ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ನಲ್ಲಿ ಭುಗಿಲೆದ್ದ ಕೋಮುಗಲಭೆ, ಇಬ್ಬರ ಹತ್ಯೆ

By Prasad
|
Google Oneindia Kannada News

ಪಟಾಣ್ (ಗುಜರಾತ್), ಮಾರ್ಚ್ 26 : ಗುಜರಾತ್ ರಾಜ್ಯದ ಪಟಾಣ್ ಜಿಲ್ಲೆಯಲ್ಲಿ ಕೋಮು ಗಲಭೆ ಭುಗಿಲೆದ್ದಿದ್ದು, ಇಬ್ಬರನ್ನು ಹತ್ಯೆ ಮಾಡಲಾಗಿದೆ.

ವಡವಾಲಿ ಗ್ರಾಮದಲ್ಲಿ ಪರೀಕ್ಷೆಗೆ ಹೋಗುವಾಗ ಇಬ್ಬರು ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಬೃಹದಾಕಾರವಾಗಿ ಹಬ್ಬುತ್ತಿದೆ. ಈ ಗಲಭೆಯಲ್ಲಿ 10 ಜನರಿಗೆ ಗಾಯವಾಗಿದ್ದು, 50 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

Two killed, 10 injured in commiunal violence at Gujarat

ಇಬ್ಬರು ವಿದ್ಯಾರ್ಥಿಗಳ ನಡುವೆ ಆರಂಭದ ಜಗಳ ಬರಬರುತ ಕೋಮು ಸ್ವರೂಪ ಪಡೆದುಕೊಂಡಿತು. ವಡವಾಲಿ ಹಳ್ಳಿಯಲ್ಲಿ ಶುರುವಾಗಿದ್ದು, ಸುತ್ತಲಿನ ಮೂರು ಗ್ರಾಮಗಳಿಗೂ ಹಬ್ಬಿಕೊಂಡಿತು ಎಂದು ಪೊಲೀಸ್ ಸುಪರಿಂಟೆಂಡೆಂಟ್ ಅಶ್ವಿನ್ ಚೌಹಾಣ್ ಹೇಳಿದ್ದಾರೆ.

ಕಿತ್ತಾಟದಿಂದ ಶುರುವಾದ್ದದ್ದು ಕ್ರಮೇಣ ಕಲ್ಲುತೂರಾಟದಲ್ಲಿ ಮುಂದುವರಿಯಿತು. ನಂತರ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿಹಚ್ಚಲು ಆರಂಭಿಸಿದರು. ಇದ್ದಕ್ಕಿದ್ದಂತೆ ಭುಗಿಲೆದ್ದ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ.

ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕಿಡಿಗೇಡಿಗಳನ್ನು ಚೆದುರಿಸಲು ಅಶ್ರುವಾಯು ಪ್ರಯೋಗ ಮಾಡಬೇಕಾಯಿತು. ಹಿಂಸಾಚಾರ ನಿಯಂತ್ರಣಕ್ಕೆ ಬಾರದಿದ್ದರಿಂದ ಪೊಲೀಸರು ಗುಂಡು ಹಾರಿಸಿದ್ದರಿಂದ ಓರ್ವ ಸಾವಿಗೀಡಾಗಿದ್ದಾನೆ.

English summary
Two persons were killed and 10 others injured in a communal clash in Gujarat. The incident occurred in Patan district after a mob ransacked and set ablaze 50 houses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X