ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಲ್ಲಿ ಗೋಚರಿಸಲಿದೆ ಮಾರ್ಚ್ 9ರ ಸೂರ್ಯ ಗ್ರಹಣ?

|
Google Oneindia Kannada News

ಬೆಂಗಳೂರು, ಮಾರ್ಚ್ ,08: 2016 ರ ಮೊದಲ ಸೂರ್ಯ ಗ್ರಹಣ ಮಾರ್ಚ್ 9 ಬುಧವಾರ ಸಂಭವಿಸಲಿದೆ. ಬುಧವಾರ ಮುಂಜಾನೆ 5.46ಕ್ಕೆ ಆರಂಭವಾಗುವ ಗ್ರಹಣ ಬೆಳಗಿನ ಜಾವ 6.47ಕ್ಕೆ ಅಂತ್ಯವಾಗಲಿದೆ.

ಸೂರ್ಯ ಗ್ರಹಣದ ಪ್ರತಿಯೊಂದು ಅಂಶವನ್ನು ಪ್ರಸಾರ ಮಾಡಲು ನಾಸಾ ವ್ಯವಸ್ಥೆ ಮಾಡಿಕೊಂಡಿದೆ. ಗ್ರಹಣದ ನೇರ ಪ್ರಸಾರವನ್ನು ಮಾಡಲಿದ್ದೇವೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. [ಗ್ರಹಣ ಕಾಲದಲ್ಲಿ ಏನು ಮಾಡಬೇಕು, ಏನು ಮಾಡಬಾರದು]

total-solar-eclipse-will-occur-on-march-9-2016-india

ಆಗ್ನೇಯ ಏಷ್ಯಾ ಭಾಗದ ಜನರು ಸಂಪೂರ್ಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದ್ದಾರೆ. ಹವಾಯಿ, ಗುವಾಂ ಮತ್ತು ಅಲಾಸ್ಕಾ ಸೇರಿದಂತೆ ಏಷ್ಯಾ ಮತ್ತು ಪೆಸಿಫಿಕ್‌ನ ಹಲವು ರಾಷ್ಟ್ರಗಳಲ್ಲಿ ಭಾಗಶಃ ಸೂರ್ಯಗ್ರಹಣ ಕಾಣಿಸಲಿದೆ. [ವರ್ಷದ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಕಾಣುತ್ತದೆಯೇ?]

ಬೆಂಗಳೂರಿನ ಕತೆ?
ಸೂರ್ಯಗ್ರಹಣದ ಭಾಗಶಃ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳಲಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 6.30 ಕ್ಕೆ ಸೂರ್ಯೋದಯವಾಗಲಿದೆ. ಬೆಂಗಳೂರಿಗರು ಸುಮಾರು 17 ನಿಮಿಷಗಳ ಕಾಲ ಗ್ರಹಣ ವೀಕ್ಷಣೆ ಮಾಡಬಹುದಾಗಿದೆ.[ಸಾಕ್ಷಾತ್ ದೇವರನ್ನೇ ಸಂಕಷ್ಟದಲ್ಲಿ ಸಿಲುಕಿಸುವ ಗ್ರಹಣ!]

ಅಲ್ಲದೇ ರಾಜ್ಯದ ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ಮೈಸೂರು, ಉಡುಪಿ, ತುಮಕೂರು, ಮಂಡ್ಯ ಮತ್ತು ಮಡಿಕೇರಿಯಲ್ಲಿಯೂ ಕೆಲ ನಿಮಿಷಗಳ ಕಾಲ ಗ್ರಹಣದ ಅಂತಿಮ ಭಾಗವನ್ನು ವೀಕ್ಷಣೆ ಮಾಡಬಹುದು.

ರಾಶಿ ಫಲ
ಪೂರ್ವಭದ್ರಾ ನಕ್ಷತ್ರದ ಕುಂಭ ರಾಶಿ ಮೇಲೆ ಈ ಬಾರಿಯ ಸೂರ್ಯ ಗ್ರಹಣ ಘಟಿಸುತ್ತಿದೆ.ಗ್ರಹಣದ ಸಂದರ್ಭ ಈ ರಾಶಿಗೆ ಸಂಬಂಧಿಸಿದವರುವಿಶೇಷ ಪೂಜೆ ಮಾಡಬೇಕಾಗುಗವುದು ಎಂದು ಧಾರ್ಮಿಕ ನೆಲೆಗಟ್ಟು ಹೇಳುತ್ತದೆ.

* ಶುಭಫಲ: ಮೇಷ, ವೃಷಭ, ಕನ್ಯಾ, ಧನು[ವಾರಭವಿಷ್ಯ : ರಾಶಿಫಲ ಮಾ.6ರಿಂದ 12ರವರೆಗೆ]

* ಮಿಶ್ರ ಫಲ: ಮಿಥುನ, ಸಿಂಹ, ತುಲಾ, ಮಕರ

* ಅಶುಭ ಫಲ: ಕುಂಭ, ಮೀನ, ಕರ್ಕ, ವೃಶ್ಚಿಕ [ಸೂಪರ್ ಕೆಂಪು ಚಂದ್ರನ ಕುರಿತು ಇಂಟರೆಸ್ಟಿಂಗ್ ಸಂಗತಿ]

English summary
Come March 9 (Wednesday) and this planet will witness a total solar eclipse. However, in India, the rare celestial phenomenon will be seen partially from most places except the western and north-western parts.The total eclipse will begin at 5.47 am IST and will continue till 9.08 am. The partial phase will conclude at 10.05 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X