ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲಾಖ್ ವಿರುದ್ಧ ಹನುಮಾನ್ ಮೊರೆಹೋದ ಮುಸ್ಲಿಂ ಮಹಿಳೆಯರು

ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ತ್ರಿವಳಿ ತಲಾಕ್ ಕುರಿತು ವಿಚಾರಣೆ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಹನುಮಾನ್ ಚಾಲಿಸಾ ಓದುತ್ತಿರುವ ಮುಸ್ಲಿಂ ಮಹಿಳೆಯರ ಚಿತ್ರ ವೈರಲ್ ಆಗಿದೆ.

|
Google Oneindia Kannada News

ವಾರಾಣಸಿ (ಉತ್ತರ ಪ್ರದೇಶ), ಮೇ 11: "ನಾವು ಈ ತ್ರಿವಳಿ ತಲಾಖ್ ನಿಂದ ಬೇಸತ್ತುಹೋಗಿದ್ದೇವೆ, ನಮಗೆ ಇದರಿಂದ ಶೀಘ್ರ ಬಿಡುಗಡೆ ಬೇಕಿದೆ" ಎಂದು ಕೆಲ ಮುಸ್ಲಿಂ ಮಹಿಳೆಯರು ವಾರಾಣಸಿಯ ದೇವಾಲಯವೊಂದರಲ್ಲಿ ಹನುಮಾನ್ ಚಾಲಿಸಾ ಪಠಿಸಿದ್ದಾರೆ!

ಈ ಸುದ್ದಿ ಕೇಳಿ, ಹನುಮಾನ್ ಚಾಲಿಸಾಕ್ಕೂ, ತ್ರಿವಳಿ ತಲಾಖ್ ಗೂ ಎತ್ತಣಿಂದೆತ್ತಣ ಸಂಬಂಧವಯ್ಯ ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ.[ತುಳಸೀದಾಸರು ರಚಿಸಿದ ಶ್ರೀ ಹನುಮಾನ್ ಚಾಲೀಸಾ]

ಇಂದು ಸರ್ವೋಚ್ಚ ನ್ಯಾಯಾಲಯದ ಐದು ಸದಸ್ಯರ ಪೀಠ ತ್ರಿವಳಿ ತಲಾಕ್ ಕುರಿತು ವಿಚಾರಣೆ ಕೈಗೆತ್ತಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಹನುಮಾನ್ ಚಾಲಿಸಾ ಓದುತ್ತಿರುವ ಮುಸ್ಲಿಂ ಮಹಿಳೆಯರ ಚಿತ್ರ ವೈರಲ್ ಆಗಿದೆ. ತ್ರಿವಳಿ ತಲಾಖ್ ಪದ್ಧತಿಯ ಸಾಂವಿಧಾನಿಕ ಸಿಂಧತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಇಂದಿನಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ ಈಗಾಗಲೇ ತ್ರಿವಳಿ ತಲಾಕ್ ಟ್ರೆಂಡ್ ಆಗಿದೆ.[ಟ್ರಿಪಲ್ ತಲಾಖ್ ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ]

ಹೆಚ್ಚಿನ ಜನರು ತ್ರಿವಳಿ ತಲಾಖ್ ಪದ್ಧತಿಯನ್ನು ವಿರೋಧಿಸಿದ್ದರೆ, ಕೆಲವರು ಇದು ಅವರವರ ಮತಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರ ಎಂದಿದ್ದಾರೆ. ಬಹುಪಾಲು ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವಂತೆ ಬೇಡಿಕೆ ಇಟ್ಟಿದ್ದಾರೆ.[ಯುಪಿ ಎಲೆಕ್ಷನ್ ಬಳಿಕ ತ್ರಿವಳಿ ತಲಾಖ್ ನಿಷೇಧ: ಸಚಿವ ರವಿಶಂಕರ್]

ನ್ಯಾ.ಜಗದೀಶ್ ಸಿಂಗ್ ಖೆಹರ್, ನ್ಯಾ. ಕುರಿಯನ್ ಜೋಸೆಫ್, ನ್ಯಾ.ರೋಹಿಂಟನ್ ಫಾಲಿ ನಾರಿಮನ್, ನ್ಯಾ.ಉದಯ್ ಉಮೇಶ್ ಲಲಿತ್, ನ್ಯಾ.ಎಸ್.ಅಬ್ದುಲ್ ನಾಜಿರ್ ಐದು ಜನರಿರುವ ನ್ಯಾಯಪೀಠದ ವಿಶೇಷತೆ ಎಂದರೆ ಐವರೂ ಕ್ರಮವಾಗಿ ಸಿಖ್, ಕ್ರೈಸ್ತ, ಪಾರ್ಸಿ, ಹಿಂದು, ಮುಸ್ಲಿಂ ಮತಕ್ಕೆ ಸೇರಿರುವುದು! ಐದು ಮತೀಯರನ್ನೂ ಒಳಗೊಂಡ ಪೀಠ ತ್ರಿವಳಿ ತಲಾಖ್ ಬಗ್ಗೆ ಯಾವ ನಿರ್ಣಯ ತೆಗೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ತ್ರಿವಳಿ ತಲಾಖ್, ನಿಖಾ ಹಲಾಲ(ವಿಚ್ಛೇದನ ನೀಡಿದ ಪತಿಯೊಂದಿಗೆ ಪತ್ನಿ ಮತ್ತೆ ಮರಳಬೇಕೆಂದರೆ ಬೇರೊಬ್ಬ ಪುರುಷನನ್ನು ಮದುವೆಯಾಗುವ ಪದ್ಧತಿ), ಬಹುಪತ್ನಿತ್ವ ಈ ಮೂರೂ ಪದ್ಧತಿಗಳ ಕುರಿತ ಏಳು ಅರ್ಜಿ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದ್ದು, ತ್ರಿವಳಿ ತಲಾಖ್ ಕುರಿತು ಹಲವೆಡೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ತ್ವರಿತವಾಗಿ ಈ ಪ್ರಕರಣಕ್ಕೆ ಅಂತ್ಯ ನೀಡುವ ಉದ್ದೇಶವನ್ನು ಸುಪ್ರೀಂ ಕೋರ್ಟ್ ಹೊಂದಿದೆ. ಆದ್ದರಿಂದ ಶನಿವಾರ ಮತ್ತು ಭಾನುವಾರದಂದೂ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.[ಆಯೇಷಾಗೆ ತಲಾಖ್ ತಲಾಖ್ ತಲಾಖ್]

ಅದೇನೇ ಇರಲಿ, ತ್ರಿವಳಿ ತಲಾಕ್ ಕುರಿತು ಟ್ವಿಟ್ಟರ್ ಕೂಗು ಹೇಗಿದೆ ಅನ್ನೋದನ್ನು ಒಮ್ಮೆ ನೀವೇ ನೋಡಿ.

ಮಹಿಳೆಯರ ಹಕ್ಕಿನ ಪ್ರಶ್ನೆ

ತ್ರಿವಳಿ ತಲಾಕ್ ಎಂಬುದು ಮಹಿಳೆಯರ ಹಕ್ಕನ್ನು ಅವರಿಗೆ ಹಿಂದಿರುಗಿಸುವ ವಿಚಾರ. ಆದ್ದರಿಂದ ಈ ವಿಚಾರಣೆಗೆ ಒಬ್ಬ ಮಹಿಳಾ ಜಡ್ಜ್ ಕೂಡ ಇದ್ದರೆ ಚೆನ್ನಾಗಿತ್ತು ಎಂಮದಿದ್ದಾರೆ ತೆಹ್ಸೀನ್ ಪುಲವಾಲಾ ಎನ್ನುವವರು.[ತಲಾಖ್ ಪದ್ಧತಿ ಅಸಾಂವಿಧಾನಿಕ : ಅಲಹಾಬಾದ್ ಕೋರ್ಟ್]

ಆಧುನಿಕ ಕಾಲಕ್ಕೆ ತ್ರಿವಳಿ ತಲಾಖ್ ಬೇಡ

ಆಧುನಿಕ ಕಾಳಕ್ಕೆ ಈ ಗತ್ರಿವಳಿ ತಲಾಖ್ ಖಂಡಿತ ಅಗತ್ಯವಿಲ್ಲ, ಅದು ಪ್ರಸ್ತುತವೂ ಅಲ್ಲ. ಮೊದಲು ಅದನ್ನು ನಿಷೇಧಿಸಬೇಕು ಎಂಬುದು ಪರದೀಪ್ ಮಜುಮ್ದಾರ್ ಎಂಬುವವರ ಅಭಿಪ್ರಾಯ.

ಬೆಂಬಲಿಸುವವರು ಯಾರೂ ಇಲ್ಲ

ಈ ವಿಚಿತ್ರ ಪದ್ಧತಿಯನ್ನು ಬೆಂಬಲಿಸುವುದಕ್ಕೆ ಯಾವ ಮುಸ್ಲಿಂ ಮಹಿಳೆಯರೂ ಸಿದ್ಧರಿರುವುದಿಲ್ಲ ಎಂದು ಇಮ್ತಿಯಾಜ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಇದು ಮಹಿಳೆಯರ ಘನತೆಯ ಪ್ರಶ್ನೆ

ತ್ರಿವಳಿ ತಲಾಖ್ ಎಂದರೆ ಅದು ಹಿಂದೆ, ಮುಸ್ಲಿಂ ಎಂದು ಯೋಚಿಸುವ ಅಗತ್ಯವಿಲ್ಲ. ಅದು ಕೇವಲ ಮೂರೇ ಪದದಲ್ಲಿ ಕನಸುಗಳನ್ನೇ ಹೊಸಕಿಕೊಳ್ಳುವ ಎಲ್ಲ ಮಹಿಳೆಯರಿಗೂ ಸಂಬಂಧಿಸಿದ್ದು. ಇದು ಮಹಿಳೆಯರ ಹಕ್ಕು ಮತ್ತು ಘನತೆಯ ಪ್ರಶ್ನೆ ಎಂಬುದು ಕೀರ್ತಿ ಸಿನ್ಹಾ ಅಭಿಪ್ರಾಯ.

ಮತದ ಹೆಸರಲ್ಲಿ ಮಹಿಳೆಯರಿಗೆ ಅನ್ಯಾಯ

ಮತದ ಹೆಸರಿನಲ್ಲಿ ಮಹಿಳೆಯರಿಗೆ ಅನ್ಯಾಯ ಮಾಡುವ ಇಂಥ ಕ್ರೂರ ಪದ್ಧತಿ ಬೇಕಿಲ್ಲ. ಈ ಪದ್ಧತಿಯನ್ನು ನಿಷೇಧಿಸಿ ಮಹಿಳೆಯರಿಗೆ ಸಮಾನ ಹಕ್ಕು ನೀಡಿ ಎಂದು ಆಕ್ಷಿ ಮಟ್ಟೂ ಎನ್ನುವವರು ಟ್ವೀಟ್ ಮಾಡಿದ್ದಾರೆ.

English summary
Today supreme court bigins hearing triple talaq. Here are few twitter reactions on triple talaq
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X