ಅರವಿಂದ್ ಕೇಜ್ರಿವಾಲ್ ಅತ್ಯಾಚಾರ ಆರೋಪ ಸುದ್ದಿಯ ಪತ್ರಿಕೆ ತುಣುಕು ನಕಲಿ

Written by: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 24: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿ ಎಂದು ಬಿಂಬಿಸಲಾದ ನಕಲಿ ಅತ್ಯಾಚಾರ ಪ್ರಕರಣ ಸುದ್ದಿಯೊಂದು ಮತ್ತೆ ಚಲಾವಣೆಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಚಾಟ್ ಗುಂಪುಗಳ ಮಧ್ಯೆ ದಿನಪತ್ರಿಕೆಯೊಂದರ ತುಣುಕು ಹರಿದಾಡುತ್ತಿದೆ.

ಹತ್ತೊಂಬತ್ತು ವರ್ಷದ ಐಐಟಿ ಖರಗ್ ಪುರ್ ನ ವಿದ್ಯಾರ್ಥಿ ಅರವಿಂದ್ ಕೇಜ್ರಿವಾಲ್ ನನ್ನು ಅತ್ಯಾಚಾರ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ಇರುವ ಪತ್ರಿಕೆಯೊಂದರ ತುಣುಕನ್ನು ಹಬ್ಬಿಸುತ್ತಿದ್ದಾರೆ. ಅದು ದಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಜೂನ್ 18, 1987ರಲ್ಲಿ ಪ್ರಕಟವಾಗಿದ್ದಾಗಿ ಆ ನಕಲಿ ಸುದ್ದಿ ಎಲ್ಲ ಕಡೆ ಕಂಡುಬರುತ್ತಿದೆ.[ಮೋದಿ ವಿರುದ್ಧ ಸಾಕ್ಷ್ಯವಿದ್ದರೆ ರಾಹುಲ್ ಬಯಲು ಮಾಡಿ: ಕೇಜ್ರಿವಾಲ್]

Arvind Kejriwal

"ಪೊಲೀಸರು ಹೇಳಿದ ಪ್ರಕಾರ, ಹತ್ತೊಂಬತ್ತು ವರ್ಷದ ವಿದ್ಯಾರ್ಥಿ ಅರವಿಂದ್ ಕೇಜ್ರಿವಾಲ್ ಮತ್ತಿತರ ಸ್ನೇಹಿತರು ಶುಕ್ರವಾರ ರಾತ್ರಿ ಪಾರ್ಟಿಗಾಗಿ ತೆರಳಿದವರು ಹಾಸ್ಟೆಲ್ ಗೆ ಹಿಂತಿರುಗಲಿಲ್ಲ. ಶನಿವಾರ ಅಪರಾತ್ರಿಯಲ್ಲಿ ಅರವಿಂದ ಸ್ನೇಹಿತರು ವಾಪಸ್ ಬಂದರು. ಆದರೆ ಆತ ಭಾನುವಾರ ರಾತ್ರಿ ಹಿಂತಿರುಗಿದರು. ಈ ಮಧ್ಯೆ ಯುವತಿಯೊಬ್ಬಳು ಗೋಪಾಲ್ ನಗರ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.

news paper

ಅತ್ಯಾಚಾರ ಸಂತ್ರಸ್ತೆಯು ಆರೋಪಿ ವಿದ್ಯಾರ್ಥಿಯ ಗುರುತಿನ ಚೀಟಿಯನ್ನು ಪೊಲೀಸರಿಗೆ ನೀಡಿದ್ದಾಳೆ. ಆ ಮೂಲಕ ಐಐಟಿ ಖರಗ್ ಪುರ್ ನ ಕ್ಯಾಂಪಸ್ ನಲ್ಲಿ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ ಎಂಬುದು ಸುದ್ದಿಯ ಹೂರಣ. ಈ ಸುದ್ದಿಯ ಸಾಚಾತನದ ಬಗ್ಗೆ ವಿಚಾರಿಸಲು ಟೆಲಿಗ್ರಾಫ್ ಪತ್ರಿಕೆಯ ನೌಕರರು ಸೇರಿ ಹಲವರನ್ನು ಒನ್ಇಂಡಿಯಾ ಪ್ರಶ್ನಿಸಿತು.[ಕೇಜ್ರಿವಾಲ್ ಗೆ ಹಿನ್ನಡೆ: ಜೇಟ್ಲಿ ಮೊಕದ್ದಮೆ ತಡೆಗೆ ಸುಪ್ರೀಂ ನಕಾರ]

ಎಲ್ಲರೂ ಸ್ಪಷ್ಟಪಡಿಸಿದ್ದೆಂದರೆ, ಇದು ಸುಳ್ಳು ಸುದ್ದಿ. ಈ ತುಣುಕನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಹಿರಿಯ ಪತ್ರಕರ್ತರೊಬ್ಬರು ಹೇಳುವಂತೆ, ಈ ರೀತಿ ಸುದ್ದಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಚಲಾವಣೆಗೆ ಬರುತ್ತದೆ. ಅವುಗಳ ಸಾಚಾತನ ಜನರಿಗೆ ತಿಳಿಸುವುದು ನಮ್ಮ ಜವಾಬ್ದಾರಿ.

English summary
The Arving Kejriwal fake rape story is doing the rounds once again. Several persons on the social media and chat groups have once again started circulating a newspaper clip in which it is stated that during his IIT Kharagpur days he was accused of rape.
Please Wait while comments are loading...