ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುಕುಬುಕು ಸಖಿ, ರೈಲು ಸಖಿ, ಆಹಾ! ಎಷ್ಟೊಂದು ಹೆಸರು !

By Mahesh
|
Google Oneindia Kannada News

ಬೆಂಗಳೂರು, ಫೆ. 25: ವಿಮಾನಯಾನದಲ್ಲಿ ಗಗನಸಖಿಯರಿರುವಂತೆ ಪ್ರಯಾಣಿಕರ ಸೌಲಭ್ಯ ನೋಡಿಕೊಳ್ಳಲು ಎಕ್ಸ್ ಪ್ರೆಸ್ ರೈಲುಗಳಲ್ಲಿ ಸಖಿಯನ್ನು ನೇಮಿಸುವ ಭಾರತೀಯ ರೈಲ್ವೆ ನಿರ್ಧಾರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಕರ್ನಾಟಕದಲ್ಲಿ ಓಡುವ ಎಕ್ಸ್ ಪ್ರೆಸ್ ರೈಲಿನ ಹೋಸ್ಟೆಸ್ಟ್ ಗೆ (ರೈಲು ಸಖಿ) ಏನೆಂದು ಕರೆಯಬಹುದು ಎಂಬ ಪ್ರಶ್ನೆಗೆ ನಮ್ಮ ಓದುಗರು ಭರಪೂರ ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿ- ಆಗ್ರಾ ನಡುವೆ ಗಂಟೆಗೆ 160 ಕಿ,ಮೀ ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಗತಿಮಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾರ್ಯನಿರ್ವಹಿಸಲು 'ಹೋಸ್ಟೆಸ್' ರನ್ನು ಶೀಘ್ರವೇ ನೇಮಿಸಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭವಾಗಲಿದೆ ಎಂಬ ಸುದ್ದಿ ಇದೆ. ಗುರುವಾರ ಮಂಡನೆಯಾದ ರೈಲ್ವೆ ಬಜೆಟ್ ನಲ್ಲಿ ಸುರೇಶ್ ಪ್ರಭು ಅವರು ಈ ಬಗ್ಗೆ ಏನೂ ವಿಶೇಷ ಘೋಷಣೆ ಮಾಡಲಿಲ್ಲ. [ಸುರೇಶ್ ಪ್ರಭು ಅವರ 2016 ರೈಲ್ವೆ ಬಜೆಟ್ ಮುಖ್ಯಾಂಶಗಳು]

ಕಾನ್ಪುರ-ದೆಹಲಿ, ಚಂಡೀಗಢ-ದೆಹಲಿ, ಹೈದರಾಬಾದ್-ಚೆನ್ನೈ, ನಾಗಪುರ್-ಬಿಲಾಸ್‌ಪುರ್, ಗೋವಾ-ಮುಂಬೈ, ನಾಗಪುರ ಸಿಕಂದರಾಬಾದ್ ಮಾರ್ಗಗಳಲ್ಲಿ ಇನ್ನೂ 9 ಇಂಥ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. [ರೈಲ್ವೆ ಬಜೆಟ್ 2016-17 : ಕರ್ನಾಟಕಕ್ಕೆ ಸಿಕ್ಕಿದ್ದೇನು?]

ಕರ್ನಾಟಕದ ರೈಲಿನಲ್ಲಿ ಸಖಿಯರು ಯಾವಾಗ ಕಾಣಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಸದ್ಯಕ್ಕೆ ಓದುಗರು ನೀಡಿರುವ ಹೆಸರುಗಳನ್ನು ರೈಲ್ವೆಸಚಿವಾಲಯ (@RailMinIndia)ಕ್ಕೆ ಕಳಿಸೋಣ. ಹೆಸರು ಹಾಗೂ ಹೆಸರು ನೀಡಿದ ಓದುಗರ ವಿವರ ಮುಂದಿದೆ.

What will be Super fast Train hostesses called in Karnataka

* ಪಟ್ಟೆ ಸಖಿ-ಅಲಿ ಅಹ್ಮದ್
* ವಾಯು ಸಖಿ- ರಮೇಶ್ ಕೋರು
* ಗೈಡ್ ಗರ್ಲ್ಸ್-ಗಣೇಶ್ ನಾಯ್ಡು
* ಭುವನ ಸಖಿ- ಗುರುಬಸವರಾಜ್ ಗುರುಪ್ರೀತು
* ಉಗಿಬಂಡಿ ಸಖಿ-ಮಂಜುನಾಥ್ ಮಂಜು
* ಬಂಡಿ ಬಾಲೆ-ಹೇಮಂತ್ ಜಗದೀಶ್
* ಬಂಡಿ ಸಖಿ- ಸೈಯದ್ ಅಹ್ಮದ್
* ಟ್ರೈನ್ ಕ್ವೀನ್-ಅಶ್ರಫ್ ವೇಣೂರು
* ಕಂಬಿ ಕಿನ್ನರಿ, ಉಗೀ ಹುಡುಗಿ, ಹಳಿ ಇಳೆ, ಚುಕು ಬುಕು ಚೋಕ್ರಿ- ಬಾಲಾಜಿ ವಿ
* ಬೋಗಿ ಸಖಿ- ಸುರೇಶ್ ಕಂಚನ್
* ಟ್ರ್ಯಾಕ್ ಸಖಿ- ಶ್ರೀಕಿ ಎನ್ ರಾಜ್
* ಸುಗಮ ಸಂಚಾರ ಸಖಿ- ಕಲ್ಲೇಶ್ ಗುರುಮಠ್
* ಚುಕುಬುಕು ಫ್ರೀಡಂ ಸಖಿ- ಸಂತೋಷ್ ಕುರುಬ
* ಬೋಗಿ ರಾಣಿ- ಪ್ರತೀಕ್ ದೇಶಪಾಂಡೆ
* ಚುಕು ಬುಕು ಚಿನ್ನಾರಿ- ಸುದರ್ಶನ್ ಶರ್ಮ
* ಚುಕುಬುಕು ಚೋಕರಿ- ಅಶೋಕ್ ಆಚಾರ್ಯ
* ಹಳಿ ಸಖಿ-ವಿಶ್ವನಾಥ್ ಸುಂಕಸಾಲ
* ಕುಲುಕು ಸಖಿ-ಶ್ರೀನಿಧಿ ಟಿಕೆ
* ಯಾನ ಸಖಿ-ಕಾಸರಗೋಡು ಕನ್ನಡಿಗ

ಇದೇ ವಿಷಯ ಫೇಸ್ ಬುಕ್ ನ ಸಕ್ರಿಯವಾಗಿ ಪದ ಕಟ್ಟುವ ಗುಂಪು ಪದಾರ್ಥ ಚಿಂತಾಮಣಿಯಲ್ಲೂ ಭಾರಿ ಚರ್ಚೆಗೊಳಪಟ್ಟಿದೆ.

ಅತಿವೇಗದ ರೈಲುಗಳಲ್ಲಿರುವ ಸಖಿ - ವೇಗಿಣಿ
ನಾಗಾಲ್ಯಾಂಡಿಗೆ ಹೋಗುವ ರೈಲು ಸಖಿ - ನಾಗಿಣಿ
ಮಂತ್ರಾಲಯಕ್ಕೆ ಹೋಗುವ ರೈಲು ಸಖಿ - ಮಂಚಾಲಮ್ಮ
ಬೆಂಗಳೂರಿಗೆ ಹೋಗುವ ರೈಲು ಸಖಿ - ಅಣ್ಣಮ್ಮ ಎಂದು ಮಂಜುನಾಥ್ ಕೊಳ್ಳೆಗಾಲ ಅವರು ಸೂಚಿಸಿದ್ದಾರೆ. ಆಸಕ್ತರು ಇನ್ನಷ್ಟು ಹೆಸರುಗಳನ್ನು ಅಲ್ಲೇ ಹೋಗಿ ನೋಡಿಕೊಳ್ಳಬಹುದು. (ಒನ್ಇಂಡಿಯಾ ಸುದ್ದಿ)

English summary
With the Railways deciding to introduce train hostesses on soon to be launched Delhi-Agra Gatiman Express, the first train in India to run at a speed of 160 kmph. It may soon be reality in Karnataka bound express train also. Our readers suggested names for the hostesses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X