ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ಆಗಿರುವ ಜಯಾ ಆಸ್ಪತೆಯಲ್ಲಿರುವ ಈ ಫೋಟೋ ನಂಬಬೇಡಿ

ಜಯಲಲಿತಾ ಆರೋಗ್ಯದ ಬಗ್ಗೆ ಊಹಾಪೋಹ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ, ಆಸ್ಪತ್ರೆಯ ಸಿಬ್ಬಂದಿಗಳು ಅವರಿಗೆ ಅಂತಿಮ ಗೌರವ ಸೂಚಿಸುತ್ತಿರುವ, ನಂಬಿಕೆಗೆ ದೂರವಾಗಿರುವಂತಹ ಫೋಟೋಗಳು ಸಾಮಾಜಿಕ ತಾಣದಲ್ಲಿ ಬೇಕಾಬಿಟ್ಟಿ ಹರಿದಾಡುತ್ತಿದೆ.

By Balaraj
|
Google Oneindia Kannada News

ಬೆಂಗಳೂರು, ಚೆನ್ನೈ, ಡಿ 5: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಗ್ಯದ ಬಗ್ಗೆ ಊಹಾಪೋಹ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ, ಆಸ್ಪತ್ರೆಯ ಸಿಬ್ಬಂದಿಗಳು ಅವರಿಗೆ ಅಂತಿಮ ಗೌರವ ಸೂಚಿಸುತ್ತಿರುವ ಫೋಟೋಗಳು ಸಾಮಾಜಿಕ ತಾಣದಲ್ಲಿ ಬೇಕಾಬಿಟ್ಟಿ ಹರಿದಾಡುತ್ತಿದೆ.

ವೈದ್ಯರು ಮತ್ತು ನರ್ಸುಗಳು ಜಯಾಗೆ ಗೌರವ ಸೂಚಿಸುತ್ತಿರುವ ಈ ಫೋಟೋ, ಫೋಟೋಶಾಪ್ ಮೂಲಕ ಕ್ರಾಪ್ ಮಾಡಿದ್ದು ಮತ್ತು ನಂಬಿಕೆಗೆ ಯೋಗ್ಯವಲ್ಲದ್ದಾಗಿದೆ. (ಜಯಾ ಅನಾರೋಗ್ಯ, ವಾಹಿನಿಗಳ ವಿರುದ್ದ ಗೌಡ ಕಿಡಿ)

TN CM Jayalalithaa fake picture creating noise in Social Media

ಹೃದಯಾಘಾತಕ್ಕೆ ಒಳಗಾದ ನಂತರ ಜಯಲಲಿತಾ ಅವರ ಆರೋಗ್ಯ ಮತ್ತಷ್ಟು ಗಂಭೀರ ಪರಿಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿರುವ ಸುಳ್ಳು ಸುದ್ದಿ, ಫೋಟೋಗಳು ಎಗ್ಗಿಲ್ಲದಂತೆ ಹರಿದಾಡುತ್ತಿವೆ.

ಚೀನಾದಲ್ಲಿ ಟಿಬೆಟ್ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದ ಇಮೇಜನ್ನು ಕ್ರಾಪ್ ಮಾಡಿ ಕಿಡಿಗೇಡಿಗಳು, ಜಯಲಲಿತಾಗೆ ಅಪೋಲೋ ಆಸ್ಪತ್ರೆಯ ಸಿಬ್ಬಂದಿ ಅಂತಿಮ ಗೌರವ ಸೂಚಿಸುತ್ತಿದ್ದಾರೆಂದು ಈ ಫೋಟೋ ಸಮೇತ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದರು. ಅದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸೋಮವಾರ (ಡಿ 5) ಸಂಜೆ ತಮಿಳು ಮಾಧ್ಯಮಗಳು ಜಯಾ ಮೃತಪಟ್ಟಿದ್ದಾರೆಂದು ಪ್ರಕಟಿಸಿತ್ತು. ಇದಾದ ನಂತರ ಈ ಫೋಟೋ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದು ನಂಬಿಕೆಗೆ ದೂರವಾದ ಚಿತ್ರವಾಗಿದೆ.

ಜಯಾ ಆರೋಗ್ಯ ಗಂಭೀರ ಪರಿಸ್ಥಿತಿಯಲ್ಲಿದ್ದರೂ, ಅವರಿಗೆ ಅಪೋಲೋ ಮತ್ತು ಏಮ್ಸ್ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆ ಅತ್ಯಂತ ಸ್ಪಷ್ಟವಾಗಿ ತಿಳಿಸಿದೆ.

English summary
Tamil Nadu Chief Minister Jayalalithaa fake picture creating lot noise in Social Media, don't believe in this picture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X