ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತಾಜಿ ಮೇಲೆ ಸ್ಪೈ, ನೆಹರೂ ಜನ್ಮ ಜಾಲಾಡಿದ ಟ್ವಿಟ್ಟರಿಗರು

By Mahesh
|
Google Oneindia Kannada News

ನವದೆಹಲಿ, ಏ.10: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ನಿಗೂಢತೆ ಮುಂದುವರೆದಿರುವ ಬೆನ್ನಲ್ಲೇ ನೇತಾಜಿ ಹಾಗೂ ಅವರ ಕುಟುಂಬದ ಮೇಲೆ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ಗೂಢಚಾರಿಕೆ ನಡೆಸಿತ್ತು ಎಂಬ ಸುದ್ದಿ ಬೆಳಕಿಗೆ ಬಂದಿದೆ. ಗುಪ್ತಚರ ಇಲಾಖೆ ರಹಸ್ಯ ದಾಖಲೆಗಳಲ್ಲಿ ಈ ಬಗ್ಗೆ ಉಲ್ಲೇಖವಿರುವುದು ಪತ್ತೆಯಾಗಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ ಆರಂಭವಾಗಿದ್ದು, ಸಾರ್ವಜನಿಕರು ನೆಹರೂ ಜನ್ಮ ಜಾಲಾಡುತ್ತಿದ್ದಾರೆ.

ಪಂಡಿತ್ ಜವಾಹರ ಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಮೇಲೆ ನಿಗಾ ಇರಿಸಲು ಸೂಚಿಸಲಾಗಿತ್ತು. ಅಲ್ಲದೆ, ಬೋಸ್ ಕುಟುಂಬದ ಮೇಲೆ ಸತತ 20 ವರ್ಷಗಳ ಕಾಲ ಗೂಢಾಚಾರಿಕೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿತ್ತು. [ನೇತಾಜಿ, ನೆಹರೂ ನಂಬಿಕಸ್ತ ನಂಬಿಯಾರ್ 'ಸ್ಪೈ']

ಸುಭಾಷ್ ಚಂದ್ರ ಬೋಸ್ ಅವರ ಅಣ್ಣ ಶರತ್ ಚಂದ್ರ ಬೋಸ್ ಮತ್ತು ಅವರ ಮಕ್ಕಳ ಮೇಲೂ ಕಣ್ಣಿಡಲಾಗಿತ್ತು. ನೇತಾಜಿ ಅವರ ಪತ್ನಿ ಎಮಿಲಿ ಅವರು ಬರೆಯುತ್ತಿದ್ದ ಪತ್ರಗಳು ಕೂಡಾ ಗುಪ್ತಚರ ಇಲಾಖೆ ಕಣ್ಗಾವಲಿನಲ್ಲೇ ಸಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. [ಪ್ರಧಾನಿಗೂ ಇಲ್ಲ ನೇತಾಜಿ ರಹಸ್ಯ ಹೇಳುವ ಅಧಿಕಾರ!]

ನೇತಾಜಿ ಅವರ ಸಾವಿನ ಬಗ್ಗೆ ನೆಹರೂ ಅವರಿಗೆ ಮುಂಚಿತವಾಗಿ ತಿಳಿದಿತ್ತು ಎಂಬ ಸುದ್ದಿ ಈ ಮುಂಚೆ ಹಬ್ಬಿತ್ತು. ಈಗ ನೇತಾಜಿ ಕುಟುಂಬದ ಮೇಲೆ ನೆಹರೂ ಸರ್ಕಾರ ನಡೆಸಿದ ಗೂಢಚಾರಿಕೆಯ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ. [ಸಾರ್ವಜನಿಕ ಮೂತ್ರಿಗಳಿಗೂ ಈ ತ್ರಿಮೂರ್ತಿಗಳ ಹೆಸರು!]

ಈ ಸುದ್ದಿ ಹೊರ ಬೀಳುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಪರ ವಿರೋಧ ಚರ್ಚೆ ಅರಂಭವಾಗಿದೆ. ಕೆಲವು ಸಂಗ್ರಹಿತ ಟ್ವೀಟ್ ಗಳು ಇಲ್ಲಿವೆ...

ನೆಹರೂ ಜನ್ಮ ಜಾಲಾಡಿದ ಟ್ವಿಟ್ಟರಿಗರು

ನೆಹರೂ ಜನ್ಮ ಜಾಲಾಡಿದ ಟ್ವಿಟ್ಟರಿಗರು

1948ರಿಂದ 1968ರವರೆಗೆ ಅಂದಿನ ಜವಾಹರಲಾಲ್ ನೆಹರು ನೇತೃತ್ವದ ಕೇಂದ್ರ ಸರ್ಕಾರ, ಬೋಸ್ ಕುಟುಂಬದ ಮೇಲೆ ಸತತ 20 ವರ್ಷಗಳ ಕಾಲ ಗೂಢಾಚಾರಿಕೆ ನಡೆಸಿ ಮಾಹಿತಿ ಸಂಗ್ರಹಿಸಿತ್ತು ಎಂದು ಗುಪ್ತಚರ ಇಲಾಖೆ ದಾಖಲೆಗಳು ಹೇಳುತ್ತಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಬೋಸ್ ಅವರ ಮೊಮ್ಮಗ ಚಂದ್ರಕುಮಾರ್ ಆಶ್ಚರ್ಯ

ಬೋಸ್ ಅವರ ಮೊಮ್ಮಗ ಚಂದ್ರಕುಮಾರ್ ಆಶ್ಚರ್ಯ

ಬೋಸ್ ಅವರ ಮೊಮ್ಮಗ ಚಂದ್ರಕುಮಾರ್ ಆಶ್ಚರ್ಯವ್ಯಕ್ತಪಡಿಸಿ, ಗೂಢಚಾರಿಕೆ ಪ್ರಕರಣ ಸಂಬಂಧ ಕೂಡಲೇ ನ್ಯಾಯಾಂಗ ವಿಚಾರಣೆ ನಡೆಯಬೇಕು. ಈ ಪ್ರಕರಣ ನಿಜಕ್ಕೂ ನಮ್ಮ ಕುಟುಂಬಕ್ಕೆ ಆಘಾತ ನೀಡಿದೆ. ಗೂಢಚಾರಿಕೆ ನಡೆಸುವ ಅವಶ್ಯಕತೆ ಏನಿತ್ತು. ನಾವು ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

ಪ್ರಕರಣದ ಬಗ್ಗೆ ವರದಿ ಕೇಳಿದ ನ್ಯಾಯಾಲಯ

ಕಲ್ಕತ್ತಾ ಹೈಕೋರ್ಟ್ ಈ ಘಟನೆ ಹಾಗೂ ಮಾಹಿತಿ ಸೋರಿಕೆ ಬಗ್ಗೆ ಸ್ಪಷ್ಟನೆ ಹಾಗೂ ಸಮಗ್ರ ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

India’s biggest cover-up ಎಂದ ಜನ

India's biggest cover-up ಎಂದ ಜನ, ನೆಹರೂ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮೊದಲು ನೆಹರೂ ಭಾರತ ರತ್ನ ಕಸಿದುಕೊಳ್ಳಿ

ಮೊದಲು ಮಾಜಿ ಪ್ರಧಾನಿ ನೆಹರೂ ಅವರಿಗೆ ನೀಡಿರುವ ಭಾರತ ರತ್ನ ಕಸಿದುಕೊಳ್ಳಿ.

ಎಂಥಾ ದೊಡ್ಡ ರಹಸ್ಯ ಈಗ ಏಕೆ ಬಹಿರಂಗ

ಎಂಥಾ ದೊಡ್ಡ ರಹಸ್ಯ ಈಗ ಏಕೆ ಬಹಿರಂಗವಾಗಿದೆ. ಯಾರು ಗೂಢಚಾರಿಕೆ ಮಾಡಿದ್ದರು

Array

ಭಾರತವನ್ನು ಹೇಗೆ ಏಕೆ ಲೂಟಿ ಮಾಡಿದರು

ಭಾರತವನ್ನು ಹೇಗೆ ಏಕೆ ಲೂಟಿ ಮಾಡಿದರು ಎಂಬುದು ಈಗ ತಿಳಿಯುತ್ತಿದೆ.

ನೆಹರೂ ಮಲ್ಟಿ ಟ್ಯಾಲೆಂಟೆಡ್ ವ್ಯಕ್ತಿ

ನೆಹರೂ ಮಲ್ಟಿ ಟ್ಯಾಲೆಂಟೆಡ್ ವ್ಯಕ್ತಿ ಎಂಬುದು ಇದರಿಂದ ತಿಳಿಯುತ್ತದೆ.

English summary
Reportedly, Jawaharlal Nehru Government had spied on Netaji Subhas Chandra Bose's family. The intelligence sources say that freedom fighter and his family were put under surveillance for 20 years. Here are some of the tweets where people have reacted sharply over the shocking revelations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X