ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ ನಲ್ಲಿ ಭಾರತಕ್ಕೆ ಬರಲಿರುವ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಭಾರತ ಭೇಟಿ. ಇದೇ ವರ್ಷ ನವೆಂಬರ್ ನಲ್ಲಿ ಹೈದರಾಬಾದ್ ನಲ್ಲಿ ನಡೆಯಲಿರುವ ಜಾಗತಿಕ ಉದ್ಯಮಿಗಳ ಸಮ್ಮೇಳನಕ್ಕೆ ಆಗಮಿಸಲಿರುವ ಇವಾಂಕಾ.

|
Google Oneindia Kannada News

ನವದೆಹಲಿ, ಆಗಸ್ಟ್ 11: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್, ಇದೇ ವರ್ಷ ನವೆಂಬರ್ ತಿಂಗಳಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ನರೇಂದ್ರ ಮೋದಿ ಆಹ್ವಾನಕ್ಕೆ ಟ್ವೀಟ್ ನಲ್ಲಿ ಟ್ರಂಪ್ ಪುತ್ರಿಯಿಂದ ಧನ್ಯವಾದನರೇಂದ್ರ ಮೋದಿ ಆಹ್ವಾನಕ್ಕೆ ಟ್ವೀಟ್ ನಲ್ಲಿ ಟ್ರಂಪ್ ಪುತ್ರಿಯಿಂದ ಧನ್ಯವಾದ

ಹೈದರಾಬಾದ್ ನಲ್ಲಿ ನವೆಂಬರ್ 28ರಿಂದ ಮೂರು ದಿನಗಳ ಕಾಲ ಜಾಗತಿಕ ಉದ್ಯಮಿಗಳ ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನದಲ್ಲಿ ಭಾಗವಹಿಸಲು ಇವಾಂಕಾ ಅವರು ಆಗಮಿಸಲಿದ್ದಾರೆಂದು ಹೇಳಲಾಗಿದೆ. ಈ ಸಮ್ಮೇಳನವನ್ನು ನೀತಿ ಆಯೋಗ ಆಯೋಜಿಸಿದೆ.

Trump tweets Ivanka participation in Global Entrepreneurship Summit in India

ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕದ ಉದ್ಯಮಿಗಳ ನಿಯೋಗವೊಂದು ಭಾರತಕ್ಕೆ ಆಗಮಿಸುತ್ತಿದೆ. ಆ ನಿಯೋಗಕ್ಕೆ ಇವಾಂಕಾ ಅವರು ಸಾರಥಿಯಾಗಿದ್ದು ಆ ಹಿನ್ನೆಲೆಯಲ್ಲೇ ಅವರು ಭಾರತಕ್ಕೆ ಆಗಮಿಸಲಿದ್ದಾರೆ.

ಟ್ರಂಪ್ ಗೆ ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ ಮೋದಿಟ್ರಂಪ್ ಗೆ ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ ಮೋದಿ

ಇದೇ ವರ್ಷ ಜೂನ್ ತಿಂಗಳಲ್ಲಿ ಅಮೆರಿಕಕ್ಕೆ ಮೋದಿ ಭೇಟಿ ನೀಡಿದ್ದಾಗಲೇ, ಇವಾಂಕಾ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಮಂತ್ರಣ ನೀಡಿದ್ದರು.

ಇವಾಂಕಾ ಆಗಮನದ ಕುರಿತಂತೆ ಮೋದಿ ಮಾಡಿರುವ ಟ್ವೀಟ್ ಗೆ ಟ್ವೀಟ್ಟರ್ ನಲ್ಲೇ ಉತ್ತರಿಸಿರುವ ಇವಾಂಕಾ, ಭಾರತಕ್ಕೆ ಭೇಟಿ ನೀಡುವ ವಿಚಾರದಲ್ಲಿ ಕಾತುರರಾಗಿದ್ದು, ಭಾರತಕ್ಕೆ ಭೇಟಿ ನೀಡಿದಾಗ ಮೋದಿಯವರನ್ನು ಸಂಧಿಸುವುದಾಗಿ ತಿಳಿಸಿದ್ದಾರೆ.

ಅತ್ತ, ಡೊನಾಲ್ಡ್ ಟ್ರಂಪ್ ಕೂಡ ಇವಾಂಕಾ ಅವರ ಭಾರತ ಭೇಟಿಯನ್ನು ಟ್ವಿಟ್ಟರ್ ಮೂಲಕ ಖಚಿತಪಡಿಸಿದ್ದಾರೆ.

English summary
In response to Indian Prime Minister Narendra Modi's tweet on Thursday night, US President Donald J Trump reaffirmed his daughter Ivanka Trump's participation in the Global Entrepreneurship Summit at Hyderabad from November 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X