ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶೋಕ್ ಸಿಂಘಾಲ್ : ಹಿಂದೂತ್ವ ಯೋಧ ಎಂದ ಟ್ವೀಟ್ ಲೋಕ

By Mahesh
|
Google Oneindia Kannada News

ಬೆಂಗಳೂರು, ನ.17: ಹಿಂದೂತ್ವ ಪ್ರತಿಪಾದಕ, ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಘಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬಿನಿ ಮಿಡಿದಿದ್ದಾರೆ.

ವಿಶ್ವ ಹಿಂದೂ ಪರಿಷತ್ ಸೇರಿದಂತೆ ಸಂಘ ಪರಿವಾರವನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಶ್ರಮ ವಹಿಸಿದ್ದ ಅಶೋಕ್ ಸಿಂಘಾಲ್ ಅವರು ಆರೆಸ್ಸೆಸ್ ಹಾಗೂ ವಿಎಚ್ ಪಿ ಜೊತೆ ಸಕ್ರಿಯರಾಗಿದ್ದರೂ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳಲಿಲ್ಲ. ಧಾರ್ಮಿಕ ಸಂಘಟನೆಯ ನಾಯಕರಾಗಿ ಅವರು ಅಂತಾರಾಷ್ಟ್ರೀಯ ಸಮುದಾಯದ ಗಮನಸೆಳೆದಿದ್ದರು. [ವಿಶ್ವ ಹಿಂದೂಪರಿಷತ್ ಮುಖಂಡ ಅಶೋಕ್ ಸಿಂಘಾಲ್ ಇನ್ನಿಲ್ಲ]

ಆಗ್ರಾ ಮೂಲದ ಅಶೋಕ್ ಸಿಂಘಾಲ್ ಅವರು ಬನಾರಾಸ್ ಹಿಂದೂ ವಿಶ್ವವಿದ್ಯಾಲಯದಿಂದ 1950ರಲ್ಲಿ ಮೆಟಲರ್ಜಿಕಲ್ ಇಂಜಿನಿಯರ್ ಪದವಿ ಪಡೆದಿದ್ದರು. ಪಂಡಿತ್ ಓಂಕಾರ್ ನಾಥ್ ಠಾಕೂರ್ ಅವರ ಶಿಷ್ಯರಾಗಿ ಹಿಂದೂಸ್ತಾನಿ ಸಂಗೀತದ ಪಾಠ ಕಲಿತು ಗಾಯಕರಾದರು. ಮತಾಂತರ ವಿರೋಧಿಸಿ ದಲಿತರಿಗೆ ದೇಗುಲ ಪ್ರವೇಶ ಕೊಡಿಸುವ ಸಲುವಾಗಿ 200ಕ್ಕೂ ಅಧಿಕ ದೇಗುಲ ನಿರ್ಮಾಣ ಕಾರ್ಯಕ್ಕೆ ವಿಎಚ್ ಪಿ ಮುಂದಾಗಲು ಕಾರಣಕರ್ತರಾದರು.

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 1942ರಲ್ಲಿ ಸೇರ್ಪಡೆಯಾಗಿ ಪೂರ್ಣಾವಧಿ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದರು. 1984ರಲ್ಲಿ ವಿಶ್ವಹಿಂದೂ ಪರಿಷತ್ ನ ಜಂಟಿ ಪ್ರಧಾನ ಕಾರ್ಯದರ್ಶಿಯಾದರು. 2011 ರ ತನಕ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ವಿಎಚ್ ಪಿ ಮುಖಂಡ ಅಶೋಕ್ ಸಿಂಘಾಲ್ ಅವರ ನಿಧನಕ್ಕೆ ಗಣ್ಯರು ನೀಡಿದ ಸಂತಾಪ ಸಂದೇಶಗಳ ಟ್ವೀಟ್ ಸಂಗ್ರಹ ಇಲ್ಲಿದೆ

ಹಲವಾರು ಗಣ್ಯರು ಹಾಡಿ ಹೊಗಳಿದ್ದಾರೆ

ಹಲವಾರು ಗಣ್ಯರು ಹಾಡಿ ಹೊಗಳಿದ್ದಾರೆ

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 1942ರಲ್ಲಿ ಸೇರ್ಪಡೆಯಾಗಿ ಪೂರ್ಣಾವಧಿ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದರು. 1984ರಲ್ಲಿ ವಿಶ್ವಹಿಂದೂ ಪರಿಷತ್ ನ ಜಂಟಿ ಪ್ರಧಾನ ಕಾರ್ಯದರ್ಶಿಯಾದರು. 2011 ರ ತನಕ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಹಿಂದೂ ಸಮುದಾಯದ ಅಭಿವೃದ್ಧಿ ಹರಿಕಾರ ಎಂದು ಪ್ರಧಾನಿ ಮೋದಿ ಸೇರಿದಂತೆ ಹಲವಾರು ಗಣ್ಯರು ಹಾಡಿ ಹೊಗಳಿದ್ದಾರೆ.

ಸಮಾಜ ಸುಧಾರಕ ಸಿಂಘಾಲ್ ಎಂದ ಮೋದಿ

ಸಿಂಘಾಲ್ ಅವರು ಸಮಾಜ ಸುಧಾರಕ, ದೀನ ದಲಿತರ ಉದ್ಧಾರಕ, ಹಲವಾರು ಪೀಳಿಗೆಗೆ ಸ್ಪೂರ್ತಿದಾಯಕ ಎಂದ ಪ್ರಧಾನಿ ಮೋದಿ.

ತರುಣ್ ವಿಜಯ್ ಅವರಿಂದ ಟ್ವೀಟ್

ಲೇಖಕ, ಪತ್ರಕರ್ತ ತರುಣ್ ವಿಜಯ್ ಅವರು ಹಿಂದೂ ಸಮಾಜದ ಉದ್ಧಾರಕ, ಆರೆಸ್ಸೆಸ್ ತತ್ತ್ವ ಪ್ರತಿಪಾದಕ ಸಿಂಘಾಲ್ ಗೆ ನಮನ ಎಂದಿದ್ದಾರೆ.

ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರಿಂದ ಟ್ವೀಟ್

ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರು ಟ್ವೀಟ್ ಮಾಡಿ, ಸಮಾಜಕ್ಕೆ ಅಶೋಕ್ ಸಿಂಘಾಲ್ ನೀಡಿರುವ ಕೊಡುಗೆ ಸ್ಮರಣೀಯ ಎಂದಿದ್ದಾರೆ.

ರಾಜನಾಥ್ ಸಿಂಗ್ ಅವರಿಂದ ಟ್ವೀಟ್

ಬಿಜೆಪಿ ಮುಖಂಡ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿ, ನಮಗೆಲ್ಲ ದಾರಿದೀಪವಾಗಿದ್ದರು. ರಾಮಜನ್ಮಭೂಮಿ ಹೋರಾಟವನ್ನು ಮರೆಯುವಂತಿಲ್ಲ ಎಂದಿದ್ದಾರೆ.

ಜೀವಾಹಿನಿಯ ಸುಭಾಷ್ ಚಂದ್ರ

ಜೀವಾಹಿನಿಯ ಸುಭಾಷ್ ಚಂದ್ರ ಅವರು ಟ್ವೀಟ್ ಮಾಡಿ, ನಿಃಸ್ವಾರ್ಥ ಸೇವೆ ಸಲ್ಲಿಸಿದ ಸಿಂಘಾಲ್ ಅವರಿಗೆ ನಮನ ಎಂದಿದ್ದಾರೆ.

English summary
A metallurgy engineer, Ashok Singhal metamorphosed into a Hindutva warrior who as VHP chief played an adequate foil in the Ram Janmabhoomi movement when the BJP led the political campaign in the late eighties and later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X