ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಖಿಲೇಶ್ ಯಾದವ್ ಬ್ಯಾಗ್ ನೇ ವಿತರಿಸಿ ಎಂದ ಯೋಗಿ

ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಶಾಲಾ ಮಕ್ಕಳಿಗೆ ವಿತರಿಸಬೇಕೆಂದಿದ್ದ ಅಖಿಲೇಶ್ ಯಾದವ್ ಭಾವಚಿತ್ರವಿರುವ ಸ್ಕೂಲ್ ಬ್ಯಾಗ್ ಗಳು ಹಾಗೇ ಉಳಿದಿತ್ತು. ಈ ಬಾರಿ ಅವುಗಳನ್ನು ವಿತರಿಸಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅದೇಶಿಸಿದ್ದಾರೆ

|
Google Oneindia Kannada News

ಲಖನೌ, ಮೇ 1: ಇದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಎಂಥವರೂ ಮೆಚ್ಚಬೇಕು ಎನಿಸುವಂಥ ನಿರ್ಧಾರ. ಏಕೆಂದರೆ ಈ ಹಿಂದೆ ಅಲ್ಲಿ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷ ಅಖಿಲೇಶ್ ಯಾದವ್ ರ ಚಿತ್ರವಿರುವ ಬ್ಯಾಗ್ ಗಳನ್ನು ಶಾಲಾ ಮಕ್ಕಳಿಗೆ ವಿತರಿಸಿತ್ತು. ಆ ಪೈಕಿ ಕೆಲವು ಸಾವಿರ ಬ್ಯಾಗ್ ಗಳು ಹಾಗೇ ಉಳಿದಿದ್ದವು. ಅವುಗಳನ್ನೇ ಈ ಬಾರಿ ವಿತರಿಸಿ ಎಂದು ಯೋಗಿ ಸೂಚಿಸಿದ್ದಾರೆ.

ಸಾರ್ವಜನಿಕರ ಹಣ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಯೋಗಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಅಖಿಲೇಶ್ ರ ಭಾವಚಿತ್ರವಿರುವ ಮೂವತ್ತೈದು ಸಾವಿರ ಬ್ಯಾಗ್ ಗಳು ಹಾಗೇ ಉಳಿದಿದ್ದವು. ಕಳೆದ ಮಾರ್ಚ್ ನಲ್ಲಿ ಅಖಿಲೇಶ್ ಅಧಿಕಾರ ಕಳೆದುಕೊಂಡು, ಬಿಜೆಪಿ ಗದ್ದುಗೆ ಏರಿತ್ತು.[ಉ.ಪ್ರ ಹಾದಿಯಲ್ಲಿ ದೆಹಲಿ ಹೆಜ್ಜೆ, ರಜಾ ರದ್ದು ಮಾಡ್ತೀವಿ ಎಂದ ಮನೀಶ್ ಸಿಸೋಡಿಯಾ]

Yogi Adiityanath

ಈಗ ಅಖಿಲೇಶ್ ಭಾವಚಿತ್ರವಿರುವ ಬ್ಯಾಗ್ ಗಳನ್ನೆಲ್ಲ ವಿತರಿಸಿಯಾದ ಮೇಲೆ ಹೊಸ ಬ್ಯಾಚ್ ನ ಬ್ಯಾಗ್ ಗಳ ಮೇಲೆ 'ಮುಖ್ಯಮಂತ್ರಿ ಯೋಜನಾ' ಅಥವಾ 'ಉತ್ತರಪ್ರದೇಶ ಯೋಜನಾ' ಎಂದು ಮಾತ್ರ ಇರುತ್ತದೆ. ಯಾವುದೇ ಯೋಜನೆಗಳಿಗೆ ವ್ಯಕ್ತಿಯ ಹೆಸರಿಡಬಾರದು ಎಂದು ಆದಿತ್ಯನಾಥ್ ನಿರ್ಧರಿಸಿದ್ದಾರೆ.

Akhilesh Yadav

ಒಂದರಿಂದ ಎಂಟನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ವಿತರಿಸಲು 1.8 ಕೋಟಿ ಬ್ಯಾಗ್ ಗಳಿಗೆ ಮಂಜೂರಾತಿ ದೊರೆತಿತ್ತು. ಈ ಮಧ್ಯೆ ಚುನಾವಣೆ ಘೋಷಣೆಯಾಗಿ, ನೀತಿ ಸಂಹಿತೆ ಜಾರಿಯಾದ್ದರಿಂದ ಹಲವು ಬ್ಯಾಗ್ ಗಳನ್ನು ಜಿಲ್ಲಾ ಶಿಕ್ಷಣ ಕಚೇರಿಯಲ್ಲಿರಿಸಿ, ಮುಂದಿನ ಸರಕಾರದ ನಿರ್ಧಾರಕ್ಕೆ ಬಿಡಲು ತೀಮಾನಿಸಲಾಯಿತು.[ಸರ್ಕಾರಿ ಕಚೇರಿಗಳ ಸುಧಾರಣೆಗೆ ಸಿಎಂ ಯೋಗಿ ಮತ್ತೊಂದು ಹೆಜ್ಜೆ]

Mayawati

ಇದರ ಆರ್ಥಿಕ ಮೌಲ್ಯವನ್ನು ಲೆಕ್ಕ ಹಾಕಿ, ಅಖಿಲೇಶ್ ಯಾದವ್ ಬ್ಯಾಗ್ ನೇ ವಿತರಿಸಲು ಯೋಗಿ ನಿರ್ಧರಿಸಿದ್ದಾರೆ. ಆದರೆ ಮುಖ್ಯಮಂತ್ರಿಯ ಈ ಕ್ರಮವನ್ನು ಅಗತ್ಯಕ್ಕಿಂತ ಹೆಚ್ಚು ಹೊಗಳಲಾಗುತ್ತಿದೆ ಎಂದು ಸಮಾಜವಾದಿ ಪಕ್ಷ ಹೇಳಿದೆ. 2012ರಲ್ಲಿ ಅಖಿಲೇಶ್ ಅಧಿಕಾರಕ್ಕೆ ಬಂದ ಮೇಲೆ ಅವರಿಗೂ ಮುಂಚೆ ಅಧಿಕಾರದಲ್ಲಿದ್ದ ಮಾಯಾವತಿಯವರ ಯಾವ ಪ್ರತಿಮೆಯನ್ನೂ ಅಲ್ಲಿನ ಉದ್ಯಾನಗಳಿಂದ ತೆಗೆಸಲಿಲ್ಲ ಎಂಬುದನ್ನು ಎಸ್ ಪಿ ಮುಖಂಡರು ನೆನಪಿಸಿದ್ದಾರೆ.

English summary
Yogi Adityanath, the Chief Minister of Uttar Pradesh, has allowed thousands of schoolbags emblazoned with images of his predecessor Akhilesh Yadav to be distributed in schools. The extraordinary decision is driven by financial prudence, say officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X