ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಸಾಮಾನ್ಯರಿಗೆ ವಿಮಾನ ಯಾನ ಸೌಕರ್ಯ ನೀಡುವ ಉಡಾನ್ ಗೆ ಚಾಲನೆ

ಮಾರುಕಟ್ಟೆ ಆಧಾರಿತ ತಂತ್ರಜ್ಞಾನ ಮೂಲಕ ದೇಶೀಯ ಮಟ್ಟದಲ್ಲಿ ಅಂತರ ವಲಯಗಳ ವಿಮಾನ ಹಾರಾಟಕ್ಕೆ ಉತ್ತೇಜನ ನೀಡಿದ ವಿಶ್ವದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ.

|
Google Oneindia Kannada News

ನವದೆಹಲಿ, ಏಪ್ರಿಲ್ 27: ಅಗ್ಗದ ದರದಲ್ಲಿ ಭಾರತದ ವಿವಿಧ ಪ್ರಾಂತ್ಯಗಳ ನಡುವೆ ವಿಮಾನ ಯಾನಕ್ಕೆ ಅವಕಾಶ ನೀಡುವ ಮಹತ್ವಾಕಾಂಕ್ಷೆಯ ಉಡಾನ್ ವಿಮಾನ ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಸಿರು ನಿಶಾನೆ ತೋರಿದರು.

ಮಾರುಕಟ್ಟೆ ಆಧಾರಿತ ತಂತ್ರಜ್ಞಾನ ಮೂಲಕ ದೇಶೀಯ ಮಟ್ಟದಲ್ಲಿ ಅಂತರ ವಲಯಗಳ ವಿಮಾನ ಹಾರಾಟಕ್ಕೆ ಉತ್ತೇಜನ ನೀಡಿದ ವಿಶ್ವದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ.

Udan: Modi to flag off first RCS flight from Shimla

ನಾಗರಿಕರಿಗೆ ಕಡಿಮೆ ದರದಲ್ಲಿ ವಿಮಾನ ಯಾನದ ಸೌಕರ್ಯ ನೀಡುವ ನಿಟ್ಟಿನಲ್ಲಿ ಇಂಥ ಪರ್ಯತ್ನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

2016ರಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದ ಪ್ರಾಂತೀಯ ಮಟ್ಟದ ಸಂಪರ್ಕ ಯೋಜನೆಗಳನ್ವಯ ಉಡಾನ್ ಯೋಜನೆಯನ್ನು ರೂಪಿಸಲಾಗಿದೆ. 2015ರಲ್ಲಿ ರೂಪಿಸಲಾಗಿದ್ದ ರಾಷ್ಟ್ರೀಯ ನಾಗರಿಕ ವಿಮಾನ ಯಾನ ನಿಯಮಾವಳಿಗಳ (ಎನ್ ಸಿಎಪಿ) ಅಡಿಯಲ್ಲಿ ಈ ಸಮಗ್ರ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.

ಬೆಲೆ ಹೇಗೆ?
ಉದ್ಘಾಟನೆಯ ಹಿನ್ನೆಲೆಯಲ್ಲಿ ದೆಹಲಿ - ಶಿಮ್ಲಾ ನಡುವಿನ ಮೊದಲ ಯಾನಕ್ಕೆ ಚಾಲನೆ ನೀಡಲಾಯಿತು. ಈ ಯಾನದಲ್ಲಿ ಪ್ರತಿ ಟಿಕೆಟ್ ದರ 1,920 ರು. ನಿಗದಿಪಡಿಸಲಾಗಿತ್ತು. ಹೀಗೆ, ನಾನಾ ಭಾಗಗಳಲ್ಲಿನ ನಗರಗಳಿಗೆ ವಿವಿಧ ರೀತಿಯ ದರಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.

English summary
An Alliance Air ATR-42 aircraft with 15 passengers will take off from Shimla airport on 11.15 am on Thursday heralding the launch of regional connectivity scheme (RCS).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X