಡಿ ಲ್ಯಾಂಪ್ ಗಳನ್ನು ದೇಶಾದ್ಯಂತ ಸರಕಾರ ವಿತರಿಸಿದೆ. ಇದರಿಂದ ವಾರ್ಷಿಕ ಹನ್ನೆರಡೂ ಸಾವಿರದ ಇನ್ನೂರು ಕೋಟಿ ಉಳಿತಾಯವಾಗುತ್ತದೆ. ಕಾರ್ಬನ್ ನಿಂದ ಉಂಟಾಗುವ ಮಾಲಿನ್ಯ 2.4 ಲಕ್ಷ ಟನ್ ಕಡಿಮೆಯಾಗುತ್ತದೆ.

ಈಗಲೂ ಎಲ್ ಇಡಿ ಟ್ಯೂಬ್ ಲೈಟ್ ಹಾಗೂ ಫ್ಯಾನ್ ಗಳನ್ನು ಎಲ್ಲ ರಾಜ್ಯಗಳಲ್ಲಿ ಮಾರಾಟ ಮಾಡಿಲ್ಲ. ಉಜಾಲ ಯೋಜನೆಯಡಿ ಇಪ್ಪತ್ತೊಂದು ಲಕ್ಷ ಟ್ಯೂಬ್ ಲೈಟ್ ಹಾಗೂ ಎಂಟು ಲಕ್ಷ ಫ್ಯಾನ್ ವಿತರಿಸಲಾಗಿದೆ. ಫೈವ್ ಸ್ಟಾರ್ ಗುಣಮಟ್ಟದ ಫ್ಯಾನ್ ಅನ್ನು ಸರಕಾರ ಸಾವಿರದ ನೂರು ರುಪಾಯಿಗೆ ವಿತರಿಸುತ್ತದೆ. ಅದರ ಮಾರುಕಟ್ಟೆ ಬೆಲೆ ಸಾವಿರದ ಐನೂರು ರುಪಾಯಿ ಇದೆ.[ವಿದ್ಯುತ್ ಉಳಿಸುವ ಪಂಪ್ ಸೆಟ್‍ ಅಳವಡಿಸಿಕೊಳ್ಳುವುದು ಕಡ್ಡಾಯ - ಡಿಕೆಶಿ]

ಗರಿಷ್ಠ ಆಡಳಿತ, ಕನಿಷ್ಠ ಮಟ್ಟದ ಸರಕಾರದ ಪ್ರವೇಶ ಎಂಬ ಉದ್ದೇಶವನ್ನು ಗುರಿಯಲ್ಲಿಟ್ಟುಕೊಂಡು ಅಗತ್ಯ್ವಿರುವ ಕೆಲವ್ ಎಲೆಕ್ಟ್ರಾನಿಕ್ ವಸ್ತುಗಳನ್ನು ಸರಕಾರದಿಂದ ಒದಗಿಸಬೇಕು. ಜನರಲ್ಲಿ ವಿದ್ಯುತ್ ಉಳಿತಾಯದ ಬಗ್ಗೆ ಅರಿವು ಮೂಡಿಸಬೇಕು.

English summary
Under - Unnat Jeevan by Affordable LEDs and Appliances(UJALA), the government intends to distribute energy efficient appliances at subsidized rates across the country. Presently, the government is distributing LED Lamps, Tubelights and five star rated fans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X