ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇನು ಗಡ್ಕರಿಯವರೇ, ಗೋ ರಕ್ಷಕರ ಬಗ್ಗೆ ಹಿಂಗೆ ಹೇಳಿಬಿಟ್ರಿ?!!

ಬಿಜೆಪಿಯು ಗೋ ಮಾಂಸ ನಿಷೇಧದ ಕುರಿತಾದ ನಿಲುವು ಹೊಂದಿದೆ. ಹಾಗೆಂದ ಮಾತ್ರಕ್ಕೆ ಗೋ ರಕ್ಷಣೆಗೆ ಸ್ವಯಂ ಸೇವಕರನ್ನು ಬಿಟ್ಟಿದೆ ಎಂದರ್ಥವಲ್ಲ ಎಂದೂ ಗಡ್ಕರಿ ಹೇಳಿರುವುದು ಗೋ ಸಂರಕ್ಷರು ಒಮ್ಮೆ ತಮ್ಮನ್ನು ತಾವು ಪರಾಮರ್ಶಿಸಿಕೊಳ್ಳುವಂತಾಗಿದೆ.

|
Google Oneindia Kannada News

ನವದೆಹಲಿ, ಮೇ 26: ''ಗೋ ಸಂರಕ್ಷಣೆ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳಿಯುವವರು ಬಿಜೆಪಿಯವರೂ ಅಲ್ಲ, ಆರೆಸ್ಸೆಸ್ ನವರಲ್ಲ ಅಥವಾ ಸಂಘ ಪರಿವಾರದವರೂ ಅಲ್ಲ'' - ಗೋ ಸಂರಕ್ಷಣೆ ಅಭಿಯಾನದ ಸ್ವಯಂ ಸೇವಕರ ಬಗ್ಗೆ ಇಂಥದ್ದೊಂದು ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಸಾಮಾನ್ಯವಾಗಿ, ದೇಶದ ಯಾವುದೇ ಭಾಗದಲ್ಲಿ ಗೋ ಸಂರಕ್ಷಣೆ ಹೆಸರಿನಲ್ಲಿ ಗಲಾಟೆ, ಜಗಳ, ಹಲ್ಲೆಗಳು ನಡೆದರೆ ಅದಕ್ಕೆ ಪರೋಕ್ಷವಾಗಿ ಬಿಜೆಪಿ ಹಾಗೂ ಸಂಘ ಪರಿವಾರದವರ ಕುಮ್ಮಕ್ಕಿತ್ತು ಎಂದು ಜನರು ಭಾವಿಸುತ್ತಿದ್ದರು. ಆದರೆ, ನಿತಿನ್ ಗಡ್ಕರಿಯವರ ಈ ಹೇಳಿಕೆ ಇಂಥ ನಂಬಿಕೆಗಳನ್ನು ತಲೆಕೆಳಗು ಮಾಡುವಂತಾಗಿದೆ.

The BJP, VHP, Sangh and our government do not support such element: Nitin Gadkari

ಗೋ ರಕ್ಷಕರ ಬಗ್ಗೆ ಮತ್ತೊಂದು ಮಾತು ಹೇಳಿರುವ ನಿತಿನ್, ''ಬಿಜೆಪಿಯು ಗೋ ಮಾಂಸ ನಿಷೇಧದ ಕುರಿತಾದ ನಿಲುವು ಹೊಂದಿದೆ. ಹಾಗೆಂದ ಮಾತ್ರಕ್ಕೆ ಗೋ ರಕ್ಷಣೆಗೆ ಸ್ವಯಂ ಸೇವಕರನ್ನು ಬಿಟ್ಟಿದೆ ಎಂದರ್ಥವಲ್ಲ'' ಎಂದಿದ್ದಾರೆ.

ಇದು ಈವರೆಗೆ ಗೋವುಗಳ ಸಾಗಾಣಿಗೆ ವಾಹನಗಳ ಮೇಲೆ, ಅಕ್ರಮ ಗೋ ಕಸಾಯಿಖಾನೆಗಳ ಮೇಲೆ ದಾಳಿ ನಡೆಸುತ್ತಿದ್ದ ಸ್ವಯಂ ಗೋ ರಕ್ಷಕರು ಮುಂದೆ ಇಂಥ ಕೆಲಸಗಳಿಗೆ ಅಣಿಯಾಗುವ ಮುಂಚೆ ಹತ್ತು ಸಾರಿ ಯೋಚಿಸುವಂತೆ ಮಾಡಿದೆ.

ಅದೇನೋ ಸರಿ. ಆದರೆ, ನಿತಿನ್ ಅವರ ಈ ಹೇಳಿಕೆ 'ಜಾಣತನ'ದಿಂದ ಕೂಡಿದೆ ಎಂಬುದಲ್ಲಿ ಎರಡು ಮಾತಿಲ್ಲ ಎಂದೆನಿಸದಿರದು.

English summary
Cow vigilantism in the name of protection must be condemned and they are not our people, Union Minister, Nitin Gadkari said. The BJP and the Sangh parivaar support the ban on cow slaughter, but not vigilantism in the name of protection, he also said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X