ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಕ್ಟರ್ ಕೊಟ್ಟ ಚೀಟಿ ಇನ್ಮುಂದೆ ನಿಮಗೂ ಅರ್ಥವಾಗುತ್ತೆ!

By Mahesh
|
Google Oneindia Kannada News

ನವದೆಹಲಿ, ಜೂ.12: 'ಏನ್ಲಾ ಒಳ್ಳೆ ಡಾಕ್ಟರ್ ಬರೆದಾಂಗೆ ಬರೆದಿದ್ದೀಯಾ..' ಎಂದು ಕೆಟ್ಟ ಕೈಬರಹ ಕಂಡು ಜನ ಆಡಿಕೊಳ್ಳುವುದನ್ನು ಕೇಳಿರುತ್ತೀರಿ. ಡಾಕ್ಟರ್ ಕೈಬರಹ ಮೆಡಿಕಲ್ ಶಾಪ್ ನವರಿಗೆ ಮಾತ್ರ ಅರ್ಥವಾಗುತ್ತೆ ಬಿಡಿ ಎನ್ನುವ ಮಾತಿದೆ. ಅದರೆ, ಇನ್ಮುಂದೆ ಡಾಕ್ಟರ್ ನಿಮಗೆ ನೀಡುವ ಚೀಟಿಯಲ್ಲಿ ಏನಿದೆ ಎಂಬುದು ಸುಲಭವಾಗಿ ಅರ್ಥವಾಗಲಿದೆ.

Rx ಎಂಬುದರ ಕೆಳಗೆ ಡಾಕ್ಟರ್ ನೀಡುವ ಪ್ರಿಸ್ಕ್ರಿಪ್ಷನ್ ಅರ್ಥ ಮಾಡಿಕೊಳ್ಳಲು ಕಷ್ಟಪಡಬೇಕಾಗಿಲ್ಲ. ಇನ್ನುಮುಂದೆ ಔಷಧ ಚೀಟಿಯಲ್ಲಿ ಕಡ್ಡಾಯವಾಗಿ ಇಂಗ್ಲಿಷ್ ಕ್ಯಾಪಿಟಲ್ ಅಕ್ಷರಗಳನ್ನು ಬಳಸಬೇಕಿದೆ. ಎಲ್ಲೆಡೆ ಚಾಲ್ತಿಯಲ್ಲಿರುವ ಹೆಸರನ್ನೇ ಬಳಸಬೇಕಾಗುತ್ತದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಶೀಘ್ರದಲ್ಲೇ ಈ ಆದೇಶದ ಗೆಜೆಟ್ ಸೂಚನೆ ಬಿಡುಗಡೆ ಮಾಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಡಾ.ಕೆ.ಕೆ. ಅಗರ್ವಾಲ್ ತಿಳಿಸಿದ್ದಾರೆ.

ತಪ್ಪಾಗಿ ಅರ್ಥೈಸಿಕೊಂಡು ಇನ್ಯಾವುದೋ ಔಷಧ ಕೊಡೋದು, ಅದರಿಂದ ರೋಗಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರೋದು ಇಂಥವೆಲ್ಲ ಬಹಳಷ್ಟು ನಡೆದಿದೆ.

Tired of doctors' bad handwriting? Now prescriptions to be in capital letters!

ಇನ್ನುಮುಂದೆ ಇದಕ್ಕೆಲ್ಲ ಪೂರ್ಣವಿರಾಮ ಬೀಳಲಿದೆ. ಡಾಕ್ಟರ್ ಗಳು ಇನ್ನುಮುಂದೆ ಔಷಧ ಚೀಟಿಯಲ್ಲಿ ಕಡ್ಡಾಯವಾಗಿ ಇಂಗ್ಲಿಷ್ ಕ್ಯಾಪಿಟಲ್ ಅಕ್ಷರಗಳನ್ನು ಬಳಸಬೇಕಿದೆ.

ಅಷ್ಟೇ ಅಲ್ಲ ಔಷಧಗಳ ಸಾರ್ವತ್ರಿಕ ಹೆಸರನ್ನೇ ನಮೂದಿಸಬೇಕಿದೆ. ಕೇಂದ್ರ ಆರೋಗ್ಯ ಸಚಿವಾಲಯ ಶೀಘ್ರದಲ್ಲೇ ಈ ಆದೇಶದ ಗೆಜೆಟ್ ಸೂಚನೆ ಬಿಡುಗಡೆ ಮಾಡಲಿದ್ದು, ತಕ್ಷಣವೇ ದೇಶಾದ್ಯಂತ ಈ ನಿಯಮ ಜಾರಿಗೆ ಬರಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಡಾ.ಕೆ.ಕೆ. ಅಗರ್ವಾಲ್ ತಿಳಿಸಿದ್ದಾರೆ.

ವೈದ್ಯರಿಗೆ ಅದು ಹೇಗೂ ಶೀಘ್ರಲಿಪಿ ಮಾದರಿಯಲ್ಲಿ ಕೈಬರಹ ಆ ರೀತಿ ಬರೆಯಲು ಟ್ಯೂನ್ ಆಗಿರುತ್ತದೆ. ಈಗ ಏಕಾಏಕಿ ಕ್ಯಾಪಿಟಲ್ ಲೆಟರ್ಸ್ ನಲ್ಲಿ ಬರೆಯಬೇಕು ಎಂದರೆ ಸ್ವಲ್ಪ ಕಷ್ಟವಾಗುವುದು ಸಹಜ. ಅದರೆ, ರೋಗಿಗಳು ಹಾಗೂ ಕೆಮಿಸ್ಟ್ ಗಳ ಅನುಕೂಲಕ್ಕೆ ಇದು ಅವಶ್ಯ ಎಂದು ಅಗರ್ವಾಲ್ ಹೇಳಿದ್ದಾರೆ.

2002ರಲ್ಲಿ ಮೆಡಿಕಲ್ ಕೌನ್ಸಿಲ್ ಕಾಯ್ದೆಯಲ್ಲಿ ಈ ಬಗ್ಗೆ ತಿದ್ದುಪಡಿ ತಂದಿದ್ದರೂ, 13 ವರ್ಷಗಳ ನಂತರ ಅನುಷ್ಠಾನಕ್ಕೆ ಬರುತ್ತಿದೆ. ಶೀಘ್ರದಲ್ಲೇ ಈ ಹೊಸ ನಿಯಮದ ಬಗ್ಗೆ ದೇಶಾದ್ಯಂತ ಇರುವ ಎಲ್ಲ ವೈದ್ಯರಿಗೂ ಆದೇಶ ಹಾಗೂ ಮಾಹಿತಿ ತಲುಪಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ನಡ್ಡಾ ಹೇಳಿದ್ದಾರೆ. ಮೀರತ್ ನ ಎರಡು ಬಾರಿ ಸಂಸದ ರಾಜೇಂದ್ರ ಆಗರವಾಲ್ ಅವರು ಕಳೆದ ವರ್ಷ ಈ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಿದ್ದನ್ನು ಇಲ್ಲಿ ಸ್ಮರಿಸಲೇಬೇಕು.

English summary
The days are gone when patients and chemists used to struggle to figure out the names of medicines written on prescriptions prescribed by doctors. “The Union Health Ministry is bringing in a gazette notification to the effect soon after which the rule will be applicable across the country" Indian Medical Association’s Dr. K.K. Aggarwal told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X