ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

200ಕೋಟಿಯ ಪೆಟ್ರೋಲ್ ಹಗರಣ ಸ್ಪೋಟಿಸಿದ ಯುಪಿ ಪೊಲೀಸ್

ಒಂದು ಅಂದಾಜಿನ ಪ್ರಕಾರ ಚಿಪ್ ಅಳವಡಿಸಿ ಗ್ರಾಹಕರಿಗೆ ಕಡಿಮೆ ಪೆಟ್ರೋಲ್ ನೀಡಿ ತಿಂಗಳಿಗೆ ಸುಮಾರು 200 ಕೋಟಿ ಆದಾಯವನ್ನು ಉತ್ತರ ಪ್ರದೇಶದ ಪೆಟ್ರೋಲ್ ಪಂಪ್ ಮಾಲಿಕರು ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಲಕ್ನೋ, ಏಪ್ರಿಲ್ 29: ಉತ್ತರ ಪ್ರದೇಶ ಪೊಲೀಸರು 200 ಕೋಟಿ ರೂ. ಪೆಟ್ರೋಲ್ ಪಂಪ್ ಹಗರಣವನ್ನು ಬಯಲಿಗೆಳೆದಿದ್ದಾರೆ.

ಪೆಟ್ರೋಲ್ ಪಂಪ್ ಮಾಲಿಕರು ಪಂಪ್ ಗಳಿಗೆ ಚಿಪ್ ಅಳವಡಿಸಿ ಕಡಿಮೆ ಪೆಟ್ರೋಲ್ ನೀಡಿ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದುದು ತನಿಖೆ ವೇಳೆ ಬಯಲಾಗಿದೆ. ಅಂದಾಜಿನ ಪ್ರಕಾರ ಹೀಗೆ ಚಿಪ್ ಅಳವಡಿಸಿ ತಿಂಗಳಿಗೆ ಸುಮಾರು 200 ಕೋಟಿ ಆದಾಯವನ್ನು ಪೆಟ್ರೋಲ್ ಪಂಪ್ ಮಾಲಿಕರು ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.[ಯೋಗಿ ಹೇರ್ ಸ್ಟೈಲ್ ಅನುಕರಿಸಿ: ವಿದ್ಯಾರ್ಥಿಗಳಿಗೆ ಮೀರತ್ ಶಾಲೆಯೊಂದರ ಹುಕುಂ]

ಗುರುವಾರ ಯುಪಿ ಪೊಲೀಸರ ವಿಶೇಷ ಕಾರ್ಯಪಡೆ 7 ಪೆಟ್ರೋಲ್ ಪಂಪ್ ಗಳ ಮೇಲೆ ರೈಡ್ ಮಾಡಿದ್ದು ಈ ಸಂದರ್ಭ ಈ ಹಗರಣ ಬೆಳಕಿಗೆ ಬಂದಿದೆ. ಶೇಕಡಾ 80 ರಷ್ಟು ಪೆಟ್ರೋಲ್ ಪಂಪ್ ಗಳು ಈ ರೀತಿ ಗ್ರಾಹಕರಿಗೆ ವಂಚನೆ ನಡೆಸುತ್ತಿವೆ ಎನ್ನಲಾಗಿದೆ.

The Rs 200 crore petrol pump scam in Uttar Pradesh explained

ಸದ್ಯ ತನಿಖೆ ಪ್ರಗತಿಯಲ್ಲಿದ್ದು ಹಗರಣಕ್ಕೆ ಸಂಬಂಧಿಸಿದಂತೆ 23 ಜನರನ್ನು ಬಂಧಿಸಲಾಗಿದೆ. ಸದ್ಯದಲ್ಲೇ ಇನ್ನೂ ಹೆಚ್ಚಿನ ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ರೀತಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯದಲ್ಲೇ ಹೆಚ್ಚಿನ ದಾಳಿಗಳನ್ನು ನಡೆಸಲಾಗುವುದು ಎಂದು ಯುಪಿ ಪೊಲೀಸರು ಹೇಳಿದ್ದಾರೆ.

ಚಿಪ್ ಒಂದನ್ನು ಪೆಟ್ರೋಲ್ ಪಂಪಿಗೆ ಅಳವಡಿಸುವುದರಿಂದ ಮೀಟರ್ ನಲ್ಲಿ ಸರಿಯಾಗಿ ಲೆಕ್ಕ ತೋರಿಸುತ್ತದೆ. ಆದರೆ ಗ್ರಾಹಕರಿಗೆ ಪೆಟ್ರೋಲ್ ಮಾತ್ರ ಕಡಿಮೆ ಬೀಳುತ್ತದೆ.[ಮೋದಿ ಸುಮ್ಮನಿದ್ದರೂ ಮಗನ ಕೊಂದ ಉಗ್ರರನ್ನು ನಾನು ಸುಮ್ಮನೆ ಬಿಡುವುದಿಲ್ಲ]

ಹಲವು ಪೆಟ್ರೋಲ್ ಪಂಪ್ ಗಳಿಗೆ ಈ ಚಿಪ್ಗಳನ್ನು ಅಳವಡಿಸಿದ ಎಲೆಕ್ಟ್ರೀಷಿಯನ್ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಈ ಹಗರಣ ಬಾಯ್ತೆರೆದುಕೊಂಡಿದೆ.

ಈ ಚಿಪ್ ಅಳವಡಿಸುವುದರಿಂದ ಒಂದು ಲೀಟರ್ ಜಾಗದಲ್ಲಿ ಕೇವಲ 940ಎಂಎಲ್ ಪೆಟ್ರೋಲ್ ಮಾತ್ರ ವಾಹನಗಳ ಟ್ಯಾಂಕ್ ಸೇರುತ್ತದೆ.

ಕೇವಲ 40,000 ರೂಪಾಯಿ ಬೆಲೆಗೆ ದೆಹಲಿ ಮತ್ತು ಕಾನ್ಪುರದಲ್ಲಿ ಈ ಚಿಪ್ ದೊರೆಯುತ್ತದೆ. ಇದರ ಜತೆಗೇ ಇದನ್ನು ಹೇಗೆ ಅಳವಡಿಕೆ ಮಾಡಬೇಕು ಎಂಬ ಮಾಹಿತಿ ನೀಡುವ ಮ್ಯಾನುವಲ್ ಕೂಡಾ ನೀಡಲಾಗುತ್ತದೆ. ಇದನ್ನು ಅಳವಡಿಸಲು ಎಲೆಕ್ಟ್ರೀಷಿಯನ್ ಬೇಕು. 5,000 ದಿಂದ 10,000 ರೂಪಾಯಿ ನೀಡಿದರೆ ಅವರು ಇದನ್ನು ಇನ್ ಸ್ಟಾಲ್ ಮಾಡಿ ಕೊಡುತ್ತಾರೆ.

100 ಮೀಟರ್ ದೂರದಿಂದಲೂ ನಿಂತು ಈ ಚಿಪ್ ನ್ನು ರಿಮೋಟ್ ಮೂಲಕ ಕಂಟ್ರೋಲ್ ಮಾಡಬಹುದಾಗಿದೆ. ಇದನ್ನು ಅಳವಡಿಸಿಕೊಂಡಲ್ಲಿ ಓರ್ವ ಪೆಟ್ರೋಲ್ ಪಂಪ್ ಮಾಲಿಕ ತಿಂಗಳಿಗೆ 15 ಲಕ್ಷ ದುಡಿಯಬಹುದು. ಗ್ರಾಮೀಣ ಭಾಗದಲ್ಲೂ ತಿಂಗಳಿಗೆ 5-6 ಲಕ್ಷ ಹೆಚ್ಚುವರಿ ಆದಾಯ ಪಡೆಯಬಹುದಾಗಿದೆ.

English summary
The Uttar Pradesh police busted Rs 200 crore petrol pump scam on Friday. In the scam that was busted in Lucknow, it was found that petrol pump owners had attached a chip to the pump which dispenses less fuel. It was found that petrol pump owners earned Rs 200 crore a month as a result of this technique.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X