ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಮಾನ್ ಮುಸ್ಲಿಂ ಆಗಿದ್ದಕ್ಕೆ ಶಿಕ್ಷೆ ಅಂದವನಿಗೆ ಟ್ವಿಟ್ಟರಲ್ಲಿ ಮಂಗಳಾರತಿ

By Prasad
|
Google Oneindia Kannada News

ಲಖನೌ, ಮೇ. 08 : ಸಮಾಜವಾದಿ ಪಕ್ಷಕ್ಕೂ ವಿವಾದಗಳಿಗೂ ಅದೇನು ನಂಟೋ ಗೊತ್ತಿಲ್ಲ. ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗುವುದರಲ್ಲಿ ಆಜಂ ಖಾನ್ ನಂಬರ್ 1. ಈಗ ಮತ್ತೊಬ್ಬ ಸಮಾಜವಾದಿ ಪಕ್ಷದ ನಾಯಕ ವಿವಾದಾತ್ಮಕ ಹೇಳಿಕೆ ನೀಡಿ ಟ್ವಿಟ್ಟರಲ್ಲಿ ಮಂಗಳಾರತಿ ಎತ್ತಿಸಿಕೊಂಡಿದ್ದಾರೆ.

ಹೀಗೆಂದು ಹೇಳಿದವರು ಉತ್ತರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನರೇಶ್ ಅಗರವಾಲ್ ಎಂಬ ಹಿರಿಯ ರಾಜಕಾರಣಿ. ಸಲ್ಮಾನ್ ಖಾನ್ ಮುಸ್ಲಿಂ ಧರ್ಮೀಯನಾಗಿದ್ದರಿಂದಲೇ ಆತನನ್ನು ಅನಗತ್ಯವಾಗಿ ಶಿಕ್ಷಿಸಲಾಗುತ್ತಿದೆ ಎಂದು ಹೇಳಿರುವ ನರೇಶ್ ಶರ್ಮಾ ವಿವಾದದ ಸುಳಿಗೆ ಸಿಲುಕಿದ್ದಾರೆ.

"ಸಲ್ಮಾನ್‌ಗೆ ಶಿಕ್ಷೆಯಾಗಿದ್ದಕ್ಕೆ ತುಂಬಾ ದುಃಖವಾಗುತ್ತಿದೆ. ಆತ ದೊಡ್ಡ ಸ್ಟಾರ್. ದೇಶಾದ್ಯಂತ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆತ ಅಲ್ಪಸಂಖ್ಯಾತನಾಗಿದ್ದರಿಂದ ಮಹಾರಾಷ್ಟ್ರ ಸರಕಾರ ಆತನನ್ನು ಶಿಕ್ಷಿಸಿದೆ. ಇದು ನಿಜಕ್ಕೂ ದುರಾದೃಷ್ಟಕರ ತೀರ್ಪು" ಎಂದು ಹೇಳಿದ್ದಾರೆ ಎಂದು ಜೀ ನ್ಯೂಸ್ ವರದಿ ಮಾಡಿದೆ.

ಸಲ್ಮಾನ್ ಖಾನ್ ಮಾಡಿದ ಅಪಘಾತದಲ್ಲಿ ಮೃತ ಮತ್ತು ಗಾಯಗೊಂಡವರೆಲ್ಲರೂ ಅಲ್ಪಸಂಖ್ಯಾತರೇ ಎಂಬುದನ್ನೂ ಗಮನಿಸದೆ ಇಂಥ ಬೇಜವಾಬ್ದಾರಿಯುತವಾದ, ನ್ಯಾಯಾಲಯದ ತೀರ್ಪನ್ನು ಗೌರವಿಸದ ರಾಜಕಾರಣಿ ನರೇಶ್ ಅಗರವಾಲ್ ಹೇಳಿಕೆಗೆ ಟ್ವಿಟ್ಟರಲ್ಲಿ ಹೇಗೆ ಪ್ರತಿಕ್ರಿಯಿಸಲಾಗಿದೆ ಎಂಬುದನ್ನು ಮುಂದೆ ಓದಿರಿ.

ನರೇಶ್ ಅಗರವಾಲ್‌ಗೆ ನಾಚಿಕೆಯಾಗಬೇಕು

ನರೇಶ್ ಅಗರವಾಲ್‌ಗೆ ನಾಚಿಕೆಯಾಗಬೇಕು

ನರೇಶ್ ಅಗವಾಲ್‌ಗೆ ನಾಚಿಕೆಯಾಗಬೇಕು. ಇಂಥ ಹೇಳಿಕೆಯನ್ನು ಸಲ್ಮಾನ್ ಕೂಡ ಬೆಂಬಲಿಸುವುದಿಲ್ಲ. ಇದು ನ್ಯಾಯಾಂಗದ ಮೇಲೆ ಮಾಡಿದ ಆರೋಪ - @sustain60

ಸತ್ತವನು ಮತ್ತು ಗಾಯಗೊಂಡವರು ಕೂಡ ಮುಸ್ಲಿಂರೇ

ಆ ಅಪಘಾತದಲ್ಲಿ ಸತ್ತವನು ಮತ್ತು ಗಾಯಗೊಂಡವರು ಕೂಡ ಮುಸ್ಲಿಂರೇ ಅಂತ ನರೇಶ್ ಅಗರವಾಲ್ ಗೆ ತಿಳಿದಿಲ್ಲವೆ?

ರವೀಂದ್ರ ಪಾಟೀಲ್ ಸತ್ತಿದ್ದೇಕೆಂದರೆ ಆತ ಹಿಂದೂ

ನರೇಶ್‌ದೆಲ್ಲ ತಪ್ಪು ತಿಳಿವಳಿಕೆ. ರವೀಂದ್ರ ಪಾಟೀಲ್ ಸತ್ತಿದ್ದೇಕೆಂದರೆ ಆತ ಹಿಂದೂ, ಕಮಾಲ್ ಖಾನ್ ಇನ್ನೂ ಬದುಕಿದ್ದೇಕೆಂದರೆ ಆತ ಮುಸ್ಲಿಂ!

ಸಿಕ್ಯೂಲರ್‌ಗಳು ಕೂಡ ಹೇಳುತ್ತಿರುವುದು ಅದನ್ನೇ

ಸಲ್ಮಾನ್ ಖಾನ್ ಮೋದಿಯನ್ನು ಹೊಗಳಿರದಿದ್ದರೆ ಆತ ಮುಸ್ಲಿಂ ಆಗಿದ್ದಕ್ಕೇ ಶಿಕ್ಷೆಯಾಯಿತು ಎಂದು ಜಾತ್ಯತೀತವಾದಿಗಳು ವಾದಿಸುತ್ತಿದ್ದರು ಎಂಬ ಮಧುಕಿಶ್ವರ್ ಮಾತಿಗೆ ವಾಯ್ಸ್ ಆಫ್ ಟ್ರುತ್ ವಿವರಣೆ.

ಮುಸ್ಲಿಂ ವೋಟಿಗಾಗಿ ದೇಶವನ್ನೇ ಮಾರುವವರು

ಮುಸ್ಲಿಂ ವೋಟು ಪಡೆಯಲು ದೇಶವನ್ನೇ ಮಾರುವವರು ನರೇಶ್ ಅಗರವಾಲ್ ನಂಥವರು. ಮುಸ್ಲಿಂರೇ ನರೇಶ್ ಗಿಂತ ಹೆಚ್ಚು ನಂಬಿಗಸ್ತರಾಗಿರುತ್ತಾರೆ.

English summary
Tweeples lambast SP leader Naresh Agrawal for his irresponsible comment against the verdict given by Mumbai Sessions court with respect to Salman's hit and run case. He had said, Salman Khan was punished because he belongs to minority community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X