ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಯುದ್ಧ ಟ್ಯಾಂಕ್‌ ಟಿ90ಗೆ ಹೊಸ ಕ್ಷಿಪಣಿ ವ್ಯವಸ್ಥೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 21: ಭಾರತೀಯ ಸೇನೆ ತನ್ನ ಕ್ಷಿಪಣಿ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಆಕ್ರಮಣ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಪ್ರಧಾನ ಯುದ್ಧ ಟ್ಯಾಂಕ್‌ ಆಗಿರುವ ಟಿ-90ಗಳಿಗೆ ಮೂರನೇ ತಲೆಮಾರಿನ ಕ್ಷಿಪಣಿ ವ್ಯವಸ್ಥೆ ಜೋಡಿಸಲು ನಿರ್ಧರಿಸಲಾಗಿದೆ.

ಲಡಾಕ್ ನಲ್ಲಿ ಚೀನಾ-ಭಾರತ ಸೈನಿಕರ ಮುಖಾಮುಖಿ ಕ್ಯಾಮೆರಾದಲ್ಲಿ ಸೆರೆಲಡಾಕ್ ನಲ್ಲಿ ಚೀನಾ-ಭಾರತ ಸೈನಿಕರ ಮುಖಾಮುಖಿ ಕ್ಯಾಮೆರಾದಲ್ಲಿ ಸೆರೆ

ಟಿ-90 ಟ್ಯಾಂಕ್ ಗಳಲ್ಲಿ ಲೇಸರ್ ನಿರ್ದೇಶಿತ INVAR ಕ್ಷಿಪಣಿ ವ್ಯವಸ್ಥೆ ಹೊಂದಿದೆ. ಇದರ ಬದಲಿಗೆ ಮೂರನೇ ತಲೆಮಾರಿನ ಸುಧಾರಿತ ಗನ್ ನಿರ್ದೇಶಿತ ಕ್ಷಿಪಣಿ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.

T-90 battle tanks to be armed with 3rd generation missile system

ರಷ್ಯಾ ಮೂಲದ ಟಿ-90 ಟ್ಯಾಂಕ್ ಗಳು ಭಾರತೀಯ ಸೇನೆಯ ಆಕ್ರಮಣ ರೂಪಿಸುವುದರಲ್ಲಿ ಪ್ರಮುಖವಾಗಿದೆ. ಈ ಮೂರನೇ ತಲೆಮಾರಿನ ಕ್ಷಿಪಣಿ 800 ರಿಂದ 850 ಎಂಎಂ ಆಳ(DoP) ಹಾಗೂ ದೂರವನ್ನು ಕ್ರಮಿಸುತ್ತದೆ. ರಾತ್ರಿ ಹಾಗೂ ಹಗಲಿನಲ್ಲಿ 8 ಕಿ.ಮೀ. ದೂರದಲ್ಲಿರುವ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ಭಾರತೀಯ ಸೇನೆಗೆ ಅತ್ಯಾಧುನಿಕ ಹೆಲಿಕಾಪ್ಟರ್ ನೀಡಲಿರುವ ಬೋಯಿಂಗ್ಭಾರತೀಯ ಸೇನೆಗೆ ಅತ್ಯಾಧುನಿಕ ಹೆಲಿಕಾಪ್ಟರ್ ನೀಡಲಿರುವ ಬೋಯಿಂಗ್

ಟಿ-90 ಟ್ಯಾಂಕ್‌ ಗಳಿಗೆ 125 ಎಂಎಂ ಗನ್ ಬ್ಯಾರಲ್ ಅಳವಡಿಕೆಯಿಂದ ಈ ಕ್ಷಿಪಣಿ ಹಾರಿ ಗುರಿ ತಲುಪಲಿದೆ. ಸ್ಥಿರ ಹಾಗೂ ಚರ ಗುರಿಯನ್ನು ಕೂಡ ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಟ್ಯಾಂಕರ್ ಹೊಂದಿದೆ. 1200 ರಿಂದ 1500 ಎಚ್ ಪಿ ಸಾಮರ್ಥ್ಯದ ಇಂಜಿನ್ ಹೊಂದಿದ್ದು, ಹೆಚ್ಚಿನ ಒತ್ತಡ ತಡೆದುಕೊಳ್ಳಬಹುದಾಗಿದೆ.(ಒನ್ಇಂಡಿಯಾ ಸುದ್ದಿ)

English summary
In a bid to enhance its strike capacity, the Indian Army is working on a project to add teeth to the T-90 main battle tanks by arming them with a third generation missile system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X