ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ ಅನುಮಾನಗಳಿಗೆ 'ವಿವಿಪ್ಯಾಟ್' ಬ್ರೇಕ್ ಹಾಕಿದ ಕೇಂದ್ರ

ವಿಪಕ್ಷಗಳ ಇವಿಎಂ ಗೊಂದಲ, ಅನುಮಾನಗಳಿಗೆ ಬ್ರೇಕ್ ಹಾಕುವ ಸಲುವಾಗಿ ಮುಂದಿನ ಅಂದರೆ 2019ರ ಲೋಕಸಭಾ ಚುಣಾವಣೆಗೆ ಇವಿಎಂಗಳ ಜತೆಗೆ 'ವಿವಿಪ್ಯಾಟ್' ಬಳಕೆಗೆ ಕೇಂದ್ರ ಸರಕಾರ ತೀರ್ಮಾನ ತೆಗೆದುಕೊಂಡಿದೆ.

By Sachhidananda Acharya
|
Google Oneindia Kannada News

ನವದೆಹಲಿ, ಏಪ್ರಿಲ್ 19: ಇಂದು ದೆಹಲಿಯಲ್ಲಿ ನಡೆದ ಕೇಂದ್ರ ಕ್ಯಾಬಿನೆಟ್ ಸಚಿವರ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ವಿಪಕ್ಷಗಳ ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್) ಗೊಂದಲ, ಅನುಮಾನಗಳಿಗೆ ಬ್ರೇಕ್ ಹಾಕುವ ಸಲುವಾಗಿ ಮುಂದಿನ ಅಂದರೆ 2019ರ ಲೋಕಸಭಾ ಚುಣಾವಣೆಗೆ ಇವಿಎಂಗಳ ಜತೆಗೆ 'ವಿವಿಪ್ಯಾಟ್' ಬಳಕೆಗೆ ಕೇಂದ್ರ ಸರಕಾರ ತೀರ್ಮಾನ ತೆಗೆದುಕೊಂಡಿದೆ.[ಉಪಚುನಾವಣೆಗೆ ಹೊಸ ವಿವಿಪ್ಯಾಟ್ ಮತ ಯಂತ್ರಗಳು]

To break the Tampering Doubts, Cabinet clears EC’s proposal to buy VVPAT machines

ವಿವಿಪ್ಯಾಟ್ (VVPAT - ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್) ಬಳಕೆಗೆ 3,000 ಕೋಟಿ ಖರ್ಚಾಗಲಿದೆ. ಇಷ್ಟು ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಚುನಾವಣಾ ಆಯೋಗ ಮನವಿ ಸಲ್ಲಿಸಿತ್ತು. ಚುನಾವಣಾ ಆಯೋಗದ ಮನವಿಗೆ ಕೇಂದ್ರ ಸರಕಾರ ಒಪ್ಪಿದ್ದು 16.15 ಲಕ್ಷ ವಿವಿಪ್ಯಾಟ್ ಮೆಷೀನ್ ಗಳಿಗಾಗಿ 3,173 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕ್ಯಾಬಿನೆಟ್ ಸಭೆಯ ನಂತರ ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ.

ಇದರಿಂದ ಮುಂದಿನ ಚುನಾವಣೆಯಲ್ಲಿ ವಿವಿಪ್ಯಾಟ್ ಇರುವ ಮತಯಂತ್ರಗಳನ್ನು ಚುನಾವಣೆಗೆ ಬಳಸಲಾಗುತ್ತದೆ.

ವಿವಿಪ್ಯಾಟ್ ಕಾರ್ಯನಿರ್ವಹಣೆ ಹೇಗೆ?

ವಿವಿಪ್ಯಾಟ್ ಗಳನ್ನು ಮತಯಂತ್ರಗಳಿಗೆ ಜೋಡಿಸಲಾಗಿರುತ್ತದೆ. ಇವಿಎಂನಲ್ಲಿ ಮತದಾನ ಮಾಡುತ್ತಿದ್ದಂತೆ ಯಾರಿಗೆ ಮತ ಹಾಕಿದ್ದೇವೆ ಎನ್ನುವುದನ್ನು ತೋರಿಸುವ ಚೀಟಿಯೊಂದು ವಿವಿಪ್ಯಾಟ್ ನಲ್ಲಿ ಕಾಣಿಸಿಕೊಳ್ಳುತ್ತದೆ.[ಉಪ ಚುನಾವಣೆ ಫಲಿತಾಂಶದ ಬಗ್ಗೆ ತಕರಾರು ತೆಗೆಯುವಂತೆಯೇ ಇಲ್ಲ]

ವಿವಿ ಪ್ಯಾಟ್ ನ ಗ್ಲಾಸಿನೊಳಗಿನಿಂದ ಮತದರಾರರು ಈ ಚೀಟಿಯನ್ನು 7 ಸೆಕೆಂಡ್ ಗಳ ಕಾಲ ನೋಟಬಹುದಾಗಿದೆ. ನಂತರ ಇದು ಬಾಕ್ಸಿನೊಳಗೆ ಬೀಳುತ್ತದೆ. ಒಂದೊಮ್ಮೆ ಮತ ಎಣಿಕೆ ವೇಳೆ ಮತಯಂತ್ರದಲ್ಲಿ ದೋಷವುಂಟಾದಲ್ಲಿ, ಗೊಂದಲಗಳು ಕಂಡು ಬಂದಲ್ಲಿ ವಿವಿಪ್ಯಾಟ್ ಬಾಕ್ಸ್ ನಲ್ಲಿ ದಾಖಲಾದ ಮತಗಳನ್ನು ಚುನಾವಣಾಧಿಕಾರಿ ಅನುಮತಿಯೊಂದಿಗೆ ಸಿಬ್ಬಂದಿ ತಕ್ಷಣಕ್ಕೆ ಎಣಿಕೆ ಮಾಡಬಹುದಾಗಿದೆ. ಹೀಗಾಗಿ ಯಾವುದೇ ಗೊಂದಲಗಳಿಗೂ ಇಲ್ಲಿ ಅವಕಾಶವಿಲ್ಲ.

ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಇದೇ ವಿವಿಪ್ಯಾಟ್ ಒಳಗೊಂಡ ಮತಯಂತ್ರಗಳನ್ನು ಬಳಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

English summary
The cabinet has cleared Election Commission’s proposal of buying new Voter Verifiable Paper Audit Trail (VVPAT) machines on Wednesday morning. Which will be used in 2019 Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X