ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಲ ಹೊಡೆತದಿಂದ ತಪ್ಪಿಸಿಕೊಳ್ಳುವುದು ಹೇಗೆ?

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 04 : ಒಂದು ಕಡೆ ಬರಿದಾಗಿರುವ ನೀರಿನ ಸೆಲೆಗಳು, ಮತ್ತೊಂದೆಡೆ ಕೈಕೊಟ್ಟಿರುವ ಮಳೆ, ಮಗದೊಂದೆಡೆ ಕಣ್ಮರೆಯಾಗುತ್ತಿರುವ ಹಸಿರು ಹೊದಿಕೆಯಿಂದಾಗಿ ಕರ್ನಾಟಕವೂ ಸೇರಿದಂತೆ ಹಲವಾರು ರಾಜ್ಯಗಳು ಬಿಸಿಲಿನ ಹೊಡೆತಕ್ಕೆ ಬಳಲಿ ಬೆಂಡಾಗಿವೆ.

ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮುಂತಾದ ರಾಜ್ಯಗಳು ರಣರಣ ಬಿಸಿಲಿಗೆ ಒಣಗಿಹೋಗಿವೆ. ಕಂಡುಕೇಳರಿಯದ ಬಿಸಿಲ ತಾಪದಿಂದಾಗಿ ಈ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರಿ ಸಾಗುತ್ತಿದೆ. ಕೂಡಲೆ ಮಳೆ ಬರದಿದ್ದರೆ ಭಾರೀ ಕಷ್ಟವಿದೆ ಎಂದು ಜನರು ಹಲುಬುವಂತಾಗಿದೆ.[ಮಂಗಳೂರಿನಲ್ಲಿ ತೆಂಗಿನ ಮರದೆತ್ತರಕ್ಕೇರಿದ ಎಳನೀರು ಬೆಲೆ!]

ಬೆಂಗಳೂರು ನಗರ ಕೂಡ ಇದಕ್ಕೆ ಹೊರತಲ್ಲ. ಗಗನಚುಂಬಿ ಕಟ್ಟಡಗಳು, ಲೆಕ್ಕಕ್ಕಿಲ್ಲದಷ್ಟು ಮೇಲು ಸೇತುವೆಗಳಿಂದಾಗಿ 'ಗಾರ್ಡನ್ ಸಿಟಿ'ಯಲ್ಲಿ ಹಸಿರು ಮೊದಲಿನಂತಿಲ್ಲ. ಬಿಸಿಲ ಝಳಕ್ಕೆ ಜನರು ಬಸವಳಿಯುತ್ತಿದ್ದಾರೆ. ಹೊರಗೆ ಕಾಲಿಟ್ಟರೆ ಸಾಕು ಬಿಸಿಹವೆ ಮೈಗೆ ರಾಚುತ್ತದೆ.

ಸೋಮವಾರ ಕರ್ನಾಟಕದ ಕಲಬುರಗಿಯಲ್ಲಿ ಗರಿಷ್ಠ 42.4 ಡಿಗ್ರಿ ತಾಪಮಾನ ದಾಖಲಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ. ಈಗಾಗಲೆ ಇಲ್ಲಿ ಪೊಲೀಸರಿಗೆ ತಂಪು ಕನ್ನಡಕ, ಛತ್ರಿ, ನೀರಿನ ಬಾಟಲಿಗಳನ್ನು ನೀಡಲಾಗುತ್ತಿದೆ. ಬಳ್ಳಾರಿ, ಬಾಗಲಕೋಟೆ, ರಾಯಚೂರು, ವಿಜಯಪುರ ಜಿಲ್ಲೆಗಳು ನಿಗಿನಿಗಿ ಉರಿಯುತ್ತಿವೆ.[ಬಿಸಿಲ ಬೇಗೆಯ ನಡುವೆ ಮಂಗಳೂರಲ್ಲಿ ಶುರುವಾಯಿತೇ ನೀರಿನ ದಂಧೆ ?]

ಈ ಹವಾಮಾನ ವೈಪರೀತ್ಯದಿಂದಾಗಿ ಹಲವಾರು ಜನರು ಸನ್ ಸ್ಟ್ರೋಕ್ ಗೆ ಬಲಿಯಾಗುತ್ತಿದ್ದು, ರಾಜ್ಯ ಮತ್ತು ಕೇಂದ್ರದ ಹವಾಮಾನ ಇಲಾಖೆಗಳು ಎಚ್ಚರದಿಂದಿರುವಂತೆ ಆಯಾ ರಾಜ್ಯಗಳಿಗೆ ಮತ್ತು ಜನರಿಗೆ ಸೂಚನೆ ನೀಡಿವೆ.

ಸನ್ ಸ್ಟ್ರೋಕ್ ಅಂದರೇನು, ಅದರ ಸೂಚನೆಗಳೇನು, ಇದರ ಹೊಡೆತಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಕೆಲ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಸನ್ ಸ್ಟ್ರೋಕ್ ಹೊಡೆದ ನಂತರ ಚಿಕಿತ್ಸಾ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಿಂತ ಅದು ಬಾರದಂತೆ ತಡೆಯುವುದು ಹಿತ.[ಬರ ಬಂದು ಬಾಗಿಲಲಿ ನಿಂತಿಹುದು ಬದುಕು ಹೇಗೆ ಪ್ರಭುವೆ?]

ಸನ್ ಸ್ಟ್ರೋಕ್ ಗುರುತಿಸುವುದು ಹೇಗೆ?

ಸನ್ ಸ್ಟ್ರೋಕ್ ಗುರುತಿಸುವುದು ಹೇಗೆ?

ಅಸಾಧ್ಯ ತಲೆನೋವು, ಏರುತ್ತಿರುವ ಎದೆಬಡಿತ, ಒಣಗಿದ ಬಾಯಿ, ಅಗಾಧವಾದ ನಿರ್ಜಲೀಕರಣ, ಅರೆಪ್ರಜ್ಞಾವಸ್ಥೆಗೆ ಹೋಗುವುದು ಅಥವಾ ಪ್ರಜ್ಞೆ ಕಳೆದುಕೊಳ್ಳುವುದು... ಇವು ಇದರ ಲಕ್ಷಣಗಳು. ಸರಿಯಾದ ಸಮಯದಲ್ಲಿ ಇದನ್ನು ಗುರುತಿಸಿ ಚಿಕಿತ್ಸೆ ಪಡೆದರೆ ಸಾವಿನಿಂದ ಪಾರಾಗಬಹುದು. ಬಿಸಿಲ ಹೊಡೆತಕ್ಕೆ ಯಾರಾದರೂ ತುತ್ತಾದರೆ ಅವರಿಗೆ ಸಹಾಯವನ್ನೂ ಮಾಡಬಹುದು.

ಸನ್ ಸ್ಟ್ರೋಕ್ ಗೆ ತುತ್ತಾದಾಗ ಏನು ಮಾಡಬೇಕು?

ಸನ್ ಸ್ಟ್ರೋಕ್ ಗೆ ತುತ್ತಾದಾಗ ಏನು ಮಾಡಬೇಕು?

ಮೇಲಿನ ಗುಣಲಕ್ಷಣಗಳು ಕಂಡುಬಂದರೆ ಕೂಡಲೆ ಮರದ ನೆರಳಿನಲ್ಲಿ ವಿಶ್ರಮಿಸಬೇಕು. ಅಂಥವರು ಕಂಡುಬಂದರೆ ಕೂಡಲೆ ಅವರನ್ನು ನೆರಳಿರುವ ಜಾಗಕ್ಕೆ ಕರೆದೊಯ್ಯಬೇಕು. ಅವರಿಗೆ ಒದ್ದೆಬಟ್ಟೆಯಿಂದ ಒರೆಸಿ ದೇಹದ ತಾಪಮಾನವನ್ನು ಕಡಿಮೆ ಮಾಡಲು ಯತ್ನಿಸಬೇಕು.

ಎಂಥ ಪಾನೀಯ ಸೇವಿಸಬೇಕು?

ಎಂಥ ಪಾನೀಯ ಸೇವಿಸಬೇಕು?

ಉಪ್ಪು ಸೇರಿಸಿದ ಮಜ್ಜಿಗೆ ಅಥವಾ ಎಳನೀರು ಅಥವಾ ಗ್ಲುಕೋಸ್ ನೀರು ಅಥವಾ ಓಆರ್ಎಸ್ ನೀರನ್ನು ಕುಡಿಯಲು ನೀಡಬೇಕು. ಎಲ್ಲ ಸರಿಹೋಗುತ್ತದೆಂದು ನಿರ್ಧಾರಕ್ಕೆ ಬಾರದೆ ಸನ್ ಸ್ಟ್ರೋಕ್ ಗೆ ಒಳಗಾದವರನ್ನು ಕೂಡಲೆ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಬೇಕು.

ಬಿಸಿಲ ಹೊಡೆತದಿಂದ ಪಾರಾಗುವುದು ಹೇಗೆ?

ಬಿಸಿಲ ಹೊಡೆತದಿಂದ ಪಾರಾಗುವುದು ಹೇಗೆ?

ಹೊರಗಡೆ ಬಿಸಿಲಿನ ತಾಪಮಾನ ತಡಕೊಳ್ಳಲಾರದಷ್ಟು ಹೆಚ್ಚಾದಾಗ ಅನಿವಾರ್ಯತೆ ಇಲ್ಲದಿದ್ದರೆ ಹೊರಗಡೆ ಕಾಲಿಡದೆ ಮನೆಯಲ್ಲಿಯೇ ಇರುವುದು ಹಿತ. ಒಂದು ವೇಳೆ ಹೊರಗಡೆ ಹೋಗುವಂಥ ಸಂದರ್ಭ ಬಂದರೆ ಛತ್ರಿ, ಟೋಪಿ ಹಾಕಿಕೊಂಡು ಹೋಗಬೇಕು. ಅಲ್ಲದೆ ಸ್ಕಾರ್ಫ್ ನಿಂದ ತಲೆಯನ್ನು ರಕ್ಷಿಸಿಕೊಳ್ಳಬೇಕು.

ಎಂಥ ಉಡುಪು ಧರಿಸುವುದು ವಿಹಿತ

ಎಂಥ ಉಡುಪು ಧರಿಸುವುದು ವಿಹಿತ

ತಾಪಮಾನವನ್ನು ಹೀರಿಕೊಳ್ಳದ ಹಾಗೆ ಬಿಳಿ ಬಣ್ಣದ ಖಾದಿ ಬಟ್ಟೆಯನ್ನು ಧರಿಸುವುದು ವಿಹಿತ. ಹೋದಲ್ಲೆಲ್ಲ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿ ಆಗಾಗ ನೀರು ಕುಡಿಯುತ್ತಿರಬೇಕು. ತಂಪು ಪಾನೀಯಗಳನ್ನು ಕುಡಿಯದೆ ನೀರು, ಮಜ್ಜಿಗೆ, ಎಳನೀರಿನಂಥ ಪಾನೀಯಗಳನ್ನೇ ಕುಡಿಬೇಕು. ಏಕೆಂದರೆ, ಇತರ ತಂಪು ಪಾನೀಯ ಕುಡಿಯುವವರ ಆರೋಗ್ಯ ಬೇಗನೆ ಹದಗೆಡುತ್ತದೆ.

English summary
Mercury levels are rising hitting new records in most parts of the country. Andhra Pradesh, Telangana, Karnataka, Tamil Nadu and Maharashtra are seeing temperatures touch never before numbers and the situation is likely to continue or worsen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X