ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್ ಮಹಲ್ ಗೆ ಬೆದರಿಕೆ ಬೆನ್ನಲ್ಲೇ ಆಗ್ರಾದಲ್ಲಿ ಎರಡು ಕಡೆ ಸ್ಫೋಟ

ಶನಿವಾರದಂದು ಆಗ್ರಾದ ಎರಡು ಸ್ಥಳದಲ್ಲಿ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟಗೊಂಡಿರುವ ಘಟನೆ ನಡೆದಿದೆ. ಕಂಟೋನ್ ಮೆಂಟ್ ರೈಲ್ವೆ ನಿಲ್ದಾಣದ ಬಳಿ ಹಾಗೂ ಮನೆಯೊಂದರ ತಾರಸಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.

By Mahesh
|
Google Oneindia Kannada News

ಲಕ್ನೋ, ಮಾರ್ಚ್ 18:ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಸ್ಫೋಟಕ್ಕೆ ಉಗ್ರರು ಸಂಚು ರೂಪಿಸಿರುವ ಸುದ್ದಿ ಬಂದಿರುವ ಬೆನ್ನಲ್ಲೆ ಶನಿವಾರದಂದು ಆಗ್ರಾದ ಎರಡು ಸ್ಥಳದಲ್ಲಿ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟಗೊಂಡಿರುವ ಘಟನೆ ನಡೆದಿದೆ. ಕಂಟೋನ್ ಮೆಂಟ್ ರೈಲ್ವೆ ನಿಲ್ದಾಣದ ಬಳಿ ಹಾಗೂ ಮನೆಯೊಂದರ ತಾರಸಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.

ಶನಿವಾರ ಮುಂಜಾನೆ 5 ಗಂಟೆ ಸುಮಾರಿಗೆ ಮೊದಲ ಬಾಂಬ್‌ ಸ್ಫೋಟಗೊಂಡಿದೆ. ದಂಡು ಪ್ರದೇಶದ ರೈಲ್ವೆ ಸ್ಟೇಷನ್‌ ಸಮೀಪವಿರುವ ಪ್ಲಂಬರ್‌ ಕೆಲಸಗಾರ ಅಶೋಕ ಎಂಬುವವರ ಮನೆ ಪಕ್ಕ ಬಾಂಬ್‌ ಸ್ಫೋಟಗೊಂಡಿದೆ.[ಇಸ್ಲಾಮಿಕ್ ಸ್ಟೇಟ್ ನ ಮುಂದಿನ ಗುರಿ ತಾಜ್ ಮಹಲ್!]

Two low intensity blasts near Agra Cantt railway station

ಇದಾದ 45 ನಿಮಿಷದ ಬಳಿಕ ರೈಲ್ವೆ ನಿಲ್ದಾಣ ಬಳಿ ಮತ್ತೊಂದು ಬಾಂಬ್‌ ಸ್ಫೋಟಗೊಂಡಿದೆ. ಅನ್ವರ್‌‌ ಉಸ್ಮಾನಿ ಎಂಬುವವರ ಮನೆಯ ಮೇಲೆ ಈ ಬಾಂಬ್‌ ಸ್ಫೋಟಗೊಂಡಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.

ಅವಳಿ ಬಾಂಬ್‌ ಸ್ಫೋಟದ ಸುದ್ದಿ ತಿಳಿದ ತಕ್ಷಣ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಡಿಜಿಪಿ ಮಹೇಶ್ ಕುಮಾರ್‌ ಅವರು ಘಟನಾ ಸ್ಥಳಕ್ಕೆ ಆಗಮ್ಸಿ, ಪರಿಸ್ಥಿತಿ ಅವಲೋಕನ ಮಾಡುತ್ತಿದ್ದಾರೆ.(ಐಎಎನ್ಎಸ್)

English summary
Two low-intensity blasts were felt in Taj city Agra on Saturday. The area has been cordoned off and senior officers have rushed to the site, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X