ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ತಾಜ್ ಮಹಲ್ ಪ್ರೇಮಸೌಧವಲ್ಲ, ಪುರಾತನ ದೇಗುಲ"

By Mahesh
|
Google Oneindia Kannada News

ಲಕ್ನೋ, ಡಿ..8: "ತಾಜ್ ಮಹಲ್ ಪ್ರೇಮಸೌಧವಲ್ಲ, ಪುರಾತನ ದೇಗುಲ" ಈ ಹಿಂದೆ ಶಿವನ ದೇಗುಲವಾಗಿತ್ತು. ನಂತರ ಮೊಘಲರ ಸಾಮ್ರಾಜ್ಯ ಬೆಳೆದಂತೆ ಇಲ್ಲಿನ ಪ್ರದೇಶ ಅವರ ಕೈಸೇರಿತು... ಎಂಬ ಒಕ್ಕಣೆಯಿರುವ ಇ ಮೇಲ್ ನಿಮಗೂ ಬಂದಿರಬಹುದು. ಈಗ ಇದೇ ಮಾತನ್ನು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಲಕ್ಷ್ಮಿಕಾಂತ್ ಹೇಳಿದ್ದಾರೆ.

ತಾಜ್ ಮಹಲನ್ನು ವಕ್ಫ್ ಆಸ್ತಿ ಎಂದು ಘೋಷಿಸಿ ಎಂದು ಇತ್ತೀಚೆಗೆ ಉತ್ತರ ಪ್ರದೇಶ ಸಚಿವ ಮಹಮ್ಮದ್ ಅಜಂ ಖಾನ್ ಹೇಳಿಕೆ ನೀಡಿದ್ದರು> ಇದಾದ ಬಳಿಕ ಈಗ ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಲಕ್ಷ್ಮಿಕಾಂತ್ ಬಾಜಪೇಯಿ ಅವರು ತಾಜ್‌ಮಹಲ್ ಪುರಾತನ ದೇವಾಲಯವೊಂದರ ಭಾಗ ಎಂದು ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಉತ್ತರಪ್ರದೇಶದ ಬಹ್‌ರಾಯಿಚ್‌ನಲ್ಲಿ ಮಾತನಾಡಿದ ಬಾಜ್‌ಪೈ, ಮೊಘಲ್ ಚಕ್ರವರ್ತಿ ಶಾಹ್‌ಜಹಾನ್ ಅವರು ರಾಜಾ ರಾಯ್ ಸಿಂಗ್ ಅವರಿಂದ ತೇಜೋ ಮಹಾಲಯ ದೇವಸ್ಥಾನದ ಭಾಗವೊಂದನ್ನು ಖರೀದಿ ಮಾಡಿದ್ದರು. ಇದಕ್ಕೆ ದೃಢೀಕರಿಸಲು ಸಂಬಂಧಪಟ್ಟ ದಾಖಲೆಗಳು ಈಗಲೂ ಇವೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. [ತಾಜ್ ಮಹಲ್ ವಕ್ಫ್ ವಶಕ್ಕೆ ನೀಡುವುದು ಸರಿಯೇ?]

Taj Mahal part of ancient temple, claims UP BJP chief Laxmi Kant Bajpai

ಅಜಂ ಖಾನ್ ಅವರು ತಾಜ್ ಮಹಲ್ ಮೇಲೆ ಕಣ್ಣು ಹಾಕಿದ್ದಾರೆ. ತಾಜ್‌ಮಹಲ್‌ನಲ್ಲಿ ಐದು ಬಾರಿ ನಮಾಜು ಮಾಡಬೇಕೆಂಬ ಅಜಂ ಖಾನ್‌ರ ಕನಸು ಯಾವತ್ತೂ ನನಸಾಗಲ್ಲ ಎಂದು ಬಾಜಪೇಯಿ ಹೇಳಿದ್ದಾರೆ.

ತಾಜ್ ಮಹಲ್‌ನ್ನು ವಕ್ಫ್ ಆಸ್ತಿ ಎಂದು ಘೋಷಿಸಬೇಕೆಂದು ನವೆಂಬರ್ 13ರಂದು ಅಜಂ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಅಜಂ ಖಾನ್‌ರಲ್ಲಿ ಸ್ಪಷ್ಟನೆ ಕೇಳಿದಾಗ, ಇಂಥದೊಂದು ಪುಟ್ಟ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವೇನಿತ್ತು? ಎಂದು ಪ್ರತಿಕ್ರಿಯಿಸಿದ್ದರು.

ತಾಜ್ ಮಹಲ್ ನ ಉಸ್ತುವಾರಿ ವಹಿಸಿಕೊಂಡಿರುವ ಮುತವಾಲಿಗಳು ರಾಜ್ಯ ಸುನ್ನಿ ವಕ್ಫ್ ಬೋರ್ಡ್ ಗೆ ಮನವಿ ಸಲ್ಲಿಸಿ ತಾಜ್ ಮಹಲ್ ನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿ ಅಜಂ ಖಾನ್ ರನ್ನು ಮುಖ್ಯಸ್ಥರನ್ನಾಗಿಸಿ ಎಂದಿದ್ದರು. [ಪ್ರವಾಸಿ ತಾಣ ಆದಾಯ : ತಾಜ್ ಮಹಲ್ ನಂ.1]

ಅದರೆ, ಅಜಂ ಹೇಳಿಕೆ ಸುನ್ನಿ ಹಾಗೂ ಶಿಯಾ ನಡುವಿನ ತಿಕ್ಕಾಟಕ್ಕೆ ನಾಂದಿ ಹಾಡಿತ್ತು. ಅಜಂ ಹೇಳಿಕೆ ಹಾಗೂ ಸುನ್ನಿ ಮುಸ್ಲಿಮರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿಯಾ ಕಾನೂನು ಸಮಿತಿಯ ಮೌಲಾನಾ ಯಸೂಬ್ ಅಬ್ಬಾಸ್ ಅವರು ಮಾತನಾಡಿ, ಮಮ್ತಾಜ್ ಮಹಲ್ ವಿಷಯಕ್ಕೆ ಬಂದರೆ, ಮಮ್ತಾಜ್ ಓರ್ವ ಶಿಯಾ ಪಂಗಡದ ಮಹಿಳೆಯಾಗಿದ್ದಳು. ಅಲ್ಲದೆ ತಾಜ್ ಮಹಲ್ ದೇಶದ ಆಸ್ತಿಯಾಗಿದ್ದು, ಇದನ್ನು ಸುನ್ನಿ ಅಥವಾ ಶಿಯಾ ಸಮಿತಿಗೆ ವಹಿಸಿಕೊಡುವುದು ಸರಿಯಲ್ಲ ಎಂದಿದ್ದಾರೆ.

ಶಿಯಾ ಹಾಗು ಸುನ್ನಿ ಬೋರ್ಡ್ ಗಳಿಂದ ಮಸೀದಿ, ಮದರಸಾಗಳನ್ನು ನಿರ್ವಹಿಸಲು ಅಗುತ್ತಿಲ್ಲ ಇನ್ನು ತಾಜ್ ಮಹಲ್ ಹೊಣೆ ಹೇಗೆ ಹೊರುತ್ತಾರೆ ಎಂದು ಲಕ್ಷ್ಮಿಕಾಂತ್ ಪ್ರಶ್ನಿಸಿದ್ದಾರೆ. (ಪಿಟಿಐ)

English summary
After Azam Khan's demand of handing over the Taj Mahal to UP Waqf Board, the state's BJP chief Laxmi Kant Bajpai on Sunday sought to drag the famed mausoleum into another row by claiming that it was a part of an ancient temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X