ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡತನದ ಕಾರಣಕ್ಕೆ 650 ರುಪಾಯಿಗೆ ಹೆಣ್ಣುಮಗು ಮಾರಿದ ದಂಪತಿ

|
Google Oneindia Kannada News

ಅಗರ್ತಲ, ಸೆಪ್ಟೆಂಬರ್ 26: ತ್ರಿಪುರಾ ರಾಜ್ಯದಲ್ಲಿ ನಡೆದ ಈ ಘಟನೆ ಬಡತನದ ಕ್ರೂರ ಹಾಗೂ ಅಸಹಾಯಕ ಮುಖವನ್ನು ತೆರೆದಿಡುತ್ತದೆ. ಅಲ್ಲಿನ ಧಲಾಯ್ ಜಿಲ್ಲೆಯ ಬುಡಕಟ್ಟು ದಂಪತಿ, ತಮ್ಮಿಂದ ಮಗುವಿನ ಖರ್ಚು ಸಂಭಾಳಿಸುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹೆಣ್ಣುಮಗುವನ್ನು ಮಾರಾಟ ಮಾಡಿದ್ದಾರೆ.

ಅಲ್ಲಿನ ಸ್ಥಳೀಯ ಪತ್ರಿಕೆಯೊಂದರಲ್ಲಿ ಈ ಬಗ್ಗೆ ವರದಿಯಾಗಿದ್ದು, ಆ ಕುಟುಂಬ ಬಡತನ ರೇಖೆಗಿಂತ ಕೆಳಗಿದೆ. ಹೆಣ್ಣುಮಗುವನ್ನು 650 ರುಪಾಯಿಗೆ ಮಾರಲಾಗಿದೆ ಎಂದು ಪ್ರಕಟಿಸಲಾಗಿದೆ. ಟಿಎಂಸಿ ಶಾಸಕ ಸುದೀಪ್ ರಾಯ್ ಬರ್ಮನ್ ಈ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.[25 ವರ್ಷದ ನಂತರ ಆತನನ್ನು ಕಂಡದ್ದು ಅದೇ ಮೊದಲು ಹಾಗೂ ಕೊನೆ]

Tribal Couple Sell Daughter For 650

ತೀರಾ ಕುಗ್ರಾಮಗಳಲ್ಲಿ ಬುಡಕಟ್ಟು ಜನಾಂಗದವರು ವಾಸವಿದ್ದಾರೆ. ಆಹಾರ ಸರಿಯಾಗಿ ದೊರೆಯದೆ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಾಧ್ಯಮಗಳಿಂದ ಈ ಘಟನೆ ಬೆಳಕಿಗೆ ಬಂದಿದೆ. ಸರಕಾರ ಇದನ್ನು ಮುಚ್ಚಿಹಾಕಲು ಯತ್ನಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.[ಬೆಳಗೆರೆ ಅವರ 'ಸಮಾಧಾನ'ದ ಒಂದು ಪತ್ರ: ದುರುಳ ತಂದೆಗೆ ಮರುಳಾದ ಮಕ್ಕಳು]

ಗಂದಚೆರ್ರಾ ಪ್ರದೇಶದಲ್ಲಿ ಶನಿವಾರ ಮಗು ಮಾರಾಟ ನಡೆದಿದೆ. ಅದೇ ಜಿಲ್ಲೆಯ ಕಮಲ್ ಪುರ್ ನಲ್ಲಿ ಈ ಹಿಂದೆ ಮಗುವಿನ ಮಾರಾಟ ಮಾಡಲಾಗಿತ್ತು. ಎಷ್ಟೋ ಮಂದಿ ಅವರ ಜೀವನ ನಡೆಸಲು ಹೆಣ್ಣುಮಗುವನ್ನು ಮಾರಾಟ ಮಾಡಿದ ನಿದರ್ಶನಗಳಿವೆ ಎಂದು ಬರ್ಮನ್ ಹೇಳಿದ್ದಾರೆ.

English summary
A tribal couple in remote Dhalai district, Agartala sold their girl child to 650 rupees, as they were unable to bear the expenses of the infant. The family belongs to the Below Poverty Line category. A report published in a local paper said the child was sold for ₹650.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X