ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗಾ ಶುದ್ಧೀಕರಣಕ್ಕಾಗಿ ಚರ್ಮ ಕಾರ್ಖಾನೆ ಸ್ಥಳಾಂತರ

ಗಂಗಾ ನದಿಯನ್ನು ಮಾಲಿನ್ಯಮುಕ್ತವಾಗಿಸುವುದಕ್ಕಾಗಿ ಗಂಗಾ ನಡಿಯ ತಟದಲ್ಲಿದ್ದ ಲೆದರ್ ಕಾರ್ಖಾನೆ ಯೊಂದನ್ನು ಸ್ಥಳಾಂತರಿಸಲು ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ಲಕ್ನೊ, ಏಪ್ರಿಲ್ 10: ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಯೋಜನೆಗಳಲ್ಲಾದ ಗಂಗಾ ಶುದ್ಧೀಕರಣಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯವಾಥ್ ಸಹ ಕೈಜೋಡಿಸುತ್ತಿದ್ದಾರೆ.

ಅದಕ್ಕೆಂದೇ ಗಂಗಾ ನದಿಯನ್ನು ಮಾಲಿನ್ಯಮುಕ್ತವಾಗಿಸುವುದಕ್ಕಾಗಿ ಗಂಗಾ ನಡಿಯ ತಟದಲ್ಲಿದ್ದ ಲೆದರ್ ಕಾರ್ಖಾನೆ ಯೊಂದನ್ನು ಸ್ಥಳಾಂತರಗೊಳಿಸಲು ನಿರ್ಧರಿಸಿದ್ದಾರೆ. ಕಾರ್ಖಾನೆಯ ಸ್ಥಳಾಂತರ ಯಾವ ಕ್ಷಣದಲ್ಲಿ ಬೇಕಾದರೂ ಆಗಬಹುದು ಎಂದು ಈಗಾಗಲೇ ಸೂಚನೆ ನೀಡಲಾಗಿದ್ದು, ಗಂಗೆಗೆ ಯಾವುದೇ ರೀತಿಯ ಮಲೀನಯುಕ್ತ ನೀರು ಹರಿಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.

To clean Ganga leather industries to be moved away

ಅಷ್ಟೇ ಅಲ್ಲ, ನರೇಗಾ(ಉದ್ಯೋಗ ಖಾತ್ರಿ) ಯೋಜನೆಯಡಿ ಗಂಗೆ ಹರಿಯುವ ಆಸುಪಾಸಿನ ಜಾಗಗಳಲ್ಲಿ ಇಂಗುಗುಂಡಿಗಳನ್ನು ತೋಡಿ ನೀರಿನ ಸಂರಕ್ಷಣೆ ಮಾಡಲಾಗುತ್ತಿದೆ.

ಗಂಗಾ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಕೆಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಯೋಗಿ ಆದಿತ್ಯನಾಥ್, ಗಂಗೆಯನ್ನು ಸ್ವಚ್ಛಗೊಳಿಸುವ 'ನಮಾಮಿ ಗಂಗೆ' ಯೋಜನೆಯ ಯಶಸ್ಸಿಗೆ ಉತ್ತರ ಪ್ರದೇಶ ಪ್ರತಿಫಲಾಪೇಕ್ಷೆಯಿಲ್ಲದೆ ತನ್ನ ಕೊಡುಗೆ ನೀಡಬೇಕಿದೆ ಎಂದಿದ್ದಾರೆ.

ಇದರೊಂದಿಗೆ ಬೇರೆ ಬೇರೆ ನಡಿಗಳ ಹೂಳೆತ್ತುವ ಕೆಲಸವೂ ಆಗಬೇಕಿದೆ, ಇದರಿಂದ ಯಾವುದೇ ರೀತಿಯ ನೀರಿನ ಕೊರತೆ ರಾಜ್ಯವನ್ನು ಕಾಡುವುದಿಲ್ಲ ಎಂದವರು ಹೇಳಿದ್ದಾರೆ.

English summary
In a bid to make Ganga pollution free, Chief Minister of Uttar Pradesh, Yogi Adityanath has directed officials to start shifting leather industry units in a phased manner. The CM told officials that the shifting must take place at any cost and it should be ensured that no dirty and polluted water should flow into the Ganga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X