ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾಧಿಕಾರಿಯಾಗಿ 'ಬ್ರಹ್ಮ' ಬಿಟ್ಟ ಸ್ಥಾನಕ್ಕೆ ಜೈದಿ

By Mahesh
|
Google Oneindia Kannada News

ನವದೆಹಲಿ, ಏ.19: ಭಾರತದ 20ನೇ ಮುಖ್ಯ ಚುನಾವಣಾಧಿಕಾರಿಯಾಗಿ (ಸಿಇಸಿ) ಡಾ. ಸೈಯದ್ ನಸೀಮ್ ಅಹ್ಮದ್ ಜೈದಿ ಅವರು ಭಾನುವಾರ ಅಧಿಕಾರ ಸ್ವೀಕರಿಸಿದ್ದಾರೆ. ಹರಿಶಂಕರ್ ಬ್ರಹ್ಮ ಅವರ ಅಧಿಕಾರ ಅವಧಿ ಶನಿವಾರಕ್ಕೆ ಮುಕ್ತಾಯವಾಗಿತ್ತು.ನಸೀಮ್ ಜೈದಿ ಅವರ ಅವಧಿ 2017ರ ಜುಲೈ ತನಕ ಇದೆ.

ನಜೀಮ್ ತಮ್ಮ 65ನೇ ವಯಸ್ಸಿನಲ್ಲಿ ನಿವೃತ್ತರಾಗಲಿದ್ದಾರೆ. ಚುನಾವಣಾ ಆಯೋಗಕ್ಕೆ ಇನ್ನಿಬ್ಬರು ಆಯುಕ್ತರು ನೇಮಕವಾಗಲಿದ್ದಾರೆ. ಅಲ್ಲಿ ತನಕ ನಜೀಮ್ ಅವರ ಮೇಲೆ ಹೆಚ್ಚಿನ ಹೊಣೆ ಇರುತ್ತದೆ. ಸಾಮಾನ್ಯವಾಗಿ ಚುನಾವಣಾ ಆಯೋಗದ ಆಯುಕ್ತರ ಅವಧಿ ಆರು ವರ್ಷವಾಗಿರುತ್ತದೆ.

Syed Nasim Ahmad Zaidi takes charge as the new Chief Election Commissioner

ಜೈದಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್ ನಿಂದ ಸಾರ್ವಜನಿಕ ಆಡಳಿತ ವಿಷಯದಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದುಕೊಂಡಿದ್ದಾರೆ.

ಉತ್ತರ ಪ್ರದೇಶ ಕೇಡರ್ ನ 1976ನೇ ಬ್ಯಾಚಿನ ಐಎಎಸ್ ಅಧಿಕಾರಿ ನಸೀಮ್. ನಾಗರಿಕ ವಿಮಾನಯಾನ ಖಾತೆಯ ಕಾರ್ಯದರ್ಶಿಯಾಗಿದ್ದರು. ನಸೀಮ್ 2012ರ ಜು.31ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರು. 2012ರ ಆಗಸ್ಟ್ 7ರಿಂದ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ.

ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ನಸೀಮ್, ಚುನಾವಣಾ ಆಯೋಗದ ರೂಪು ರೇಷೆ ಸಂಪೂರ್ಣವಾಗಿ ಬದಲಾಯಿಸಿ 10 ರಿಂದ 15 ವರ್ಷಕ್ಕೆ ಸಲ್ಲುವಂತೆ ಕಾರ್ಯತಂತ್ರ ರೂಪಿಸಲಾಗುವುದು. ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ತಂತ್ರಜ್ಞಾನದ ನೆರವು ಪಡೆಯಲಾಗುವುದು ಎಂದರು. ಜೈದಿ ಅವರ ಸುದ್ದಿಗೋಷ್ಠಿ ಪೂರ್ಣ ಪಾಠ ಇಲ್ಲಿದೆ.

English summary
Dr. Nasim Zaidi has assumed charge as 20th Chief Election Commissioner (CEC) succeeding Sh. H.S. Bramha here today. Sh. H.S. Brahma laid off his office yesterday(Apr.18) after completing his tenure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X