ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ್ರೋಹಿಗಳನ್ನು ಸಾಕುವ ನೀಚ ಜನರನ್ನು ಒದ್ದೋಡಿಸಿ!

By Mahesh
|
Google Oneindia Kannada News

ಶ್ರೀನಗರ, ಏ.16: ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿ ಭಾರತ ವಿರೋಧಿ ಹೇಳಿಕೆ ನೀಡಿರುವ ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಎಲ್ಲೋ ಕೆಲವೆಡೆ ಮಾತ್ರ ಜನ ಬೀದಿಗಿಳಿದು ಹೋರಾಟ ಮಾಡಿದ್ದಾರೆ.

ಗೃಹ ಸಚಿವ ರಾಜನಾಥ್ ಸಿಂಗ್ ಅವರು ಎಂದಿನಂತೆ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಆಲಂ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ನನ್ನ ಮೇಲೆ ಬೇಜಾನ್ ಎಫ್ ಐಆರ್ ದಾಖಲಾಗಿದೆ. ಈಗ ಇನ್ನೊಂದು ಅಷ್ಟೇ ಎಂದು ಅಲಂ ಉಡಾಫೆ ಮಾತನಾಡಿದ್ದಾನೆ. [ಪೊಲೀಸ್ ನಿರ್ದೇಶಕರ ಕಚೇರಿಯ ಎದುರೇ ಹಾರಿತು ಪಾಕ್ ಧ್ವಜ!]

ಜಮ್ಮು-ಕಾಶ್ಮೀರದ ಉಪಮುಖ್ಯಮಂತ್ರಿ ಬಿಜೆಪಿಯ ನಿರ್ಮಲ್‌ಕುಮಾರ್‌ಸಿಂಗ್ ಪ್ರತಿಕ್ರಿಯಿಸಿ ಕಾನೂನು ವಿರೋಧಿ ಕಾಯ್ದೆಯಡಿ ಆಲಂ ಬಂಧಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತ ವಿರೋಧಿ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.[ಬೆಂಗಳೂರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು, ಎಚ್ಡಿಕೆ ಕೊಟ್ಟ ವಿವರ]

ಆದರೆ, ಅಧಿಕಾರಕ್ಕಾಗಿ ದೇಶ ವಿರೋಧಿ ಪಕ್ಷದ ಜೊತೆ ಕೈಜೋಡಿಸಿ ದೇಶದ ಮಾನ ಕಳೆಯುವುದನ್ನು ನೋಡಿಕೊಂಡು ಸುಮ್ಮನಿರಬೇಕಾ, ಟ್ವೀಟ್ ಗಳ ಬಾಣಗಳು ಹರಿದಾಡಿದರೂ ಎನ್ ಡಿಎ ದೊಣ್ಣೆನಾಯಕರ ಎದೆಗೆ ಒಂದೂ ನಾಟುವುದಿಲ್ಲ ಎಂದು ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ್ರೋಹಿಗಳನ್ನು ಬಂಧಿಸಲು ವಿಳಂಬ ಏಕೆ?

ದೇಶದ್ರೋಹಿಗಳನ್ನು ಬಂಧಿಸಲು ವಿಳಂಬ ಏಕೆ?

ಮಸರತ್ ಆಲಂ ಹಾಗೂ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ನಾಯಕ ಸಯ್ಯದ್ ಆಲಿ ಷಾ ಗಿಲಾನಿಯನ್ನು ಬಂಧಿಸುವ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದಾಗಿ ಗೃಹ ಸಚಿವ ರಾಜ್‌ನಾಥ್‌ಸಿಂಗ್, ರಾಜ್ಯ ಸಚಿವ ಕಿರಣ್‌ರಿಜಿಜು ಹೇಳಿದ್ದಾರೆ. ಅದರೆ, ದೇಶದ್ರೋಹಿಗಳನ್ನು ಬಂಧಿಸಲು ವಿಳಂಬ ನೀತಿ ಏಕೆ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

ಖತರ್ ನಾಕ್ ಮಸರತ್ ಅಲಂ

ಖತರ್ ನಾಕ್ ಮಸರತ್ ಅಲಂ

ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಸೈಯದ್ ಅಲಿ ಶಾ ಗಿಲಾನಿ 2010ರ ನಂತರ ಬುಧವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗಿಲಾನಿ ಬೆಂಬಲಿಗರು ಪಾಕಿಸ್ತಾನಿ ಧ್ವಜಗಳನ್ನು ಬೀಸಿ, ಪಾಕ್ ಪರ ಘೋಷಣೆ ಕೂಗಿದರು. ನಾವು ಶಿಮ್ಲಾ ಒಪ್ಪಂದ ಅಥವಾ ಲಾಹೋರ್ ಘೋಷಣೆಯನ್ನು ಸ್ವೀಕರಿಸುವುದಿಲ್ಲ ಗಿಲಾನಿ ಇದೇ ಸಂದರ್ಭದಲ್ಲಿ ಘೋಷಿಸಿದರು.

ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಮಸರತ್ ಅಲಂ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಶಿವಸೇನೆಯಿಂದ ಪ್ರತ್ಯೇಕತಾವಾದಿಗಳ ವಿರುದ್ಧ ಧರಣಿ

ಶಿವಸೇನೆಯಿಂದ ಪ್ರತ್ಯೇಕತಾವಾದಿಗಳ ವಿರುದ್ಧ ಧರಣಿ

ಜಮ್ಮು: ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿಗಳ ವಿರುದ್ಧ ಪ್ರತಿಭಟನೆ, ಪ್ರತಿಕೃತಿ ದಹನ ನಡೆಸಿದ ಶಿವಸೇನೆ ಹಾಗೂ ಡೋಗ್ರಾ ಫ್ರಂಟ್ ಕಾರ್ಯಕರ್ತರು. ಚಿತ್ರ: ಪಿಟಿಐ

ರಾಷ್ಟ್ರದ ಏಕತೆ, ಸಮಗ್ರತೆ ಕೊಡಲಿ ಪೆಟ್ಟು

ಬಿಜೆಪಿಯ ಅಧಿಕಾರ ದಾಹ ರಾಷ್ಟ್ರದ ಏಕತೆ, ಸಮಗ್ರತೆ ಕೊಡಲಿ ಪೆಟ್ಟು

ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಇದಕ್ಕೆಲ್ಲ ಬಿಜೆಪಿ ಸರ್ಕಾರವೇ ಹೊಣೆ

ಇದಕ್ಕೆಲ್ಲ ಕೇಂದ್ರದ ಬಿಜೆಪಿ ಸರ್ಕಾರವೇ ಹೊಣೆ. ಮೈತ್ರಿ ಸರ್ಕಾರದ ಹೆಸರಿನಲ್ಲಿ ದೇಶದ ಘನತೆ ಮಣ್ಣುಮುಕ್ಕುತ್ತಿದೆ.

ಶಿವಸೇನೆಯಿಂದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಅಲಮ್ ಹಾಗೂ ಗಿಲಾನಿ ವಿರುದ್ಧ ಶಿವಸೇನೆಯಿಂದ ಪ್ರತಿಭಟನೆ.

ರಾಜನಾಥ್ ಸಿಂಗ್ ರಿಂದ ಹೇಳಿಕೆ

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಿಂದ ಹೇಳಿಕೆ

ಮಸರತ್ ಅಲಂ ಪ್ರತಿಕ್ರಿಯೆ ಹೀಗಿದೆ

ಎಫ್ ಐಆರ್ ದಾಖಲಿಸಿದ್ದಕ್ಕೆ ಮಸರತ್ ಅಲಂ ನೀಡಿದ ಪ್ರತಿಕ್ರಿಯೆ ಹೀಗಿತ್ತು

English summary
It seems, holding anti-India rally will cost separatist leader Masarat Alam dearly. He may be re-arrested for the same. Reportedly, Alam along with his comrades who unfurled Pakistani flag has been booked under Unlawful Activities (Prevention) Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X