ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆಯಲ್ಲಿ ಭಾರೀ ಇಳಿಕೆ? ಶುಭ ಕಾಲ ನಿರೀಕ್ಷಿಸಿ!

ನೋಟು ನಿಷೇಧದ ನಂತರ ನೇರ ಹಾಗೂ ಪರೋಕ್ಷ ತೆರಿಗೆಯಲ್ಲಿ ಭಾರೀ ಇಳಿಕೆ ಅಗಲಿದೆ ಎಂಬ ಇಶಾರೆ ವಿತ್ತ ಸಚಿವ ಅರುಣ್ ಜೇಟ್ಲಿ ಕೊಟ್ಟಿದ್ದರು. ಅದು ನಿಜವಾಗುವ ಎಲ್ಲ ಲಕ್ಷಣಗಳು ಗೋಚರವಾಗತೊಡಗಿವೆ. ಮೂಲಗಳು ಸಹ ಅದನ್ನು ಹೇಳುತ್ತಿವೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 19 : ಆದಾಯ ತೆರಿಗೆಯಲ್ಲಿ ಗಣನೀಯ ಇಳಿಕೆ ಅಗಲಿದೆಯಾ? ಮೂಲಗಳ ಪ್ರಕಾರ ಹೌದು. ಮುಂಬರುವ ಆರ್ಥಿಕ ವರ್ಷದಲ್ಲಿ ತೆರಿಗೆ ಹೊರೆ ಇಲ್ಲದೆ ಆರಾಮವಾಗಿ ಇರಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಆರ್ಥಿಕ ಸಚಿವಾಲಯಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಪ್ರಕಾರ ನಾಲ್ಕು ಲಕ್ಷ ರುಪಾಯಿವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಕಟ್ಟುವ ಅಗತ್ಯ ಇರುವುದಿಲ್ಲವಂತೆ.

ಇನ್ನು ನಾಲ್ಕು ಲಕ್ಷದಿಂದ ಹತ್ತು ಲಕ್ಷದವರೆಗಿನ ಆದಾಯಕ್ಕೆ ಶೇ 10ರಷ್ಟು ತೆರಿಗೆ ವಿಧಿಸುವ ಸಾಧ್ಯತೆಗಳಿವೆ. ಇನ್ನು ಹತ್ತರಿಂದ ಹದಿನೈದು ಲಕ್ಷದವರೆಗಿನ ಆದಾಯಕ್ಕೇ ಶೇ 15ರಷ್ಟು ಹಾಗೂ ಹದಿನೈದು ಲಕ್ಷದಿಂದ ಇಪ್ಪತ್ತು ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು ತೆರಿಗೆ, ಹಾಗೂ ಇಪ್ಪತ್ತು ಲಕ್ಷಕ್ಕೆ ಮೇಲ್ಪಟ್ಟ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸುವ ಸಾಧ್ಯತೆಯಿದೆ.[ತೆರಿಗೆ ಹೊರೆ ಕಡಿಮೆ ಆಗುತ್ತೆ: ವಿತ್ತ ಸಚಿವ ಅರುಣ್ ಜೇಟ್ಲಿ ಇಶಾರೆ]

ಸುದ್ದಿ ಆಧಾರ ರಹಿತ : ಮಾಧ್ಯಮಗಳಲ್ಲಿ ಬಂದಿರುವಂತೆ ಆದಾಯ ತೆರಿಗೆ ಸ್ಲಾಬ್ ಗಳಲ್ಲಿ ಬದಲಾವಣೆ ಮಾಡುತ್ತಿರುವ ಸುದ್ದಿಯನ್ನು ಕೇಂದ್ರ ಸರಕಾರದ ವಕ್ತಾರ ಫ್ರಾಂಕ್ ನರೋನ್ಹಾ ಅವರು 'ಆಧಾರ ರಹಿತ' ಎಂದು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಹೀಗಾಗಿ ಫೆಬ್ರವರಿ 1ರಂದು ಮಂಡಿಸಲಾಗುತ್ತಿರುವ ಕೇಂದ್ರ ಬಜೆಟ್ ವರೆಗೆ ಕಾಯಲೇಬೇಕು.

This is how your new income tax slabs may look after Budget

ಪ್ರಸ್ತುತ ಆದಾಯ ತೆರಿಗೆ ಸ್ಲಾಬ್ : ಈ ವರ್ಷ 2.5 ಲಕ್ಷದವರೆಗೆ ತೆರಿಗೆ ಇರಲಿಲ್ಲ. ಆ ನಂತರ 2.5ಯಿಂದ 5 ಲಕ್ಷದವರೆಗೆ ಶೇ.10 ತೆರಿಗೆ, 5ರಿಂದ 10 ಲಕ್ಷದವರೆಗೆ ಶೇ. 20 ಹಾಗೂ 10 ಲಕ್ಷದ ಮೇಲಿನ ಆದಾಯಕ್ಕೆ ಶೇ 30ರವರೆಗೆ ತೆರಿಗೆ ಇತ್ತು. ಅಪನಗದೀಕರಣದ ನಂತರ ತೆರಿಗೆಯಲ್ಲಿ ಮಹತ್ತರ ಬದಲಾವಣೆಗಳಾಗುವ ನಿರೀಕ್ಷೆಯಿತ್ತು. ಅದೀಗ ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಊಹಾಪೋಹ ನಿಜವಾಗಲಿ ಎಂದು ಹಾರೈಸಿ.

English summary
Your personal income tax might get reduced if Ministry of Finance acts on a proposal, Sources told that the finance ministry has proposed that no tax will be liable up to the income worth Rs 4 lakh. Currently, no tax is charged up to income of Rs 2.5 lakh per year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X