ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಂದಾ ಪುಷ್ಕರ್‌ ದೇಹದಲ್ಲಿತ್ತು ವಿಷದ ಅಂಶ

|
Google Oneindia Kannada News

ನವದೆಹಲಿ, ಅ. 10 : ಅನುಮಾನಾಸ್ಪದ ಸಾವಿಗೀಡಾದ ಕೇಂದ್ರದ ಮಾಜಿ ಸಚಿವ ಮತ್ತು ಹಾಲಿ ಸಂಸದ ಶಶಿ ತರೂರ್‌ ಪತ್ನಿ ಸುನಂದಾ ಪುಷ್ಕರ್‌ ಸಾವು ಹೊಸದೊಂದು ತಿರುವು ಪಡೆದುಕೊಂಡಿದೆ. ಸುನಂದಾ ದೇಹದ ಭಾಗಗಳನ್ನು ಪರೀಕ್ಷೆ ನಡೆಸಿರುವ ವೈದ್ಯರು ದೆಹಲಿ ಪೊಲೀಸರಿಗೆ ಅಂತಿಮ ವರದಿ ಸಲ್ಲಿಸಿದ್ದಾರೆ.

ಆಕೆಯ ದೇಹದಲ್ಲಿ ವಿಷದ ಅಂಶ ಇತ್ತು. ಕಿಡ್ನಿ, ಪಿತ್ತಕೋಶ ಮತ್ತು ಹೃದಯದಲ್ಲಿ ವಿಷದ ಅಂಶ ಸೇರಿಕೊಂಡಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಡಾ. ಸುಧೀರ್‌ ಗುಪ್ತಾ ನೇತೃತ್ವದ ಏಮ್ಸ್‌ ಆಸ್ಪತ್ರೆಯ ಮೂರು ಜನ ವೈದ್ಯರ ತಂಡ ಪರೀಕ್ಷೆ ನಡೆಸಿ ವರದಿ ನೀಡಿದೆ. ವೈದ್ಯರ ವರದಿ ಮತ್ತು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ಅಭಿಪ್ರಾಯ ಆಧರಿಸಿ ಅಂತಿಮ ವರದಿ ಸಿದ್ಧಪಡಿಸಲಾಗುತ್ತಿದೆ.[ಸುನಂದಾ ಪುಷ್ಕರ್ ಸಾವಿಗೆ ನಿಖರ ಕಾರಣ ಗೊತ್ತಾಯ್ತು!]

sunada

ಸುನಂದಾ ಅವರ ದೇಹದ ಮೇಲೆ ಸೂಜಿ(ಸಿರೆಂಜ್) ಚುಚ್ಚಿದ ಗಾಯ ಕಂಡುಬಂದಿದೆ. ಪೊಲೀಸರು ಅಗತ್ಯ ಮಾಹಿತಿ ನೀಡಲು ವಿಳಂಬ ಮಾಡಿದ್ದಾರೆ. ಇದು ನಮ್ಮ ವೈದ್ಯಕೀಯ ಪರೀಕ್ಷೆಗೆ ಕೆಲವೊಂದು ಅಡ್ಡಿ ಉಂಟುಮಾಡಿತು ಎಂದು ವೈದ್ಯರ ತಂಡ ಆರೋಪಿಸಿದೆ.[ಸುನಂದಾಗೆ ರಷ್ಯನ್ ವಿಷ, ಮೈತುಂಬಾ ಗಾಯ!]

ಜ.17 ರಂದು ಸುನಂದಾ ಪುಷ್ಕರ್‌ ಸಾವಿಗೀಡಾಗಿದ್ದರು. ಆದರೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ವ್ಯಕ್ತವಾಗಿ ತನಿಖೆ ಆರಂಭಿಸಲಾಗಿತ್ತು.

English summary
The medical team probing the death of Sunanda Pushkar, wife of former Union minister Shashi Tharoor, has concluded that she died of poisoning. Among the 15 injuries the team examined on Sunanda's body, it found 'injury number 10' to be a mark caused by the needle of a syringe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X